ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಐಸಿ ಐಪಿಓ ಬಿಡುಗಡೆಯಿಂದ ಯಾರಿಗೆ ಎಷ್ಟು ಲಾಭವಾಗುತ್ತೆ ?

|
Google Oneindia Kannada News

ಬೆಂಗಳೂರು ಫೆಬ್ರವರಿ 1: ಭಾರತೀಯ ಜೀವ ವಿಮಾ ನಿಗಮದಲ್ಲಿ ಸಾರ್ವಜನಿಕರ ರ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ನಿರ್ಣಯ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ ಅಗ್ರಗಣ್ಯ ಜೀವ ವಿಮೆ ಕಾರ್ಪೋರೇಷನ್ ಭಾರತೀಯ ಜೀವ ವಿಮಾ ನಿಗಮದಲ್ಲಿ ಸಾರ್ವಜನಿಕರ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿದಂತಾಗಿದೆ. ವಿಮಾ ಕ್ಷೇತ್ರದ ದೈತ್ಯ ಭಾರತೀಯ ಜೀವ ವಿಮಾ ನಿಗಮದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಐಪಿಓ ಕೊಡುಗೆ

ಸಾರ್ವಜನಿಕರಿಗೆ ಐಪಿಓ ಕೊಡುಗೆ

ಭಾರತೀಯ ಜೀವ ವಿಮಾ ನಿಗಮದಲ್ಲಿ 1956 ರಲ್ಲಿ ಅಂಧಿನ ಪ್ರಧಾನಿ ನೆಹರೂ ಅವರು ಐದು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಭಾರತೀಯ ಜೀವ ವಿಮಾ ಕಾರ್ಪೋರೇಷನ್ ಶೇ. 5 ಶೇರ್‌ ಗಳನ್ನು ಸರ್ಕಾರಕ್ಕೆ ನೀಡಿತ್ತು. ಇದೇ ಅವಧಿಯಲ್ಲಿ ವಿಮಾ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ಭಾರತೀಯ ಜೀವ ವಿಮಾ ನಿಗಮದ ಪಾಲಸಿಗಳಿಗೆ ಸರ್ಕಾರವೇ ಗ್ಯಾರೆಂಟಿ ನೀಡಿತ್ತು. ಇದರ ಪ್ರತಿಫಲವಾಗಿ ಶೇ. 5 ರಷ್ಟು ಶೇರ್ ಹೊಂದಿರುವ ಸರ್ಕಾರದ ಆಸ್ತಿ ಸುಮಾರು 3 ಲಕ್ಷ ಕೋಟಿ ರೂಪಾಯಿಗೆ ವೃದ್ಧಿಸಿದೆ. ಇದರಲ್ಲಿ ಶೇ. 50 ರಷ್ಟು ಪಾಲನ್ನು ಸುಮಾರು 75 ಸಾವಿರ ಕೋಟಿ ರೂಪಾಯಿ ಮೊತ್ತಕ್ಕೆ ಐಪಿಓ ರೂಪದಲ್ಲಿ ಸಾರ್ವಜನಿಕರ ಖರೀದಿಗೆ ಅವಕಾಶ ಕಲ್ಪಿಸುವುದಾಗಿ ಕೇಂದ್ರ ವಿತ್ತ ಸಚಿವರು ಘೋಷಣೆ ಮಾಡಿದ್ದಾರೆ. ಇದು ಪಾಲಿಸಿದಾರರಿಗೆ ಮತ್ತು ಏಜೆಂಟರಿಗೆ ಲಾಭ ತರುವ ಜತೆಗೆ ಕಂಪನಿಯ ತ್ವರಿತ ಪ್ರಗತಿಗೆ ನಾಂದಿಯಾಡಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

Budget 2021 Live Updates : ರಕ್ಷಣಾ ಕ್ಷೇತ್ರಕ್ಕೆ ಶೇಕಡಾ 20ರಷ್ಟು ಅನುದಾನ ಹೆಚ್ಚಳ

ಐಪಿಓ ನೀವು ಖರೀದಿಸಬಹುದು

ಐಪಿಓ ನೀವು ಖರೀದಿಸಬಹುದು

ಕೇಂದ್ರ ಸರ್ಕಾರ ತನ್ನ ಪಾಲಿನ ಶೇ. ಅರ್ಧದಷ್ಟು ಹಣವನ್ನು ಐಪಿಓ ( ಇನ್ಷಿಯಲ್ ಪಬ್ಲಿಕ್ ಆಫರ್ ) ಗಳನ್ನು ಬಿಡುಗಡೆ ಮಾಡಲಿದೆ. ಐಪಿಓ ಖರೀದಿ ಮೂಲಕ ಜನ ಸಾಮಾನ್ಯರು ಕೂಡ ಜೀವ ವಿಮಾ ಕಾರ್ಪೋರೇಷನ್ ನಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿದಂತಾಗಿದೆ. ಇದರಿಂದ ಎಲ್‌ಐಸಿ ಸಂಪತ್ತು ಮತ್ತಷ್ಟು ವೃದ್ಧಿಸಲಿದ್ದು, ಎರಡು ಮೂರು ವರ್ಷದಲ್ಲಿ ಮತ್ತಷ್ಟು ದೈತ್ಯ ಕಾರ್ಫೋರೇಷನ್ ಆಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಮುಂದಿನ ಐದಾರು ವರ್ಷದಲ್ಲಿ ಪಾಲಿಸಿದಾರರಿಗೆ ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗಲಿದೆ ಎಂದು ಫೈನಾನ್ಸ್ ಅಡ್ವೈಸರ್ ಶ್ರೀನಿವಾಸ್ ಹನುಮನಹಳ್ಳಿ ಅವರು ತನ್ನ ಅಭಿಪ್ರಾಯವನ್ನು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

