• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಯಣದ ನಡುವೆ ಚಂದ್ರಯಾನ2 ಕಂಡ ಭೂಮಿಯ 'ಬ್ಯೂಟಿಫುಲ್' ಚಿತ್ರಗಳು

|

ಬೆಂಗಳೂರು, ಆಗಸ್ಟ್ 4: ಯಶಸ್ವಿಯಾಗಿ ಚಂದ್ರಲೋಕದತ್ತ ಪ್ರಯಾಣ ಬೆಳೆಸಿರುವ ದೇಶದ ಹೆಮ್ಮೆಯ ಚಂದ್ರಯಾನ-2 ಮಹತ್ವದ ಮೈಲಿಗಲ್ಲು ದಾಟಿದೆ.

ಪಯಣದ ನಡುವೆ ಚಂದ್ರಯಾನ2 ಕಂಡ ಭೂಮಿಯ ಸುಂದರ ಚಿತ್ರಗಳನ್ನು, ಚಿತ್ರಗಳುಳ್ಳ ವಿಡಿಯೋವೊಂದರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಭಾನುವಾರದಂದು ಟ್ವೀಟ್ ಮಾಡಿದೆ.

ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22ರಂದು ಉಡಾವಣೆಗೊಂಡಿದ್ದ ಚಂದ್ರಯಾನ-2 ಈಗ ಚಂದ್ರನ ಕಕ್ಷೆಯತ್ತ ಸಾಗುತ್ತಿದೆ. ಪಯಣದ ನಡುವೆ ಆಗಸ್ಟ್ 03ರಂದು ಉಪಗ್ರಹಕ್ಕೆ ಅಳವಡಿಸಿರುವ ಅತ್ಯಾಧುನಿಕ ಕ್ಯಾಮೆರಾ ತೆಗೆದಿರುವ ಭೂಮಿಯ ಮೊದಲ ಚಿತ್ರಗಳು ಇಂದು ಎಲ್ಲೆಡೆ ಲಭ್ಯವಾಗಿದೆ.

ರೈತ ಪುತ್ರ 'ಸೂರ್ಯಕಾಂತ' ಚಂದ್ರಯಾನ2ರ 'ಅಯಸ್ಕಾಂತ'

"ಭೂಮಿಯ ಸುತ್ತಲೂ ಸುತ್ತುತ್ತಲೇ ಉಪಗ್ರಹವು ಕಕ್ಷೆಯೊಂದರ ಒಳ ಪ್ರವೇಶಿಸಿ ಚಂದ್ರನಡೆಗೆ ಸಾಗುವ ಪ್ರಕ್ರಿಯೆ ಈಗ ನಾಲ್ಕನೇ ಹಂತ ಮುಟ್ಟಿದೆ. ಹೀಗಾಗಿ, ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಲ್​ಐ4 ಕ್ಯಾಮರಾ ಮೂಲಕ ಭೂನಿಯಂತ್ರಣ ಕೇಂದ್ರಕ್ಕೆ ಭೂಮಿಯ ಚಿತ್ರಗಳು ಲಭ್ಯವಾಗುತ್ತಿದೆ" ಇಸ್ರೋ ಹೇಳಿದೆ.

ಚಂದ್ರಯಾನ2 ಲ್ಯಾಂಡರ್ ವಿಕ್ರಮ್ ಆಗಸ್ಟ್ 03ರಂದು ರಾತ್ರಿ 11.59 ಗಂಟೆಯಿಂದ 12.07ರ ಅವಧಿ ಸುಮಾರಿಗೆ ಎಲ್ 14 ಕ್ಯಾಮೆರಾದಿಂದ ತೆಗೆಯಲ್ಪಟ್ಟ ಚಿತ್ರಗಳು ಇದಾಗಿದೆ.

ಚಂದ್ರಯಾನ-2 ಉದ್ದೇಶವೇನು?

ಚಂದ್ರಯಾನ-2 ಉದ್ದೇಶವೇನು?

ಚಂದ್ರಯಾನ-2 ಉದ್ದೇಶವೇನು?: ಚಂದ್ರನ ಮೇಲ್ಮೈನ ವಿಶ್ಲೇಷಣೆ, ಸ್ಥಳಾಕೃತಿಯ ವಿವರಣೆ, ವಾತಾವರಣ, ಖನಿಜ ಸಂಪತ್ತು, ಪ್ರಾಕೃತಿಕ ಸಂಪನ್ಮೂಲಗಳು, ಹೈಡ್ರಾಕ್ಸಿಲ್‌ ಮತ್ತು ನೀರು ಅಥವಾ ಮಂಜು ಎಷ್ಟಿದೆ ಎಂಬುದನ್ನು ಪತ್ತೆಹಚ್ಚುವುದು.

