ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಯೋಧನಿಗೂ ತಗುಲಿತು ಕೊರೊನಾ ಸೋಂಕು

|
Google Oneindia Kannada News

ದೆಹಲಿ, ಮಾರ್ಚ್ 18: ಚೀನಾದಿಂದ ಹರಡಿದ ಕೊರೊನಾ ವೈರಸ್ ಈಗ ವಿಶ್ವದ ಪಾಲಿಗೆ ಸಾವಿನ ವೈರಸ್ ಆಗಿ ಪರಿಣಮಿಸಿದೆ. ಭಾರತಕ್ಕೂ ಈ ಸೋಂಕು ತಗುಲಿದ್ದು, ವಿದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸೋಂಕಿತರಿಗೆ ಚಿಕತ್ಸೆ ನೀಡಿದ ವೈದ್ಯರಿಗೂ ಸೋಂಕು ತಗುಲಿದ ಘಟನೆಗಳು ವರದಿಯಾಗಿದೆ.

ಇದೀಗ, ದೇಶ ಕಾಯುವ ಸೈನಿಕನಿಗೆ ಕೊರೊನಾ ಸೋಂಕು ತಗುಲಿದೆ. 34 ವರ್ಷದ ಯೋಧನಿಗೆ ಈ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆಯಂತೆ. ಈ ಮೂಲಕ ಭಾರತೀಯ ಆರ್ಮಿಯಲ್ಲಿ ಮೊದಲ ಕೊರೊನಾ ದಾಖಲಾದ ಮೊದಲ ಕೊರೊನಾ ಕೇಸ್ ಇದಾಗಿದೆ.

ತಂದೆಯಿಂದ ಮಗನಿಗೆ ಸೋಂಕು

ತಂದೆಯಿಂದ ಮಗನಿಗೆ ಸೋಂಕು

ಲೇಹ್‌ನ ಚುಹೋಟ್ ಗ್ರಾಮದ ನಿವಾಸಿಯಾಗಿರುವ 34 ವರ್ಷದ ಸೈನಿಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದಾಗಲೇ ಸೋಂಕಿಗೆ ತುತ್ತಾಗಿದ್ದ ತಂದೆಯ ಜೊತೆ ಸಂಪರ್ಕದಲ್ಲಿದ್ದ ಕಾರಣ ಈಗ ಯೋಧನಿಗೂ ಕೊರೊನಾ ಹರಡಿದೆ. ತೀರ್ಥಯಾತ್ರೆಗೆ ಹೋಗಿದ್ದ ಸೈನಿಕನ ತಂದೆ ಫೆಬ್ರವರಿ 27 ರಂದು ಇರಾನ್‌ನಿಂದ ವಾಪಸ್ ಬಂದಿದ್ದಾರೆ. ಏರ್ ಇಂಡಿಯಾ ಮೂಲಕ ಭಾರತಕ್ಕೆ ಬಂದ ಅವರು ಫೆಬ್ರವರಿ 29 ರವರೆಗೂ ಲಡಾಖ್ ಹಾರ್ಟ್ ಫೌಂಡೇಶನ್‌ನಲ್ಲಿ ದಾಖಲಾಗಿದ್ದರು.

ಇಡೀ ಜಗತ್ತೇ ತಿರುಗಿ ನೋಡುವಂತೆ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ನಿಂತ ಪುಟ್ಟ ದ್ವೀಪ ರಾಷ್ಟ್ರ!ಇಡೀ ಜಗತ್ತೇ ತಿರುಗಿ ನೋಡುವಂತೆ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ನಿಂತ ಪುಟ್ಟ ದ್ವೀಪ ರಾಷ್ಟ್ರ!

