ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಮೊದಲ ಚಂದ್ರಗ್ರಹಣ: ನಿಮಗೆ ತಿಳಿದಿರಬೇಕಾದ ಸಂಗತಿಗಳು

|
Google Oneindia Kannada News

ಬೆಂಗಳೂರು, ಜನವರಿ 4: ಕಳೆದ ದಶಕದ ಕೊನೆಯ ಸೂರ್ಯಗ್ರಹಣವು ಡಿ. 26ರಂದು ದರ್ಶನವಾದ ಬಳಿಕ ಈ ವರ್ಷ ಮತ್ತು ದಶಕದ ಮೊದಲ ಚಂದ್ರಗ್ರಹಣದ ವೀಕ್ಷಣೆಗೆ ಕುತೂಹಲ ಮೂಡಿದೆ. 2020ರ ಮೊದಲ ಚಂದ್ರಗ್ರಹಣ ಜ.10ರಂದು ಉಂಟಾಗಲಿದೆ. ಚಂದ್ರಗ್ರಹಣವು ಸುಮಾರು ನಾಲ್ಕು ಗಂಟೆ ಐದು ನಿಮಿಷದ ಅವಧಿಯವರೆಗೆ ಇರಲಿದ್ದು, ಭಾರತದಲ್ಲಿ ಗೋಚರವಾಗಲಿದೆ.

ಈ ಚಂದ್ರಗ್ರಹಣವನ್ನು 'ತೋಳ ಚಂದ್ರಗ್ರಹಣ' ಎಂದೂ ಕರೆಯಲಾಗುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಉಂಟಾಗುವ ಈ ವಿದ್ಯಮಾನ, ವೀಕ್ಷಣೆಗೆ ಅತ್ಯಾಕರ್ಷಕವಾಗಿರುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಪಡಿಸುತ್ತದೆ.

ವಿಡಿಯೋ: ವಿಜ್ಞಾನವೋ? ಪವಾಡವೋ? ಉರುಳಿಬಿದ್ದ ಒನಕೆವಿಡಿಯೋ: ವಿಜ್ಞಾನವೋ? ಪವಾಡವೋ? ಉರುಳಿಬಿದ್ದ ಒನಕೆ

ವರದಿಗಳ ಪ್ರಕಾರ ಭಾರತದಲ್ಲಿ ಚಂದ್ರಗ್ರಹಣವು ರಾತ್ರಿ 10.37ರಿಂದ ನಸುಕಿನ 2.42ರವರೆಗೂ ಸಂಭವಿಸಲಿದೆ. ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 90ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗುತ್ತದೆ.

ಭಾರತದ ಎಲ್ಲ ನಗರಗಳಲ್ಲಿಯೂ ಗೋಚರ

ಭಾರತದ ಎಲ್ಲ ನಗರಗಳಲ್ಲಿಯೂ ಗೋಚರ

ಜ. 10ರಂದು ಸಂಭವಿಸಲಿರುವ ಈ ಅಪರೂಪದ ವಿದ್ಯಮಾನವು ಅಮೆರಿಕದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಅಲ್ಲಿ ಹಗಲಿನ ವೇಳೆ ಚಂದ್ರಗ್ರಹಣ ಉಂಟಾಗಲಿದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿನ ದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಈ ಖಂಡಗಳಲ್ಲದೆ ಆಸ್ಟ್ರೇಲಿಯಾದಲ್ಲಿ ಕೂಡ ಚಂದ್ರಗ್ರಹಣ ಕಾಣಿಸಲಿದೆ. ಭಾರತದ ಬಹುತೇಕ ಎಲ್ಲ ನಗರಗಳಲ್ಲಿಯೂ ಇದನ್ನು ನೋಡಬಹುದಾಗಿದೆ.

ಬರಿಗಣ್ಣಿನಿಂದ ನೋಡಬಹುದು

ಬರಿಗಣ್ಣಿನಿಂದ ನೋಡಬಹುದು

ಆಗಸದಲ್ಲಿ ನಡೆಯಲಿರುವ ಗ್ರಹಣದಂತಹ ಘಟನೆಗಳು ಜನರಲ್ಲಿ ಯಾವಾಗಲೂ ಕುತೂಹಲ ಮತ್ತು ಆತಂಕ ಮೂಡಿಸುತ್ತದೆ. ಆದರೆ ಸೂರ್ಯಗ್ರಹಣದಂತೆ ಚಂದ್ರಗ್ರಹಣ ಅಪಾಯಕಾರಿಯಲ್ಲ. ಇದನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಇದು ಕೇವಲ ಆಕಾಶದಲ್ಲಿ ಜರಗುವ ವಿದ್ಯಮಾನವಾದರೂ ಭಾರತೀಯರು ಅದರ ಕುರಿತು ಅನೇಕ ಧಾರ್ಮಿಕ ಮತ್ತು ಆಚರಣೆಯ ನಂಬಿಕೆಗಳನ್ನು ಹೊಂದಿದ್ದಾರೆ.

