ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ನಿಮ್ಮ ಹೃದಯ ಮಿಡಿಯಲಿ

Google Oneindia Kannada News

ಒಂದು ವರ್ಷದ ಹಿಂದೆ ಪ್ರಭಾಕರನ್ ಪುದುಚೆರಿಯ ಮಹಾತ್ಮಾ ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ್ದ. ಹುಟ್ಟುವಾಗಲೇ ಆತನಿಗೆ ಬೆರಳಿರಲಿಲ್ಲ.ಆಗಲೇ ವೈದ್ಯರು ಈತನಿಗೆ ಜನ್ಮಜಾತ ರೋಗವಿರಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು.

ಕೆಲ ತಿಂಗಳ ಬಳಿಕ ವೈದ್ಯರ ನಿರೀಕ್ಷೆ ನಿಜವಾಗಿ ಪ್ರಭಾಕರನ್‌ಗೆ ಜನ್ಮಜಾತ ಹೃದಯ ಸಂಬಂಧಿ ಕಾಯಿಲೆಗಳಿರುವುದು ಖಾತ್ರಿಯಾಯಿತು.

ಪ್ರಭಾಕರನ್ ಪಾಲಕರಾದ ಕುಮಾರ್ ಹಾಗೂ ಸುಮತಿ ಮಂಗಲಂಪೆಟ್ಟಾಯ್‌ನಲ್ಲಿ ನೆಲೆಸಿದ್ದು, ಮೂಲತಃ ಕೂಲಿಕಾರ್ಮಿಕರಾಗಿದ್ದಾರೆ. ತಂದೆ ಕುಮಾರ್ ಹಮಾಲಿಯಾಗಿದ್ದರೆ ಸುಮತಿ ಮನೆಗೆಲಸ ಮಾಡುತ್ತಿದ್ದಾರೆ. ಪ್ರಭಾಕರನ್‌ಗೆ ಓರ್ವ ಅಣ್ಣನೂ ಇದ್ದಾನೆ.

Financial Help Needs For One Year Old Child Heart Surgery

ಹುಟ್ಟಿನಿಂದಲೂ ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಪ್ರಭಾಕರನ್ ಆರೋಗ್ಯ ರಕ್ಷಣೆಗೆ ಪಾಲಕರು ಸಾಕಷ್ಟು ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದ್ದು, ಹಣವನ್ನೂ ಕಳೆದುಕೊಂಡಿದ್ದಾರೆ, ಆದರೆ ಈಗ ಪ್ರಭಾಕರನ್‌ಗೆ ಸೂಕ್ತ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಈತನ ಚಿಕಿತ್ಸೆಗೆ ಚೆನ್ನೈನ ಎಂಐಒಟಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ, ಆದರೆ ಈ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಸವಲತ್ತನ್ನು ಕುಮಾರ್ ಹೊಂದಿಲ್ಲ.

Financial Help Needs For One Year Old Child Heart Surgery

ಪ್ರಭಾಕರನ್‌ಗೆ ಟಿಎಪಿವಿಸಿ ರಿಸ್ಟ್ರಿಕ್ಟೀವ್ ಎಎಸ್‌ಡಿ, ಮಲ್ಟಿಪಲ್ ಮಸ್ಕ್ಯುಲರ್ ವಿಎಸ್‌ಡಿ, ಎಸ್‌ಪಿಪಿಎ ಬ್ಯಾಂಡ್ ಸಮಸ್ಯೆಗಳಿರುವುದು ಪರೀಕ್ಷೆಗಳಿಂದ ತಿಳಿದುಬಂದಿದೆ. ಪ್ರಭಾಕರನ್‌ಗೆ ತುರ್ತಾಗಿ ಟಿಎಪಿವಿಸಿ ಶಸ್ತ್ರಚಿಕಿತ್ಸೆ, ಕ್ಲೋಷರ್ ಎಎಸ್‌ಡಿ, ಕ್ಲೋಷರ್ ಆಫ್ ಮಲ್ಟಿಪಲ್ ಮಸ್ಕ್ಯುಲರ್ ವಿಎಸ್‌ಡಿ, ಪಿಎ ಬ್ಯಾಂಡಿಂಗ್ ಮತ್ತು ಮರುನಿರ್ಮಾಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Financial Help Needs For One Year Old Child Heart Surgery

ಒಟ್ಟಾರೆ ಈ ವೈದ್ಯಕೀಯ ಚಿಕಿತ್ಸೆಗಳಿಗೆ 3 ಲಕ್ಷ 60 ಸಾವಿರ ಖರ್ಚಾಗುವ ನಿರೀಕ್ಷೆ ಇದ್ದು, ಇದರಲ್ಲಿ ಶಸ್ತ್ರ ಚಿಕಿತ್ಸೆ, ಐಸಿಯು, ಆಸ್ಪತ್ರೆಯಲ್ಲಿನ ವಾಸ ಹಾಗೂ ನಂತರದ ವೈದ್ಯಕೀಯ ನೆರವು ಸೇರಿದೆ.

ಈ ಪುಟ್ಟ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ದಾನ ನೀಡಲು ಬಯಸುವವರು ಈ ಲಿಂಕ್ ಕ್ಲಿಕ್ ಮಾಡಬಹುದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X