ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಸರ್ಚ್‌ ಇಂಡಿಯಾ: 'ಕೊರೊನಾ'ವನ್ನು ಹಿಂದೆ ಹಾಕಿದ 'ಸಿನಿಮಾ'

|
Google Oneindia Kannada News

ನವ ದೆಹಲಿ, ಜೂನ್ 8: ಕೊರೊನಾ ವೈರಸ್‌ ಭಾರತಕ್ಕೆ ಬಂದ ನಂತರ ಎಲ್ಲಿ ನೋಡಿದರೂ ಅದೇ ಸುದ್ದಿಯಾಗಿದೆ. ಟಿವಿ, ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ, ಜನ ಕೂಡ ಅದನೇ ಮಾತನಾಡುತ್ತಾರೆ. ಹೀಗಾಗಿರುವಾಗ ಗೂಗಲ್‌ನಲ್ಲಿಯೂ ಕೊರೊನಾ ಬಗ್ಗೆಯೇ ಮಾಹಿತಿ ಹುಡುಕುವವರ ಸಂಖ್ಯೆ ಹೆಚ್ಚಿದೆ.

Recommended Video

Chiranjeevi Sarja | ಅತ್ತಿಗೆ ಮೇಘನಾ ರಾಜ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಧೃವ ಸರ್ಜಾ | Filmibeat Kannada

ಅಚ್ಚರಿ ಅಂದರೆ, ಈಗ 'ಕೊರೊನಾ ವೈರಸ್‌'ಗಿಂತ 'ಸಿನಿಮಾ'ವನ್ನು ಜನ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದಾರೆ. ಗೂಗಲ್‌ ಮೇ ತಿಂಗಳ ಸರ್ಚ್‌ ಡಾಟಾ ವರದಿ ನೀಡಿದೆ. ಇದರಲ್ಲಿ ಭಾರತದಲ್ಲಿ ಜನರು ಕೊರೊನಾ ಬಗ್ಗೆ ಹುಡುಕಾಟ ನಡೆಸುತ್ತಿರುವುದು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಕೊರೊನಾಗಿಂತ ಜನರು ಸಿನಿಮಾಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ಹೆಚ್ಚಾಗಿದೆ.

ವೋಡಾಫೋನ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ ಸಾಧ್ಯತೆವೋಡಾಫೋನ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ ಸಾಧ್ಯತೆ

ಕಳೆದ ತಿಂಗಳಿಗಿಂತ ಈ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ದಿನವೂ ಪಾಸಿಟಿವ್‌ ಕೇಸ್‌ಗಳು ದೇಶದಲ್ಲಿ ಜಾಸ್ತಿಯಾಗುತ್ತಿವೆ. ಆದರೆ, ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಮೇ ತಿಂಗಳಿನಲ್ಲಿ ಗೂಗಲ್‌ನಲ್ಲಿ ಕೊರೊನಾ ಬಗ್ಗೆ ಸರ್ಚ್‌ ಮಾಡುವುದು ಇಳಿಕೆಯಾಗಿದೆ.

ಸಿನಿಮಾ, ಹವಮಾನ

ಸಿನಿಮಾ, ಹವಮಾನ

ಮೇ ತಿಂಗಳಲ್ಲಿ ಗೂಗಲ್‌ನಲ್ಲಿ ಜನರು ಚಲನಚಿತ್ರಗಳು ಮತ್ತು ಹವಾಮಾನದಂತಹ ವಿಷಯಗಳನ್ನು ಹೆಚ್ಚು ಹುಡುಕಿದ್ದಾರೆ. ಎರಡು ತಿಂಗಳು ಕೊರೊನಾ.. ಕೊರೊನಾ.. ಎಂದು ಇದ್ದ ಜನರು ಈಗ ನಿಧಾನವಾಗಿ ತಮ್ಮ ಸಾಮಾನ್ಯ ಜೀವನಕ್ಕೆ ಮರಳುವ ಮನೋಭಾವಕ್ಕೆ ಬಂದಿದ್ದಾರೆ ಎನ್ನುವುದು ಈ ಮೂಲಕ ತಿಳಿಯುತ್ತದೆ. ಸಿನಿಮಾ (films), ಹವಾಮಾನ (weather), ಅರ್ಥ (meaning), ನ್ಯೂಸ್ (News) ಎಂಬ ಪದಗಳು ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿವೆ.

ಲಾಕ್‌ಡೌನ್ 4.0

ಲಾಕ್‌ಡೌನ್ 4.0

ಮೇ ತಿಂಗಳ ಗೂಗಲ್‌ನಲ್ಲಿ ಟ್ರೆಂಡಿಂಗ್ ಪದದಲ್ಲಿ 'ಲಾಕ್‌ಡೌನ್ 4.0' ಇದೆ. ಅದರ ನಂತರ 'ಈದ್ ಮುಬಾರಕ್' ಇದೆ. ಮೇ ನಲ್ಲಿ ಭಾರತದಲ್ಲಿ ಲಾಕ್‌ಡೌನ್ 4.0 ಜಾರಿಗೆ ಬಂದಿತ್ತು. ಹಾಗೂ ಮೇ ತಿಂಗಳ ಕೊನೆಯಲ್ಲಿ ರಂಜಾನ್‌ ಹಬ್ಬ ಇದ್ದ ಕಾರಣ ಈ ಎರಡು ವಿಷಯಗಳನ್ನು ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಗಿದೆ. ಮಾರ್ಚ್‌ 25 ರಿಂದ ಭಾರತದಲ್ಲಿ ಲಾಕ್‌ಡೌನ್ ಶುರು ಆಗಿದ್ದು, ನಂತರ ಹಂತ ಹಂತವಾಗಿ ಸಡಿಲಿಕೆ ಆಗುತ್ತಿದೆ.

ನೆಟ್ಟಿಗರ ಪ್ರಶ್ನೆಗಳು

ನೆಟ್ಟಿಗರ ಪ್ರಶ್ನೆಗಳು

'Which disease is related to coronavirus?' (ಯಾವ ರೋಗವು ಕೊರೊನಾ ವೈರಸ್‌ಗೆ ಸಂಬಂಧಿಸಿದೆ?), Can asymptomatic people spread coronavirus? (ರೊಗಲಕ್ಷಣ ರಹಿತ ಜನರು ಕೊರೊನಾ ವೈರಸ್ ಅನ್ನು ಹರಡಬಹುದೇ?), Will lockdown extend after 17 May? (ಮೇ 17 ರ ನಂತರ ಲಾಕ್‌ಡೌನ್ ವಿಸ್ತರಿಸುವುದೇ?) ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಔಷಧಿ ಬಗ್ಗೆ ಹೆಚ್ಚು ಸರ್ಚ್‌

ಔಷಧಿ ಬಗ್ಗೆ ಹೆಚ್ಚು ಸರ್ಚ್‌

ಕೊರೊನಾ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಕಡಿಮೆಯಾಗಿದ್ದರೂ, ಕೊರೊನಾ ಸೋಂಕಿಗೆ ಔಷಧಿ ಎಂದು ಹುಡುಕಾಟ ನಡೆಸಿದ್ದು ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ಗೋವಾ, ಮೇಘಾಲಯ, ಚಂಡೀಗಡ ಮತ್ತು ತ್ರಿಪುರದಲ್ಲಿ ಕೊರೊನಾ ವೈರಸ್‌ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 257000ಕ್ಕೆ ಏರಿಕೆಯಾಗಿದೆ. 7,200 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

English summary
Google search trends in may: Topics like films, weather, meaning, news are top trending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X