ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ಖಾತೆದಾರರ ವಿವರ ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ನಡೆದ ತೆರಿಗೆ ಒಪ್ಪಂದದ ಅಡಿಯಲ್ಲಿ ಪಡೆದುಕೊಂಡಿರುವ ಸ್ವಿಸ್ ಬ್ಯಾಂಕ್ ಖಾತೆದಾರರ ವಿವರಗಳನ್ನು ಗೋಪ್ಯತೆಯ ಕಾರಣದಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ, ಇತರೆ ವಿದೇಶಿ ಬ್ಯಾಂಕುಗಳಿಂದಲೂ ಸಂಗ್ರಹಿಸಿರುವ ಕಪ್ಪುಹಣದ ವಿವರಗಳನ್ನು ಕೂಡ ಬಹಿರಂಗಪಡಿಸಲು ನಿರಾಕರಿಸಿದೆ.

Breaking: ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರBreaking: ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರ

'ಪರಸ್ಪರ ಗೋಪ್ಯತಾ ಒಪ್ಪಂದಗಳಿಗೆ ಬದ್ಧರಾಗಿ ಅಂತಹ ತೆರಿಗೆ ಒಪ್ಪಂದಗಳ ಅಡಿಯಲ್ಲಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (a) ಮತ್ತು 8 (1) (f) ಅಡಿ ವಿದೇಶಿ ಸರ್ಕಾರಗಳಿಂದ ಪಡೆದ/ಕೇಳಲಾದ ಮಾಹಿತಿಗಳನ್ನು ಹಾಗೂ ತೆರಿಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸದೆ ಇರಲು ವಿನಾಯಿತಿ ನೀಡಲಾಗಿದೆ' ಎಂದು ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸರ್ಕಾರ ಪ್ರತಿಕ್ರಿಯೆ ನೀಡಿದೆ.

Finance Ministry Refused To Disclose Swiss Bank Account Details

ಸ್ವಿಟ್ಜರ್ಲೆಂಡ್‌ನ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ವಿವರಗಳನ್ನು ಪಡೆದುಕೊಂಡಿರುವುದಾಗಿ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಈ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಲಾಗಿತ್ತು. ಜತೆಗೆ ಭಾರತದೊಂದಿಗೆ ಹಂಚಿಕೊಂಡಿರುವ ದಾಖಲೆಗಳ ವಿವರಗಳು ಸೇರಿದಂತೆ ವಿದೇಶಗಳಲ್ಲಿ ಸ್ವೀಕೃತವಾಗಿರುವ ಕಪ್ಪುಹಣದ ಮಾಹಿತಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಇಂದಿನಿಂದ ಸ್ವಿಸ್ ಖಾತೆ ರಹಸ್ಯ ಬಯಲು, ಭಾರತೀಯರ ಠೇವಣಿ ಎಷ್ಟಿದೆ?ಇಂದಿನಿಂದ ಸ್ವಿಸ್ ಖಾತೆ ರಹಸ್ಯ ಬಯಲು, ಭಾರತೀಯರ ಠೇವಣಿ ಎಷ್ಟಿದೆ?

ಮಾಹಿತಿ ವಿನಿಯಮ ಒಪ್ಪಂದದಡಿ ಕೇಂದ್ರ ಸರ್ಕಾರವು ಸ್ವಿಟ್ಜರ್ಲೆಂಡ್‌ನಿಂದ ಭಾರತೀಯ ಖಾತೆದಾರರ ಮಾಹಿತಿಗಳ ಮೊದಲ ಪಟ್ಟಿಯನ್ನು ಪಡೆದುಕೊಂಡಿತ್ತು.

English summary
The Finance Ministry has refused to share Swiss bank account details of Indians citing confidentiality provisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X