ಚಂದ್ರಗ್ರಹಣವು ಉದ್ಯೋಗ, ವ್ಯವಹಾರ, ಆರೋಗ್ಯ ಮುಂತಾದವುಗಳಿಗೆ ಶುಭಕರ ಎಂದು ಕೆಲವರು ಭಾವಿಸಿದ್ದರೆ, ಇನ್ನು ಕೆಲವರು ಗ್ರಹಣವು ಅಮಂಗಳಕರ ಎಂದು ಪರಿಗಣಿಸಿದ್ದಾರೆ. ಇದೇ ರೀತಿಯ ಅರೆನೆರಳಿನ ಚಂದ್ರಗ್ರಹಣಗಳು ಈ ವರ್ಷ ಜೂನ್ 5, ಜುಲೈ 5 ಮತ್ತು ನವೆಂಬರ್ 30ರಂದು ಸಂಭವಿಸಲಿವೆ.

ಕಲಬುರಗಿ: ಗ್ರಹಣ ಕೇಡೆಂದು ಮಕ್ಕಳನ್ನು ತಿಪ್ಪೆಯಲ್ಲಿ ಹೂತರುಕಲಬುರಗಿ: ಗ್ರಹಣ ಕೇಡೆಂದು ಮಕ್ಕಳನ್ನು ತಿಪ್ಪೆಯಲ್ಲಿ ಹೂತರು

ಅರೆನೆರಳಿನ ಚಂದ್ರಗ್ರಹಣ

ಅರೆನೆರಳಿನ ಚಂದ್ರಗ್ರಹಣ

ಚಂದ್ರಗ್ರಹಣದಲ್ಲಿ ಮೂರು ವಿಧಗಳಿವೆ. ಸಂಪೂರ್ಣ, ಭಾಗಶಃ ಮತ್ತು ಅರೆನೆರಳಿನ ಚಂದ್ರಗ್ರಹಣ. ಈ ಬಾರಿ ಸಂಭವಿಸುವುದು ಅರೆನೆರಳಿನ ಚಂದ್ರಗ್ರಹಣವಾಗಿದೆ. ಇಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಸಂಪೂರ್ಣವಾಗಿ ಒಂದೇ ನೇರದಲ್ಲಿ ಬರುವುದಿಲ್ಲ. ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಪಡಿಸುತ್ತದೆ. ಜತೆಗೆ ಚಂದ್ರನ ಸಂಪೂರ್ಣ ಅಥವಾ ಕೆಲವು ಭಾಗವನ್ನು ಮುಚ್ಚುತ್ತದೆ. ಹೊರಭಾಗವನ್ನು ತನ್ನ ನೆರಳಿನಿಂದ ಆವರಿಸುತ್ತದೆ. ಭೂಮಿಯ ನೆರಳಿನ ದಟ್ಟ ಭಾಗಕ್ಕಿಂತಲೂ ಇದು ಅಸ್ಪಷ್ಟವಾಗಿರುತ್ತದೆ.

ತೋಳ ಚಂದ್ರಗ್ರಹಣ

ತೋಳ ಚಂದ್ರಗ್ರಹಣ

ಈ ಚಂದ್ರಗ್ರಹಣವು ಬೂದು ಬಣ್ಣದಲ್ಲಿ ಕಾಣಿಸುತ್ತದೆ. ಹೀಗಾಗಿ ಇದಕ್ಕೆ ತೋಳ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಮುಂದಿನ ಸಂಪೂರ್ಣ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ. ಇದು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಸಾಗರ ಮತ್ತು ಅಮೆರಿಕದಲ್ಲಿ ಕಾಣಿಸಲಿದೆ. ಇದರ ಬಳಿಕ 2021ರ ನವೆಂಬರ್ 19ರಂದು ಭಾಗಶಃ ಚಂದ್ರಗ್ರಹಣ ಉಂಟಾಗಲಿದೆ. ಇದು ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.

ಹಾಸನ : ಗ್ರಹಣ ನೋಡುತ್ತಾ ಉಪ್ಪಿಟ್ಟು, ಪುರಿ ಸವಿದ ಜನರುಹಾಸನ : ಗ್ರಹಣ ನೋಡುತ್ತಾ ಉಪ್ಪಿಟ್ಟು, ಪುರಿ ಸವಿದ ಜನರು

ಈ ವರ್ಷ ಎರಡು ಸೂರ್ಯಗ್ರಹಣಗಳು

ಈ ವರ್ಷ ಎರಡು ಸೂರ್ಯಗ್ರಹಣಗಳು

2020ರಲ್ಲಿ ಅರೆನೆರಳಿನ ಚಂದ್ರಗ್ರಹಣವಲ್ಲದೆ, ಜೂನ್ 21ರಂದು ಉಂಗುರಾಕಾರದ ಸೂರ್ಯಗ್ರಹಣವೂ ಉಂಟಾಗಲಿದೆ. ಇದು ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಉತ್ತರ ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರಗಳಲ್ಲಿ ಗೋಚರವಾಗಲಿದೆ.

ಹಾಗೆಯೇ ಈ ವರ್ಷ ಸಂಪೂರ್ಣ ಸೂರ್ಯಗ್ರಹಣ ಕೂಡ ಉಂಟಾಗಲಿದೆ. ಡಿ. 14ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವು ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಕಾಣಿಸಲಿದೆ.

English summary
First Lunar Eclipse of 2020 will occur on Jauary 10. The Wolf moon eclipse will be visible from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X