ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಬೆಂಕಿ ಅವಗಢ, ಭಾರೀ ಸಾವುನೋವು

ಮಹಿಳೆಯರು ಸೇರಿ ಅನೇಕ ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಕಾರ್ಖಾನೆಯ ಕಟ್ಟಡದಲ್ಲಿಯೇ ಸಿಲುಕಿದ್ದಾರೆ. ಪ್ಲಾಸ್ಟಿಕ್‌ ಕಾರ್ಖಾನೆ, ಪಟಾಕಿ ಸಂಗ್ರಹ ಹಾಗೂ ತೈಲ ಸಂಗ್ರಹ ಮಾಡಿದ್ದ ಜಾಗದಲ್ಲಿ ಬೆಂಕಿ ಆವರಿಸಿದೆ. ಸ್ಥಳದಲ್ಲಿ 20 ಅಗ್ನಿಶಾಮಕ ವಾಹನಗಳು

By Balaraj Tantry
|
Google Oneindia Kannada News

ನವದೆಹಲಿ, ಜ 20: ರಾಜಧಾನಿ ದೆಹಲಿಯ ಉತ್ತರ ಭಾಗದಲ್ಲಿರುವ ಭಾವನಾ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ರಾತ್ರಿ (ಜ 20) ಪ್ಲಾಸ್ಟಿಕ್ ಕಂಪೆನಿಯ ಗೋದಾಮುವೊಂದರಲ್ಲಿ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಹದಿನ್ನೇಳಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಎರಡು ಮಹಡಿಯ ಕಟ್ಟಡದಲ್ಲಿ ಶಾರ್ಟ ಸರ್ಕ್ಯೂಟ್ ಸಂಭವಿಸಿ ಈ ದುರಂತ ಸಂಭವಿಸಿದ್ದು, ದೆಹಲಿ ಸರಕಾರ ತನಿಖೆಗೆ ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಸ್ಥಳಕ್ಕೆ ದೌಡಾಯಿಸಿದ್ದು ಪರಿಹಾರ ಕೆಲಸದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Fire brekas at plastic godown a New Delhi, 17 dead

ಮಹಿಳೆಯರು ಸೇರಿ ಅನೇಕ ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿಸುವ ಪರಿಸ್ಥಿತಿಯಲ್ಲಿದ್ದು, ಖಾಸಗಿ ಕಾರ್ಖಾನೆಯ ಕಟ್ಟಡದಲ್ಲಿಯೇ ಸಿಲುಕಿದ್ದಾರೆ. ಪ್ಲಾಸ್ಟಿಕ್‌ ಮತ್ತು ತೈಲ ಸಂಗ್ರಹ ಮಾಡಿದ್ದ ಜಾಗದಲ್ಲಿ ಬೆಂಕಿ ಆವರಿಸಿದೆ. ಸ್ಥಳದಲ್ಲಿ 20 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿವೆ.

ಮೊದಲ ಮಹಡಿಯಲ್ಲಿ 13 ಮಂದಿ, ಕೆಳ ಮಹಡಿಯಲ್ಲಿ ಮೂವರು ಹಾಗೂ ನೆಲ ಮಹಡಿಯಲ್ಲಿ ಒಬ್ಬರು ಬೆಂಕಿಗೆ ಸಿಲುಕಿ ಮೃತಪಟ್ಟಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿ ಏಳು ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇವೆಲ್ಲವೂ, ಪರವಾನಿಗೆಯಿಲ್ಲದೇ ನಡೆಯುತ್ತಿರುವ ಖಾಸಗಿ ಕಾರ್ಖಾನೆಗಳು ಎಂದು ತಿಳಿದು ಬಂದಿದೆ.

English summary
At least 17 people were killed in a fire in a building in Delhi's Bawana Industrial Area on Saturday. The fire is said to have broken out in a plastic godown, said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X