ರಜೆಯಲ್ಲಿದ್ದ ಸೈನಿಕ

ರಜೆಯಲ್ಲಿದ್ದ ಸೈನಿಕ

ಫೆಬ್ರವರಿ 25ರಿಂದ ಮಾರ್ಚ್ 1ರ ವರೆಗೂ ಆ ಸೈನಿಕ ರಜೆಯಲ್ಲಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 2ರಂದು ಕರ್ತವ್ಯಕ್ಕೆ ಹಾಜರಾಗಿದ್ದ. ಆದರೆ, ತಂದೆಗೆ ಸೋಂಕಿದೆ ಎಂಬ ಅನುಮಾನದಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾವಹಿಸಲಾಗಿತ್ತು. ಈ ವೇಳೆ ಕುಟುಂಬಕ್ಕೆ ಸಹಾಯ ಮಾಡಲೆಂದು ಗ್ರಾಮದಲ್ಲಿ ಉಳಿದುಕೊಂಡಿದ್ದ ಎಂದು ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.

ತಂದೆಗೆ ಪಾಸಿಟಿವ್, ಮಗನ ಮೇಲೆ ಶಂಕೆ

ತಂದೆಗೆ ಪಾಸಿಟಿವ್, ಮಗನ ಮೇಲೆ ಶಂಕೆ

ಇರಾನ್‌ನಿಂದ ಬಂದ ವ್ಯಕ್ತಿಯ ಮೇಲೆ ಸೋಂಕು ಶಂಕೆ ಇತ್ತು. ಬಳಿಕ, ಮಾರ್ಚ್ 6 ರಂದು ಸೋಂಕು ಇರೋದು ಖಚಿತವಾಗಿತ್ತು. ಇದಾದ ಒಂದು ದಿನದ ಬಳಿಕ ಮಗ (ಸೈನಿಕ) ನ ಮೇಲೆ ನಿಗಾವಹಿಸಲಾಯಿತು. ತಂದೆ ಜೊತೆ ಸಂಪರ್ಕದಲ್ಲಿದ್ದ ಕಾರಣ ಸೋಂಕು ಹರಡಿರಬಹುದು ಎಂಬ ಅನುಮಾನ ಬಂತು. ಇದೀಗ, ಮಾರ್ಚ್ 16 ರಂದು ಆ ಯೋಧನಿಗೂ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ಕೊರೊನಾ ಐಸೋಲೇಶನ್ ವಾರ್ಡ್ ರೋಗಿಗಳಿಗೆ ಕೇರಳದಲ್ಲಿ ನೀಡಲಾಗುತ್ತಿರುವ ಆಹಾರವೇನು?ಕೊರೊನಾ ಐಸೋಲೇಶನ್ ವಾರ್ಡ್ ರೋಗಿಗಳಿಗೆ ಕೇರಳದಲ್ಲಿ ನೀಡಲಾಗುತ್ತಿರುವ ಆಹಾರವೇನು?

ಪತ್ನಿ, ಮಕ್ಕಳ ಮೇಲೂ ನಿಗಾ

ಪತ್ನಿ, ಮಕ್ಕಳ ಮೇಲೂ ನಿಗಾ

ಇದೀಗ, ಯೋಧನ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಸಹೋದರಿಯ ಮೇಲೆ ನಿಗಾ ವಹಿಸಲಾಗಿದೆ. ಇವರಿಗೂ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಇವರನ್ನು ಸೋನಮ್ ನರ್ಬೂ ಮೆಮೊರಿಯಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಭಾರತದಲ್ಲಿ ಒಟ್ಟು 147 ಕೇಸ್

ಭಾರತದಲ್ಲಿ ಒಟ್ಟು 147 ಕೇಸ್

ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್‌ ಭಾರತದಲ್ಲೂ ರುದ್ರನರ್ತನ ಮಾಡುತ್ತಿದೆ. ಇದುವರೆಗೂ 147 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 122 ಜನರು ಭಾರತೀಯರು ಮತ್ತು 25 ಜನರು ವಿದೇಶಿರಾಗಿದ್ದಾರೆ. ಭಾರತಕ್ಕೆ ಬರುವ ಬಹುತೇಕ ವಿದೇಶಿ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೊರೊನಾ ದಾಳಿಯಿಂದ ಸೇಫ್ ಆಗಿರುವ ರಾಜ್ಯಗಳು ಯಾವುದುಕೊರೊನಾ ದಾಳಿಯಿಂದ ಸೇಫ್ ಆಗಿರುವ ರಾಜ್ಯಗಳು ಯಾವುದು

English summary
34 year old soldier tests Coronavirus positive. its first case in Indian army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X