ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ

|
Google Oneindia Kannada News

ಜಾಮ್ನಗರ್, ಫೆಬ್ರವರಿ 22: ಭಾರತೀಯ ವಾಯುಸೇನೆಯಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಯುದ್ಧ ವಿಮಾನದ ಮೊಟ್ಟ ಮೊದಲ ಮಹಿಳಾ ಪೈಲೆಟ್ ಆಗಿ, ಗುಜರಾತಿನ ಜಾಮ್ನಗರದಲ್ಲಿ ಮಿಗ್ 21 ಬಿಸಾನ್ ವಿಮಾನ ಚಲಾಯಿಸುವ ಮೂಲಕ ದಾಖಲೆ ಬರೆದಿದ್ದಾರೆ ಅವನಿ ಚತುರ್ವೇದಿ.

2016 ರ ಜೂನ್ ನಲ್ಲಿ ಭಾರತೀಯ ವಾಯುಸೇನೆ ಗೆ ಆಯ್ಕೆಯಾದ ಭಾವನಾ ಕಾಂತ್, ಮೋಹನಾ ಸಿಂಗ್ ಸೇರಿದಂತೆ ಮೂವರು ಮಹಿಳಾ ಯುದ್ಧ ವಿಮಾನ ಪೈಲೆಟ್ ಗಳಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನ ನಡೆಸಿದ ಕೀರ್ತಿ ಅವನಿ ಅವರದು.

ಜೂ.18ಕ್ಕೆ ಯುದ್ಧ ವಿಮಾನ ಏರಲಿದ್ದಾರೆ 3 ಮಹಿಳಾ ಪೈಲಟ್ಜೂ.18ಕ್ಕೆ ಯುದ್ಧ ವಿಮಾನ ಏರಲಿದ್ದಾರೆ 3 ಮಹಿಳಾ ಪೈಲಟ್

ಇದು ಭಾರತೀಯ ವಾಯುಸೇನೆಗೆ ಮಾತ್ರವಲ್ಲ, ಇದೀ ಭಾರತಕ್ಕೆ ಅದರಲ್ಲೂ ಮಹಿಳಾ ಸಮುದಾಯಕ್ಕೆ ಕೀರ್ತಿ ತರುವಂಥ ವಿಷಯ ಎಂದು ಏರ್ ಕಮಾಂಡರ್ ಪ್ರಶಾಂತ್ ದೀಕ್ಷಿತ್ ಹೆಮ್ಮೆಯಿಂದ ಹೇಳಿದ್ದಾರೆ.

First Indian woman fighter pilot Avani Chaturvedi goes solo

ವಿಶ್ವದಲ್ಲಿ ಬ್ರಿಟನ್, ಅಮೆರಿಕ, ಇಸ್ರೇಲ್ ಮತ್ತು ಪಾಕಿಸ್ತಾನವನ್ನು ಬಿಟ್ಟರೆ ಭಾರತದಲ್ಲಿ ಮಾತ್ರವೇ ಮಹಿಳಾ ಫೈಟರ್ ಪೈಲೆಟ್ ಗಳಿರುವುದು!

ಮಧ್ಯಪ್ರದೇಶದ ರೆವಾ ಜಿಲ್ಲೆಯವರಾದ ಅವನಿ, ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದವರು. ಸೇನೆಯಲ್ಲಿರುವ ಸಹೋದರನಿಂದ ಸ್ಫೂರ್ತಿ ಪಡೆದ ಅವರು ಭಾರತೀಯ ವಾಯುಸೇನೆಗೆ ಸೇರಲು ಉತ್ಸಾಹ ತೋರಿದರು.

ತಂದೆ ದಿನಕರ್ ಚತುರ್ವೇದಿ ಮಧ್ಯಪ್ರದೇಶ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

English summary
Flying Officer Avani Chaturvedi has created history by becoming the first Indian woman fighter pilot to fly solo. Chaturvedi flew a MiG-21 bison in her first training solo sortie, in Jamnagar, Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X