ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 16ರಂದು ಅಪ್ಪಳಿಸಲಿದೆ ಚಂಡಮಾರುತ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷೆ

|
Google Oneindia Kannada News

ನವದೆಹಲಿ, ಮೇ 11: ವರ್ಷದ ಮೊದಲ ಚಂಡಮಾರುತ ಮೇ 16ರಂದು ಅರಬ್ಬಿಸಮುದ್ರದಲ್ಲಿ ರೂಪುಗೊಳ್ಳಲಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮೇ 14 ರಂದು ಬೆಳಗ್ಗೆ ಅರಬ್ಬಿಸಮುದ್ರದ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳು ಸಾಧ್ಯತೆ ಇರುವುದರಿಂದ ವರ್ಷದ ಮೊದಲ ಚಂಡಮಾರುತ ಬೀಸಬಹುದು ಎಂದು ಅಂದಾಜಿಸಲಾಗಿದೆ.

ಮೇ 15ರವರೆಗೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಮೇ 15ರವರೆಗೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ

ಈ ಚಂಡಮಾರುತಕ್ಕೆ ತೌಕ್ಟೆ ಎಂದು ಹೆಸರಿಡಲಾಗಿದೆ. ಈ ಚಂಡಮಾರುತಕ್ಕೆ ಮಯನ್ಮಾರ್ ಹೆಸರನ್ನಿಟ್ಟಿದೆ. ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರಗಳ ಕಾಲ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

First Cyclone Of 2021 Likely To Form Over Arabian Sea On May 16

ಮೇ 16ರಷ್ಟೊತ್ತಿಗೆ ಚಂಡಮಾರುತ ತೀವ್ರವಾಗುವ ನಿರೀಕ್ಷೆ ಇದೆ, ಮೇ 15 ರಂದು ಗೋವಾ ಹಾಗೂ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ.

ಗಾಳಿಯು ಪ್ರತಿ ಗಂಟೆಗೆ 40-50 ಕಿ,ಮೀ ವೇಗದಲ್ಲಿ ಚಲಿಸುತ್ತಿದೆ, ಚಂಡಮಾರುತವು ಮಾಲ್ಡೀವ್ಸ್, ಲಕ್ಷದ್ವೀಪಗಳಿಗೆ ಗುರುವಾರ ಅಪ್ಪಳಿಸುವ ನಿರೀಕ್ಷೆ ಇದ್ದು, ಮಹಾರಷ್ಟ್ರ, ಕರ್ನಾಟಕ, ಕೇರಳ, ಗೋವಾದ ಸಮುದ್ರ ತೀರಗಳಲ್ಲಿ ಇದೇ ರೀತಿಯ ಗಾಳಿ ಬೀಸುವ ನಿರೀಕ್ಷೆ ಇದ್ದು ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಆಗ್ನೇಯ ಅರಬ್ಬಿ ಸಮುದ್ರದಿಂದ ಚಂಡಮಾರುತವು ಮೇ 16ರಷ್ಟೊತ್ತಿಗೆ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ.ಹೀಗಾಗಿ ಮೇ 16ರ ಬಳಿಕ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ ಎನ್ನಲಾಗಿದೆ.

English summary
The first cyclonic storm of the year could be brewing as a low-pressure area is very likely to form over the southeast Arabian Sea around May 14 morning that is likely to intensify gradually into a cyclonic storm over the east-central Arabian Sea around May 16, and continue to move north-northwestwards, the IMD has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X