ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಟ್ವೀಟ್ ಮಾಡಿದ ಶೆಹ್ಲಾ ರಶೀದ್ ವಿರುದ್ಧ ಎಫ್ಐಆರ್

|
Google Oneindia Kannada News

ನವದೆಹಲಿ, ಫೆಬ್ರವರಿ 19: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ಕುರಿತು ಟ್ವೀಟ್ ಮಾಡಿದ್ದ ಜವಾಹರ್​ಲಾಲ್​ನೆಹರೂ ವಿಶ್ವವಿದ್ಯಾಲಯದ(ಜೆಎನ್​ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕಿ, ಸಂಶೋಧಕಿ ಶೆಹ್ಲಾ ರಶೀದ್ ವಿರುದ್ಧ ಉತ್ತರಾಖಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಟ್ವೀಟ್ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಅಲ್ಪಸಂಖ್ಯಾತರಲ್ಲಿ ಭಯ ಉಂಟಾಗಲಿದೆ ಎಂಬ ಆರೋಪವನ್ನು ಶೆಹ್ಲಾ ಮೇಲೆ ಹೊರೆಸಲಾಗಿದೆ. ಡೆಹ್ರಾಡೂನ್​ ಪೊಲೀಸರು ಸೋಮವಾರ ಎಫ್​ಐಆರ್​ ದಾಖಲಿಸಿದ್ದಾರೆ.

ಮೋದಿ ಹತ್ಯೆ ಮಾಡಲು ಆರೆಸ್ಸೆಸ್, ಗಡ್ಕರಿ ಸಂಚು : ಶೆಹ್ಲಾ ಟ್ವೀಟ್ಮೋದಿ ಹತ್ಯೆ ಮಾಡಲು ಆರೆಸ್ಸೆಸ್, ಗಡ್ಕರಿ ಸಂಚು : ಶೆಹ್ಲಾ ಟ್ವೀಟ್

ಪುಲ್ವಾಮಾದಲ್ಲಿ ವಿಧ್ವಂಸಕ ಕೃತ್ಯದ ನಂತರ ಶೆಹ್ಲಾ ಅವರು ಸರಣಿ ಟ್ವೀಟ್ ಮಾಡಿದ್ದರು. 'ಡೆಹ್ರಾಡೂನ್​ಹಾಸ್ಟೆಲ್​ನಲ್ಲಿ 15 ರಿಂದ 20 ಕಾಶ್ಮೀರಿ ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದು ಉದ್ರಿಕ್ತ ಗುಂಪೊಂದು ಹಾಸ್ಟೆಲ್ ಸುತ್ತುವರಿದಿದೆ. ವಿದ್ಯಾರ್ಥಿನಿಯರನ್ನು ಹೊರದಬ್ಬಿ ಎಂದು ಆಗ್ರಹಿಸುತ್ತಿದ್ದಾರೆ. ಪೊಲೀಸರ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಇದು ಡಾಲ್ಫಿನ್ ಇನ್ಸ್ಟಿಟ್ಯೂಟ್ ನ ಪರಿಸ್ಥಿತಿ ಎಂದು ಫೆಬ್ರವರಿ 16 ರಂದು ಸಂಜೆ 7.27ಕ್ಕೆ ಶೆಹ್ಲಾ ರಶೀದ್​ ಟ್ವೀಟ್ ಮಾಡಿದ್ದರು.​

ಕಾಶ್ಮೀರಿ ವಿದ್ಯಾರ್ಥಿನಿಗಳನ್ನು ರಕ್ಷಿಸಿ ಎಂದು ಟ್ವೀಟ್

'ಡೆಹ್ರಾಡೂನ್​ಹಾಸ್ಟೆಲ್​ನಲ್ಲಿ 15 ರಿಂದ 20 ಕಾಶ್ಮೀರಿ ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದು ಉದ್ರಿಕ್ತ ಗುಂಪೊಂದು ಹಾಸ್ಟೆಲ್ ಸುತ್ತುವರಿದಿದೆ. ವಿದ್ಯಾರ್ಥಿನಿಯರನ್ನು ಹೊರದಬ್ಬಿ ಎಂದು ಆಗ್ರಹಿಸುತ್ತಿದ್ದಾರೆ. ಪೊಲೀಸರ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಇದು ಡಾಲ್ಫಿನ್ ಇನ್ಸ್ಟಿಟ್ಯೂಟ್ ನ ಪರಿಸ್ಥಿತಿ ಎಂದು ಫೆಬ್ರವರಿ 16 ರಂದು ಸಂಜೆ 7.27ಕ್ಕೆ ಶೆಹ್ಲಾ ರಶೀದ್​ ಟ್ವೀಟ್ ಮಾಡಿದ್ದರು.

