ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತಾಲಿಕ್ ವಿರುದ್ಧ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್

By Srinath
|
Google Oneindia Kannada News

ಗೋವಾ, ಮೇ29: ರಾಜ್ಯ ಕಾಂಗ್ರೆಸ್ ಪಕ್ಷವು ನಗರ ಪೊಲೀಸ್ ಠಾಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕೋಮು ದ್ವೇಷ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗುರುವಾರ ಈ ದೂರು ದಾಖಲಿಸಲಾಗಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಅಖಿಲ ಭಾರತ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡುವಾಗ ಪ್ರಮೋದ್ ಮುತಾಲಿಕ್ ಅವರು ಕೋಮು ದ್ವೇಶ ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಲಾಗಿದೆ. (ಅನಂತ್, ಜೋಶಿ ಸೋಲ್ಸಿ, ಭಾರತ ಗೆಲ್ಸಿ - ಮುತಾಲಿಕ್)

fir-against-muthalik-in-goa-gpcc-as-per-cm-manohar-parrikar-statement
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ (GPCC) ಸಂಘಟನಾ ಕಾರ್ಯದರ್ಶಿ ಮತ್ತು ವಕ್ತಾರ ದುರ್ಗಾದಾಸ್ ಕಾಮತ್ ಮತ್ತು ಇತರೆ ಮೂವರು ಈ ದೂರನ್ನು ದಾಖಲಿಸಿದ್ದಾರೆ. ಹಿಂದೂಗಳು ತಮ್ಮ ರಕ್ಷಣೆಗಾಗಿ ಖಡ್ಗಗಳನ್ನು ಹಿಡಿದು ಸಶಸ್ತ್ರರಾಗಬೇಕು ಎಂದು ಮುತಾಲಿಕ್ ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ಭಾಷಣದ ವಿಡಿಯೋ ತುಣುಕುಗಳನ್ನು ಸಹ ಲಗತ್ತಿಸಿ, ದೂರು ದಾಖಲಿಸಲಾಗಿದೆ. ಹಿಂದೂಗಳು ಇಂತಹ ಆಯುಧಗಳನ್ನು ಧಾರ್ಮಿಕ ವಸ್ತುಗಳ ಮಧ್ಯೆ ಸುತ್ತಿಟ್ಟುಕೊಳ್ಳಬೇಕು ಎಂದೂ ಪ್ರಮೋದ್ ಮುತಾಲಿಕ್ ಭಾಷಣದಲ್ಲಿ ಹೇಳಿದ್ದರು ಎಂದು ದೂರಲಾಗಿದೆ.

ಮುತಾಲಿಕ್ ಭಾಷಣದ ಉದ್ದೇಶ ಹಿಂದೂಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ನಡುವೆ ಕೋಮು ದ್ವೇಷ ಸೃಷ್ಟಿಸುವುದಾಗಿತ್ತು. ಈ ವಿಷಯದಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಸರಿಯಾದ ತನಿಖೆ ಕೋರಿ ನಾವೇ FIR ದಾಖಲಿಸಿದ್ದೇವೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ಸ್ 153, 153-A, 295A, 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ಸ್ 66A ಮತ್ತು 66 F ಅನುಸಾರ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ದುರ್ಗಾದಾಸ್ ಕಾಮತ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮುತಾಲಿಕ್ ಅವರು ಕೋಮು ದ್ವೇಷ ಬಿತ್ತುತ್ತಾರೆ. ಅವರ ವಿರುದ್ಧ ಸರಿಯಾದ ಸಾಕ್ಷ್ಯಗಳಿದ್ದು ಯಾರಾದರೂ ದೂರು ದಾಖಲಿಸಿದರೆ ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ದೂರು ನೀಡಿದೆ.

English summary
FIR against Muthalik allegedly inciting communal passions in Goa by GPCC as per Chief Minister Manohar Parrikar statement. he complaint was filed by Mr. Durgadas Kamat, Organising Secretary and Spokesperson of Goa Pradesh Congress Committee (GPCC) and three others on Thursday. Along with the complaint, they attached the links to videos wherein Mr. Muthalik, inter alia, gave a clarion call urging all the Hindus to arm themselves with swords.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X