ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್; 22 ರಾಜ್ಯಗಳಿಗೆ 890 ಕೋಟಿ ಬಿಡುಗಡೆ ಮಾಡಿದ ಕೇಂದ್ರ

|
Google Oneindia Kannada News

ನವದೆಹಲಿ, ಆಗಸ್ಟ್ 06: ಕೋವಿಡ್ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರ 22 ರಾಜ್ಯಗಳಿಗೆ 890.32 ಕೋಟಿ ರೂ. ಬಿಡುಗಡೆ ಮಾಡಿದೆ. ಉಪಕರಣಗಳ ಖರೀದಿ, ಸಿಬ್ಬಂದಿಗೆ ತರಬೇತಿ ಮುಂತಾದವುಗಳಿಗೆ ಈ ಅನುದಾನ ಖರ್ಚು ಮಾಡಬಹುದು.

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಅನುದಾನದಲ್ಲಿ 2ನೇ ಕಂತನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಐಸಿಯುಗಳ ಸ್ಥಾಪನೆ. ಕೋವಿಡ್ ಪರೀಕ್ಷೆ ಲ್ಯಾಬ್ ಆರಂಭ ಸೇರಿದಂತೆ ತುರ್ತು ಅಗತ್ಯಗಳಿಗೆ ಇದನ್ನು ಬಳಕೆ ಮಾಡಬಹುದು.

ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗೆ ಮದ್ಯ ಪೂರೈಕೆ! ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗೆ ಮದ್ಯ ಪೂರೈಕೆ!

ಕರ್ನಾಟಕ, ಛತ್ತೀಸ್‌ಗಢ, ಗುಜರಾತ್, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ 22 ರಾಜ್ಯಗಳಿಗೆ ಈ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ. ಏಪ್ರಿಲ್‌ನಲ್ಲಿ ಮೊದಲ ಹಂತದ ಅನುದಾನಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು.

ಬೆಂಗಳೂರು; ಒಂದೇ ವಾರ್ಡ್‌ 37 ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕು ಬೆಂಗಳೂರು; ಒಂದೇ ವಾರ್ಡ್‌ 37 ಪೌರ ಕಾರ್ಮಿಕರಿಗೆ ಕೋವಿಡ್ ಸೋಂಕು

Fight Against COVID 19 Union Govt Released 890 Crore To 22 States

ಈ ಅನುದಾನವನ್ನು ಆರ್‌ಟಿ-ಪಿಸಿಆರ್ ಉಪಕರಣ ಖರೀದಿ, ಆಕ್ಸಿಜನ್ ಜನರೇಟರ್ ಸ್ಥಾಪನೆ, ಆಮ್ಲಜನಕ ವಿತರಣೆ ವ್ಯವಸ್ಥೆ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಉಪಯೋಗಕ್ಕೆ ಬಳಕೆ ಮಾಡಬಹುದಾಗಿದೆ.

ಕೋವಿಡ್ ಪರಿಸ್ಥಿತಿಯಲ್ಲಿ; ಖಾಸಗಿ ಆಸ್ಪತ್ರೆ ಕರ್ತವ್ಯಗಳುಕೋವಿಡ್ ಪರಿಸ್ಥಿತಿಯಲ್ಲಿ; ಖಾಸಗಿ ಆಸ್ಪತ್ರೆ ಕರ್ತವ್ಯಗಳು

ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡಲು ಬೇಕಾದ ಸಿಬ್ಬಂದಿ ನೇಮಕಾತಿ, ತರಬೇತಿ ಮುಂತಾದವುಗಳಿಗೆ ಸಹ ರಾಜ್ಯಗಳು ಖರ್ಚು ಮಾಡಬಹುದು. ಹಲವು ರಾಜ್ಯಗಳು ಕೋವಿಡ್ ಪರಿಸ್ಥಿತಿ ಎದುರಿಸಲು ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

English summary
Union government released Rs 890.32 crore to 22 states to fight against Covid-19. State govt can use this fund for setting up ICU beds and engaging and training volunteers etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X