ಶೆಹ್ಲಾ ಮಾಡಿದ ಟ್ವೀಟ್ ಆಧಾರ

ಶೆಹ್ಲಾ ಮಾಡಿದ ಟ್ವೀಟ್​ಅನ್ನು ಆಧಾರವಾಗಿ ಇಟ್ಟುಕೊಂಡು ಸ್ಥಳೀಯರೊಬ್ಬರು ಡೆಹ್ರಾಡೂನ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 504(ಉದ್ದೇಶಪೂರ್ವಕವಾಗಿ ಶಾಂತಿಗೆ ಭಂಗ ತರುವುದು) 501(1) (b) (ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು) ಮತ್ತು 153b (ಪೂರ್ವಾಗ್ರಹವಾಗಿ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವುದು) ಸೆಕ್ಷನ್​ ಅಡಿಯಲ್ಲಿ ಡೆಹ್ರಾಡೂನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್​ಐಆರ್ ಹಾಕಿದ್ದಾರೆ.

370ನೇ ವಿಧಿ ರದ್ದು ಪಡಿಸುವ ಆನ್ ಲೈನ್ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ 370ನೇ ವಿಧಿ ರದ್ದು ಪಡಿಸುವ ಆನ್ ಲೈನ್ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ

ಬಿಜೆಪಿ ವಿರುದ್ಧ ದನಿ ಎತ್ತಿದರೆ ಏನಾಗುತ್ತದೆ

ಎಫ್ಐಆರ್ ಪ್ರತಿ ಹಾಕಿ ಟ್ವೀಟ್ ಮಾಡಿರುವ ಶೆಹ್ಲಾ, ಬಿಜೆಪಿ ವಿರುದ್ಧ ದನಿ ಎತ್ತಿದರೆ ಏನಾಗುತ್ತದೆ ಎಂಬುದಕ್ಕೆ ಇದುವೇ ನಿದರ್ಶನ ಎಂದಿದ್ದಾರೆ.

ಟ್ವೀಟ್ ವೊಂದಕ್ಕೆ ಪ್ರತಿಕ್ರಿಯಿಸಿದ ಶೆಹ್ಲಾ

ಹಲವು ವರ್ಷಗಳ ನಂತರ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿದೆ. ಆದರೆ, ನಿಷೇಧ ಹಿಂತೆಗೆಯುವಂತೆ ಹೋರಾಟ ಮಾಡಿದ ಹೋರಾಟಗಾರರನ್ನು ಜೈಲಿಗೆ ಹಾಕಲಾಯಿತು. ಇದು ಒಂದು ರೀತಿ ಅಂಥದ್ದೇ ಪರಿಸ್ಥಿತಿ ಎಂದಿದ್ದಾರೆ.

ಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿ

ಮಹಿಳೆಯರ ಹಾಸ್ಟೆಲ್ ಬಗ್ಗೆ ಬಂದ ಸುದ್ದಿ ಸುಳ್ಳು

ಮಹಿಳೆಯರ ಹಾಸ್ಟೆಲ್ ಬಗ್ಗೆ ಬಂದ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಪೊಲೀಸರು ಅಲ್ಲಿಗೆ ತೆರಳಿದಾಗ ಪುಲ್ವಾಮಾ ಘಟನೆಯನ್ನು ಖಂಡಿಸಿ, ಪಾಕಿಸ್ತಾನ ಮುರ್ದಾಬಾದ್ ಎಂದು ಕೂಗಲಾಗುತ್ತಿತ್ತು ಅಷ್ಟೇ ಎಂದು ಡೆಹ್ರಾಡೂನ್ ನ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಅಶೋಕ್ ಕುಮಾರ್ ಹೇಳಿದ್ದಾರೆ.

English summary
Shehla Rashid, a former Jawaharlal Nehru University (JNU) student leader, was booked for spreading fake news on Kashmiri girls being trapped inside a Dehradun hostel in the wake of violence against the community after Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X