ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಇಲ್ಲದ ಏಕೈಕ ತಾಣವಾಗಿದ್ದ ಲಕ್ಷದ್ವೀಪದಲ್ಲಿ ಮೊದಲ ಪ್ರಕರಣ ಪತ್ತೆ

|
Google Oneindia Kannada News

ತಿರುವನಂತಪುರಂ, ಜನವರಿ 19: ಕೊರೊನಾ ಸೋಂಕು ಕಾಣಿಸಿಕೊಳ್ಳದ ಭಾರತದ ಏಕೈಕ ತಾಣ ಲಕ್ಷದ್ವೀಪದಲ್ಲಿ ಸೋಮವಾರ ಮೊದಲ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳದ ಅದ್ಭುತ ದ್ವೀಪ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳದ ಅದ್ಭುತ ದ್ವೀಪ

ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ವರ್ಷ ಕಳೆದ ನಂತರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಸೋಂಕಿನ ಪ್ರಕರಣ ಕಂಡುಬಂದಿದೆ. ಇದುವರೆಗೂ ಲಕ್ಷದ್ವೀಪದಲ್ಲಿ ಒಂದೇ ಒಂದು ಕೊರೊನಾ ಪ್ರಕರಣವೂ ದಾಖಲಾಗಿರಲಿಲ್ಲ.

 ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ್ದ ನಾಲ್ವರು ಶಾಸಕರಿಗೆ ಕೊರೊನಾ ಸೋಂಕು ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ್ದ ನಾಲ್ವರು ಶಾಸಕರಿಗೆ ಕೊರೊನಾ ಸೋಂಕು

ಭಾರತೀಯ ಮೀಸಲು ಪಡೆಗೆ ಸೇರಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕೊಚ್ಚಿಯಿಂದ ಕರವಟ್ಟಿಗೆ ಜನವರಿ 3ರಂದು ತಲುಪಿದ್ದರು ಎಂದು ತಿಳಿದುಬಂದಿದೆ. ಕೊಚ್ಚಿಯಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಿದ ಎರಡು ವಾರಗಳ ನಂತರ ಈ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ.

First Coronavirus Case Reported In Lakshadweep

ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ದ್ವೀಪಕ್ಕೆ ಸಾರಿಗೆ ಸಂಪರ್ಕವನ್ನು ನಿಷೇಧಿಸಲಾಗಿದೆ. ಈ ಮುನ್ನವೂ ದ್ವೀಪಕ್ಕೆ ಬರುವ 48 ಗಂಟೆಗಳ ಮುನ್ನ ಕೊರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂಬ ನಿಯಮ ಹೇರಲಾಗಿತ್ತು.

English summary
A year after the outbreak of the Covid-19 pandemic in India, the first coronavirus case was reported in the Lakshadweep Islands,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X