ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮೋಹನ್ ಸಿಂಗ್ ಭೇಟಿಯಾದ ನಿರ್ಮಲಾ ಸೀತಾರಾಮನ್

|
Google Oneindia Kannada News

Recommended Video

ಕುತೂಹಲ ಹುಟ್ಟಿಸಿದ ನಿರ್ಮಲಾ, ಮನಮೋಹನ್ ಸಿಂಗ್ ಭೇಟಿ | Oneindia Kannada

ನವದೆಹಲಿ, ಜೂನ್ 27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು, ಅವರ ನಿವಾಸದಲ್ಲಿ ಗುರುವಾರ ಭೇಟಿಯಾಗಿದ್ದಾರೆ.

ಕೇಂದ್ರ ಆಯವ್ಯಯ ಮಂಡನೆಗೆ ಮುನ್ನ ನಿರ್ಮಲಾ ಭೇಟಿ ಮಹತ್ವ ಪಡೆದಿದ್ದು, ಯಾವ ವಿಚಾರ ಚರ್ಚೆಗೆ ಬಂತು ಎನ್ನುವ ವಿಚಾರ ತಿಳಿದುಬಂದಿಲ್ಲ. ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ.

ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ

ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಿರ್ಮಲಾ ಮಂಡಿಸಲಿರುವ ಪ್ರಥಮ ಬಜೆಟ್ ಇದಾಗಿದೆ. ನಿರ್ಮಲಾ, ದೇಶದ ಮೊದಲ ಪೂರ್ಣಾವಧಿ ಹಣಕಾಸು ಸಚಿವೆಯಾಗಿದ್ದು, ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಹಣಕಾಸು ಸಚಿವ ಸ್ಥಾನವನ್ನೂ ನಿಭಾಯಿಸಿದ್ದರು.

Ahead of budget, Finance Minsiter Nirmala Sitharaman meets former PM Manmohan SIngh at his residence

ಪಿ ವಿ ನರಸಿಂಹರಾವ್ ಸರಕಾರದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ, 1991ರಲ್ಲಿ ಅವರು ಪ್ರಕಟಿಸಿದ ಆರ್ಥಿಕ ಸುಧಾರಣಾ ಕ್ರಮ ವ್ಯಾಪಕ ಚರ್ಚೆಗೊಳಗಾಗಿತ್ತು.

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಇದೊಂದು ಸೌಜನ್ಯ ಭೇಟಿಯಾಗಿದ್ದು, 30 ವರ್ಷಗಳಿಂದ ಪ್ರತೀ ಬಜೆಟ್ ಅಧಿವೇಶನದಲ್ಲಿಯೂ ಇರುತ್ತಿದ್ದ ಮನಮೋಹನ್ ಸಿಂಗ್ ಅವರ ರಾಜ್ಯ ಸಭಾ ಸದಸ್ಯ ಅವಧಿ ಮುಕ್ತಾಯಗೊಂಡಿದೆ.

ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?

ಆಕ್ಸಿಡೆಂಟ್ ಪ್ರಧಾನಿ ಎಂದು ಹೇಳುತ್ತಿದ್ದ ಮನಮೋಹನ್ ಸಿಂಗ್, ತಾನೊಬ್ಬ ಆಕ್ಸಿಡೆಂಟ್ ಹಣಕಾಸು ಸಚಿವ ಕೂಡಾ ಎಂದು ಬಹಳಷ್ಟು ಬಾರಿ ಹೇಳಿದ್ದರು. (ಚಿತ್ರ: ANI)

English summary
Ahead of budget, Finance Minsiter Nirmala Sitharaman meets former PM Manmohan SIngh at his residence. Union budget will be presented on July 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X