32 ಲಕ್ಷ ಕೋಟಿ ನಗದು

32 ಲಕ್ಷ ಕೋಟಿ ನಗದು

ಸದ್ಯ ಭಾರತೀಯ ಜೀವ ವಿಮಾ ನಿಗಮದಲ್ಲಿ 32 ಲಕ್ಷ ಕೋಟಿ ನಗದು ಇದೆ. 26 ಲಕ್ಷ ಕೋಟಿಯಷ್ಟು ಆಸ್ತಿಗಳನ್ನು ಹೊಂದಿದೆ. ದೇಶದ 36 ಕೋಟಿ ಜನರಿಂದ ವಿಮೆ ಮಾಡಿಸಿದ ಹೆಗ್ಗಳಿಕೆಗೆ ಜೀವ ವಿಮಾ ನಿಗಮ ಪಾತ್ರವಾಗಿದೆ. ಇದೇ ಹಂತದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್‌ಐಸಿ ಐಪಿಓ ಬಿಡುಗಡೆ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿದ್ದು, ಕಾರ್ಪೋರೇಷನ್ ಮತ್ತಷ್ಟು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಈ ನಿರ್ಣಯ ನೆರವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಐಪಿಓ ಬಿಡುಗಡೆ ಮಾಲಕ ಸಾರ್ವಜನಿಕರ ಹೂಡಿಕೆಯೂ ಹೆಚ್ಚಾಗಲಿದೆ. . ಸರ್ಕಾರದ ಪಾಲಿನಲ್ಲಿ ಶೇ. 50 ರಷ್ಟು ಮೊತ್ತ ( ಸುಮಾರು 75 ಸಾವಿರ ಕೋಟಿ ರೂ. ) ಐಪಿಓ ರೂಪದಲ್ಲಿ ಸಾರ್ವಜನಿಕರ ಪಾಲುದಾರಿಕೆಗೆ ಅವಕಾಶ ನೀಡಲಾಗಿದೆ. ಇದರಿಂದ ವಿಶ್ವದ ಎರಡನೇ ಅತಿ ದೊಡ್ಡ ಐಪಿಓ ನೀಡಿದ ಕಾರ್ಪೋರೇಷನ್ ಎಂಬ ಹೆಗ್ಗಳಿಕೆಗೆ ಜೀವ ವಿಮಾ ನಿಗಮ ಪಾತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!

ಎಲ್ಐಸಿ ಆಸ್ತಿ ಮೇಲೆ ಹೂಡಿಕೆ

ಎಲ್ಐಸಿ ಆಸ್ತಿ ಮೇಲೆ ಹೂಡಿಕೆ

ಎಲ್‌ಐಸಿ ಬಳಿ ಅಪಾರ ಪ್ರಮಾಣದ ಆಸ್ತಿಗಳಿವೆ. ಐಪಿಓ ಬಿಡುಗಡೆ ಮಾಡುವುದರಿಂದ ಅವ ನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಅವಕಾಶ ನೀಡಿದಂತಾಗುತ್ತದೆ. ಎಲ್‌ಐಸಿ ಈ ಆಸ್ತಿಗಳ ಮೇಲೆ ಹೂಡಿಕೆ ಮಾಡಿ ಸಂಪತ್ತನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಸಾರ್ವಜನಿಕ ಹೂಡಿಕೆಗೆ ಅಕವಾಶ ನೀಡುವುದರಿಂದ ಪ್ರತಿ ವರ್ಷ ಅಡಿಟ್ ಮಾಡಿಸಿ ಎಲ್ಲಾ ಮಾಹಿತಿಯನ್ನು ಹೂಡಿಕೆದಾರರಿಗೆ ತಿಳಿಸಬೇಕಾಗುತ್ತದೆ. ಇತರೆ ಖಾಸಗಿ ಕಂಪನಿಗಳ ಮಾದರಿಯಲ್ಲಿ ಎಲ್‌ಐಸಿ ಕೂಡ ಮತ್ತಷ್ಟು ವೇಗವಾಗಿ ಪ್ರಗತಿ ಕಾಣಲಿದೆ ಎಂದು ವಿಮಾ ಏಜೆಂಟರು ತಿಳಿಸಿದ್ದಾರೆ. ಇದರಿಂದ ಏಜೆಂಟರಿಗೆ ಮತ್ತು ಪಾಲಸಿದಾರರಿಗೂ ಅನುಕೂಲವಾಗಲಿದೆ ವಿನಃ ಅನಾನುಕೂಲ ಪ್ರಶ್ನೆಯೇ ಇಲ್ಲ.

ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಬಗ್ಗೆ ಕೆಲ ಅಪಸ್ವರಗಳಿವೆ. ಇನ್ನೂ ವಿಮೆಗಳಿಗೆ ಜಿಎಸ್ ಟಿ ತೆರಿಗೆ ಕಡಿತ ಮಾಡುವ ಬಗ್ಗೆ ಕೆಲ ವಿಚಾರಗಳಿತ್ತು. ಅವನ್ನು ಸರಿ ಪಡಿಸುವಂತೆ ಎಲ್ಐಸಿ ಏಜೆಂಟರು ಬೃಹತ್ ಹೋರಾಟ ನಡೆಸಿದ್ದರು. ಇದು ಕೇಂದ್ರ ವಿತ್ತ ಸಚಿವರ ಗಮನಕ್ಕೂ ತರಲಾಗಿತ್ತು. ಸದ್ಯ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.

English summary
Financial experts reaction to LIC IPO which announced in budget 2021. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X