ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್

|
Google Oneindia Kannada News

Recommended Video

ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್ | Nirmala Sitharaman

ನವದೆಹಲಿ, ಜುಲೈ 04: ಮೋದಿ ಸರ್ಕಾರ್ 2.0 ನ ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ(ಜುಲೈ 30)ದಂದು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಬ್ಯಾಂಕ್ ಪರೀಕ್ಷೆಯ ವಿಚಾರವನ್ನು ಪ್ರಸ್ತಾಪಿಸಿ, ಜಿಸಿ ಚಂದ್ರಶೇಖರ್ ಸೇರಿದಂತೆ ಕರ್ನಾಟಕದ ಸಂಸದರು ಶೂನ್ಯವೇಳೆಯಲ್ಲಿ ಎತ್ತಿರುವ ಪ್ರಶ್ನೆ ಬಗ್ಗೆ ಸರ್ಕಾರ ಪರಿಗಣಿಸಲಿದೆ. ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿ

ಈ ಮೂಲಕ RRB, IBPS ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುವ ಅವಕಾಶ ಸಿಗಲಿದೆ. ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್ ರವರು ಭರವಸೆ ನೀಡಿದ್ದಾರೆ.

Finance minister considers proposal Bank recruitment exams in local languages

IBPS ಪರೀಕ್ಷೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಬರೆಯಲು ಸಾಧ್ಯವಿದೆ. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಜಿಸಿ ಚಂದ್ರಶೇಖರ್ ಹೇಳಿದರು.

ಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆ ಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆ

ಈಗ ಇರುವ ತೊಂದರೆಯಾದರೂ ಏನು?:

ಗ್ರಾಮೀಣ ಬ್ಯಾಂಕ್ IBPS ನಲ್ಲಿ ಎರಡು ರೀತಿಯ ತೊಂದರೆಯಿದೆ
1. 2014 ರ ಮುಂಚೆ 10 ನೇ ತರಗತಿಯಲ್ಲಿ ಕನ್ನಡವನ್ನು ಓದಿದವರು ಪರೀಕ್ಷೆ ತೆಗೆದುಕೊಳ್ಳಬೇಕೆನ್ನುವ ನಿಯಮವಿತ್ತು, 2015 ರಿಂದ ಆ ನಿಯಮವನ್ನು ಕೈಬಿಡಲಾಗಿತ್ತು.
2. ಪರೀಕ್ಷೆ ಹಿಂದಿ ಮತ್ತು ಇಂಗ್ಲೀಶ್ ನಲ್ಲಿ ಮಾತ್ರ ಇದೆ, ಕನ್ನಡದಲ್ಲಿ ಇಲ್ಲ

ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಅವರು ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಭೇಟಿ ಮಾಡಿ ಮೊದಲನೇ ತೊಂದರೆಯ ಬಗ್ಗೆ ಮಾತನಾಡಿದ್ದಾರೆ.

2014ರ ಮುಂಚಿನ ಹಾಗೆ ನಿಯಮಾವಳಿ ಮಾಡಲು ಒತ್ತಾಯಿಸಿದ್ದಾರೆ, ಆದರೆ, 2ನೇ ತೊಂದರೆ- ಕನ್ನಡದಲ್ಲಿ ಪರೀಕ್ಷೆ ನೀಡಬೇಕಾದ ಬಗ್ಗೆ ತೇಜಸ್ವಿರವರ ಪತ್ರದಲ್ಲಿ ಪ್ರಸ್ತಾಪವಿಲ್ಲ ಎಂದು ಐಟಿ ಉದ್ಯೋಗಿ, ಕನ್ನಡ ಪರ ಹೋರಾಟಗಾರ ಅರುಣ್ ಜಾವಗಲ್ ಅವರು ಪ್ರತಿಕ್ರಿಯಿಸಿದ್ದಾರೆ.

Finance minister considers proposal Bank recruitment exams in local languages

ಮೊದಲನೇ ತೊಂದರೆಗೆ ಪರಿಹಾರ ಸಿಕ್ಕಿದ ಕೂಡಲೆ ಕನ್ನಡದಲ್ಲೂ ಪರೀಕ್ಷೆ ನೀಡಬೇಕೆಂದು ತೇಜಸ್ವಿ ಮತ್ತು ಪ್ರತಾಪ್ ಸಿಂಹ ರವರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿದ್ದು, ಇದೀಗ 2 ನೇ ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಒಪ್ಪಿಕೊಂಡಿದೆ, ಆದರೆ, ಇದೊಂದು ಸಣ್ಣ ಗೆಲುವಾಗಿದ್ದು, 2014 ರ ಮುಂಚಿನಂತೆ ನಿಯಮ ರೂಪಿಸಿದರೆ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.

English summary
Finance Minister Nirmala Sitharaman Thursday said she is looking into demands of MPs from southern states such as Karnataka for conducting bank recruitment exams in local language as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X