ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರತ್ತ ಬೊಟ್ಟು ಮಾಡಿದರೂ ಬೆರಳು ಕಟ್: ಖಟ್ಟರ್ ಎಚ್ಚರಿಕೆ

|
Google Oneindia Kannada News

ಪಂಚಕುಲ, ಜುಲೈ 13: ಯಾರಾದರೂ ಮಹಿಳೆಯರತ್ತ ಬೊಟ್ಟು ಮಾಡಲು ಧೈರ್ಯ ತೋರಿಸಿದರೆ ಅವರ ಕೈಬೆರಳನ್ನು ಕತ್ತರಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಎಚ್ಚರಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಜನರಿಗೆ ಸರ್ಕಾರದ ಯಾವುದೇ ಸವಲತ್ತು ಮತ್ತು ಯೋಜನೆಗಳ ಲಾಭ ಲಭ್ಯವಾಗದಂತೆ ಮಾಡಲಾಗುತ್ತದೆ ಎಂದು ಸಹ ಅವರು ಹೇಳಿದ್ದಾರೆ.

ಹಿಂದು ಪಾಕಿಸ್ತಾನ ಹೇಳಿಕೆ: ಶಶಿ ತರೂರ್ ಹಿಂದಿ ಹಾಡಿನ ಉತ್ತರ!ಹಿಂದು ಪಾಕಿಸ್ತಾನ ಹೇಳಿಕೆ: ಶಶಿ ತರೂರ್ ಹಿಂದಿ ಹಾಡಿನ ಉತ್ತರ!

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಮಹಿಳೆಯರತ್ತ ಯಾರಾದರೂ ಬೊಟ್ಟು ಮಾಡುವ ಭಂಡತನ ತೋರಿಸಿದರೂ ಅವರ ಬೆರಳನ್ನು ಕತ್ತರಿಸಲಾಗುತ್ತದೆ. ಅದಕ್ಕೆ ಸೂಕ್ತವಾದ ತಯಾರಿ ನಡೆಸಲಾಗುತ್ತಿದೆ ಎಂದರು.

fingers pointed at women will be chopped: haryana cm Khattar

ಆದರೆ, ಈ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಸ್ಪಷ್ಟೀಕರಣ ನೀಡಿದ ಅವರು, ಇದರ ಅರ್ಥ ಆರೋಪಿ ಅಥವಾ ತಪ್ಪಿತಸ್ಥನನ್ನು ಶಿಕ್ಷಿಸಲು ಬಾರ್ಬರಿಯನ್ ಕಾನೂನು (ರೋಮ್‌ನ ನಾಗರಿಕತೆಯೊಂದರಲ್ಲಿದ್ದ ಕಾನೂನು) ಹೇರುತ್ತೇವೆ ಎಂದಲ್ಲ ಎಂದಿದ್ದಾರೆ.

ಎಲ್ಲ ಆರೋಪಗಳಿಂದ ಮುಕ್ತನಾದ ಆರೋಪಿಯು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಖಟ್ಟರ್ ತಿಳಿಸಿದ್ದಾರೆ.

ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿಯ ಬಂಧನಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿಯ ಬಂಧನ

ಅತ್ಯಾಚಾರ ಸಂತ್ರಸ್ತೆಗೆ ಸರ್ಕಾರ ಒದಗಿಸುವ ವಕೀಲರಲ್ಲದೆ, ತನ್ನ ಆಯ್ಕೆಯ ವಕೀಲರನ್ನು ಕೂಡ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಆಕೆಗೆ 22,000 ರೂಪಾಯಿ ಹಣಕಾಸಿನ ನೆರವು ಒದಗಿಸಲಾಗುವುದು.

ಸ್ವಾತಂತ್ರ್ಯ ದಿನಾಚರಣೆ ಅಥವಾ ರಕ್ಷಾ ಬಂಧನದ ವೇಳೆಗೆ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಲಾಗುವುದು ಎಂದು ಖಟ್ಟರ್ ತಿಳಿಸಿದ್ದಾರೆ.

English summary
Harayna chief minister Manohar Lal Khattar sait that of anyone dares point fingers at our women, their fingers will be chopped off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X