ಗೋವಾ ಏರ್ ಪೋರ್ಟ್ ನಲ್ಲಿ ಯುದ್ಧ ವಿಮಾನ ಪತನ, ತಪ್ಪಿದ ಅನಾಹುತ

Posted By:
Subscribe to Oneindia Kannada

ಪಣಜಿ, ಜನವರಿ 03: ಗೋವಾ ಏರ್ ಪೋರ್ಟ್ ನಲ್ಲಿ ಇಂದು (ಜನವರಿ 3) ಯುದ್ಧ ವಿಮಾನ ವೊಂದು ಟೇಕ್ ಆಫ್ ಆಗುತ್ತಿದ್ದ ವೇಳೆ ಪತನಗೊಂಡಿದ್ದ, ಭಾರೀ ಅನಾಹುತವೊಂದು ತಪ್ಪಿದೆ.

ಮಿಗ್-29k ಎಂಬ ಯುದ್ಧ ವಿಮಾನವು ಗೋವಾ ಏರ್ ಪೋರ್ಟ್ ನಲ್ಲಿ ಟೇಕ್ ಆಫ್ ಆಗುತ್ತಿದ್ದ ವೇಳೆ ರನ್ ವೇ ಬಿಟ್ಟು ಬೇರೆಡೆಗೆ ಚಲಿಸಿ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಓರ್ವ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Fire on MiG-29K aircraft being extinguished at Goa airport today

ಟೇಕ್ ಆಫ್ ಆಗುತ್ತಿದ್ದ ಆಗುತ್ತಿದ್ದಾಗ ರನ್ ವೇ ವೇಳೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಯಾವುದೇ ಪ್ರಾಣಾಯ ಸಂಭವಿಸಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire on MiG-29K aircraft being extinguished at Goa airport on january 3, after the aircraft went off runway while taking off and caught fire.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