ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆರೋಗ್ಯ ವಲಯಕ್ಕೆ 50,000 ಕೋಟಿ ರೂ. ಪ್ಯಾಕೇಜ್

|
Google Oneindia Kannada News

ನವದೆಹಲಿ, ಜೂನ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿರುವ ಭಾರತದಲ್ಲಿ ಆರೋಗ್ಯ ವಲಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಪ್ಯಾಕೇಜ್ ಘೋಷಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವೈದ್ಯಕೀಯ ವಲಯದಲ್ಲಿ ಮೂಲಭೂತ ಸೌಕರ್ಯ ಮತ್ತು ಕೇಂದ್ರಗಳ ವಿಸ್ತರಣೆಗಾಗಿ 50,000 ಕೋಟಿ ರೂಪಾಯಿ ಪ್ಯಾಕೇಜ್ ನೀಡಿದ್ದಾರೆ.

5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಮೋದಿ ಸರ್ಕಾರ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಮೋದಿ ಸರ್ಕಾರ

"ಭಾರತದ ಎಂಟು ಮಹಾನಗರಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ವಿಸ್ತರಣೆಗೆ ಒತ್ತು ನೀಡಲಾಗುವುದು. ಶೇ.50ರಷ್ಟು ಯೋಜನೆಗಳನ್ನು ವಿಸ್ತರಿಸುವುದು ಹಾಗೂ ಶೇ.75ರಷ್ಟು ಹೊಸ ಯೋಜನೆಗಳನ್ನು ರೂಪಿಸುವುದಕ್ಕೆ ಹಣ ವಿನಿಯೋಗಿಸಲಾಗುತ್ತದೆ," ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Finance Minister Nirmala Sitharaman Announces 50,000 Crore For Health Sector

ಆರೋಗ್ಯ ವಲಯಕ್ಕೆ ನೀಡಿರುವ ಕೊಡುಗೆಗಳು:

* ಕೊವಿಡ್-19 ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ವ್ಯವಸ್ಥೆ ಯೋಜನೆಗೆ 15,000 ಕೋಟಿ ರೂಪಾಯಿ ಮೀಸಲು. 7929 ಕೊವಿಡ್-19 ಆರೋಗ್ಯ ಕೇಂದ್ರ ಸ್ಥಾಪನೆ, 9,954 ಕೊರೊನಾವೈರಸ್ ಆರೈಕೆ ಕೇಂದ್ರ, 7.5 ಪಟ್ಟು ಆಮ್ಲಜನಕ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆ, 42 ಪಟ್ಟು ಐಸೋಲೇಷನ್ ಹಾಸಿಗೆ ಹೆಚ್ಚಳ ಹಾಗೂ 45 ಪಟ್ಟು ಐಸಿಯು ಹಾಸಿಗೆಗಳ ಪ್ರಮಾಣವನ್ನು ಹೆಚ್ಚಿಸುವುದು.

* ಹೊಸ ಯೋಜನೆಯು ಮಕ್ಕಳ ಹಾಗೂ ನವಜಾತ ಶಿಶುಗಳ ಚಿಕಿತ್ಸೆಗೆ ಅಗತ್ಯವಿರುವ ಅಲ್ಪಾವಧಿ ವ್ಯವಸ್ಥೆಗಳನ್ನು ರೂಪಿಸುವುದಕ್ಕೆ ಗಮನ ಹರಿಸಲಾಗುವುದು

ಕೊರೊನಾವೈರಸ್ ಸಂದಿಗ್ಧತೆಯಲ್ಲಿ 8 ವಿಶೇಷ ಪ್ಯಾಕೇಜ್ ಘೋಷಣೆಕೊರೊನಾವೈರಸ್ ಸಂದಿಗ್ಧತೆಯಲ್ಲಿ 8 ವಿಶೇಷ ಪ್ಯಾಕೇಜ್ ಘೋಷಣೆ

* ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ 23,220 ಕೋಟಿ ರೂಪಾಯಿ

* ಅಲ್ಪಾವಧಿವರೆಗೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಸೇವೆಗೆ ಬಳಸಿಕೊಳ್ಳುವುದು

* ಜಿಲ್ಲಾ ಮತ್ತು ಉಪ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಮತ್ತು ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುವುದು

* ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಉಪಕರಣ, ಸಾಮಗ್ರಿ ಹಾಗೂ ಔಷಧಿಗಳ ಲಭ್ಯತೆಗೆ ಮೊದಲ ಆದ್ಯತೆ ನೀಡುವುದು.

English summary
Finance Minister Nirmala Sitharaman Announces 50,000 Crore For Health Sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X