ಚಂದ್ರನ ಮೇಲ್ಮೈನಲ್ಲಿ ನೀರು ಅಥವಾ ಮಂಜು ಇದೆಯೇ ಎಂಬ ಸ್ಪಷ್ಟಚಿತ್ರಣ ಈ ಬಾರಿ ಲಭ್ಯವಾಗಲಿದೆ. ಜೊತೆಗೆ ಲಭ್ಯವಿರುವ ಖನಿಜದ ಕುರಿತೂ ಮಾಹಿತಿ ಲಭ್ಯವಾಗಲಿದ್ದು, ಹೈಡೆಫಿನಿಶನ್‌ ಕ್ಯಾಮೆರಾ ಇರುವುದರಿಂದ ಮಣ್ಣು ಮತ್ತು ಬಂಡೆಗಳ ಸ್ಪಷ್ಟಫೋಟೋಗಳು ದೊರೆಯಲಿವೆ.

ಅಧ್ಯಯನ ನೌಕೆ ರೋವರ್

ಅಧ್ಯಯನ ನೌಕೆ ರೋವರ್

ಅಧ್ಯಯನ ನೌಕೆ: ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 10ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಗ್ಯಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ.

2008ರ ಅಕ್ಟೋಬರ್‌ನಲ್ಲಿ ಇಸ್ರೋ ತನ್ನ ಮೊದಲ ಯೋಜನೆ ಚಂದ್ರಯಾನ-1ಅನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿತ್ತು. ಅದರಲ್ಲಿ 11 ಅಧ್ಯಯನ ಉಪಕರಣಗಳಿದ್ದವು. ಅಮೆರಿಕದ ಒಂದು ಅಧ್ಯಯನ ಉಪಕರಣವನ್ನೂ ಇದು ಒಳಗೊಂಡಿತ್ತು. ಈ ನೌಕೆಯು ಚಂದ್ರನಲ್ಲಿ ಹಿಮದ ನೀರು ಇರುವುದನ್ನು ಖಚಿತಪಡಿಸಿತ್ತು. ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ.

ಚಂದ್ರನ ಮೇಲಿಳಿಯುವ ರೋವರ್‌

ಚಂದ್ರನ ಮೇಲಿಳಿಯುವ ರೋವರ್‌

ಚಂದ್ರನ ಮೇಲಿಳಿಯುವ ರೋವರ್‌ ಸುಮಾರು 20 ಕೆ.ಜಿ. ತೂಕವಿದ್ದು, ಸೌರಶಕ್ತಿ ಮೂಲಕ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ 6 ಚಕ್ರಗಳಿದ್ದು, ಚಂದ್ರನ ಮೇಲ್ಮೈಯಲ್ಲಿ 100-200 ಮೀಟರ್‌ ಕ್ರಮಿಸಿ ಅಲ್ಲಿ ದೊರಕುವ ಕಲ್ಲು ಮತ್ತು ಮಣ್ಣಿನ ಮಾದರಿ ಪಡೆದು ವಿಶ್ಲೇಷಿಸಿ ಭೂಮಿಗೆ ಆರ್ಬಿಟರ್‌ ಮೂಲಕ ಡೇಟಾ ಮತ್ತು ಫೋಟೋವನ್ನು ಕಳಿಸುತ್ತದೆ.

ಚಂದ್ರಯಾನ -2ರ ಆರ್ಬಿಟರ್‌ ತೂಕ 1,400 ಕೆ.ಜಿ. ಮತ್ತು ಲ್ಯಾಂಡರ್‌ ತೂಕ 1250 ಕೆ.ಜಿ. ಇದೆ. ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಉದ್ದೇಶಿಸಿರುವ ಚಂದ್ರನ ಪರಿಶೋಧನಾ ಅಭಿಯಾನವಾಗಿದ್ದು, ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಅಭಿಯಾನವನ್ನು ಉಡಾವಣೆ ಮಾಡಲಾಗಿದೆ.

ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ

ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ

ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ. ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-2 ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.

English summary
Indian Space Research Organisationon on Sunday released beautiful pictures of Earth captured by India's moon mission Chandrayaan-2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X