• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್‌ ಮೇಲೆ ಕಣ್ಣು

|

ನವದೆಹಲಿ, ಏಪ್ರಿಲ್ 10: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ 2ನೇ ಹೆಜ್ಜೆ ಇಡಲಿದೆ. ಮೊದಲ ಹಂತದಲ್ಲಿ ಲಾಕ್ ಡೌನ್ ಆಯಿತು. ಈಗ ಕಂಟೇನ್‍ಮೆಂಟ್ ಝೋನ್‌ಗಳ ಮೇಲೆ ಗಮನ ಕೇಂದ್ರಿಕರಿಸಲಾಗುತ್ತದೆ.

   ಬಡವರಿಗಾಗಿ ಸರ್ಕಾರ ವಿತರಿಸುತ್ತಿರುವ ಹಾಲಿನಲ್ಲೂ ಹಗರಣ | Oneindia Kannada

   ದೇಶದಲ್ಲಿ 100ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕಂಟೇನ್‍ಮೆಂಟ್ ಝೋನ್‌ಗಳನ್ನು ಗುರುತಿಸಲಾಗಿದೆ. ಒಟ್ಟು 1,100 ಕಂಟೇನ್‍ಮೆಂಟ್ ಝೋನ್‌ಗಳಿದ್ದು, ಇಲ್ಲಿಂದ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ.

   ಲಾಕ್ ಡೌನ್ ಮತ್ತು ಹಾಟ್‌ ಸ್ಪಾಟ್‌ಗಳಿಗಿರುವ ವ್ಯತ್ಯಾಸವೇನು?

   ಕಂಟೇನ್‍ಮೆಂಟ್ ಝೋನ್‌ಗಳಲ್ಲಿ ಬಿಗಿಯಾದ ನಿಯಮಗಳು ಜಾರಿಯಲ್ಲಿ ಇರುತ್ತದೆ. ಒಂದು ಪ್ರದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಅದನ್ನು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತದೆ.

   ಲಾಕ್ ಡೌನ್; ಕೃಷಿ ಚುಟವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ

   ಒಂದೊಂದು ಜಿಲ್ಲೆಯನ್ನೂ ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇಲ್ಲಿಂದ ಯಾರೂ ಹೊರ ಬರುವಂತಿಲ್ಲ, ಯಾರು ಒಳ ಹೋಗುವಂತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಬಿಟ್ಟು ಬೇರೆಯವರಿಗೆ ಪ್ರವೇಶವಿಲ್ಲ.

   ಲಾಕ್ ಡೌನ್ ತೆರವು; ಸಾರಿಗೆ ಇಲಾಖೆ ಕುರಿತು ತಜ್ಞರ ಶಿಫಾರಸುಗಳು

   ಪೊಲೀಸರು ಈ ಪ್ರದೇಶವನ್ನು ಸೀಲ್ ಮಾಡುತ್ತಾರೆ. ಈ ಪ್ರದೇಶಕ್ಕೆ ಬರುವ, ಹೋಗುವ ರಸ್ತೆ ಬಂದ್ ಆಗುತ್ತದೆ. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶವಿಲ್ಲ.

   ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 401 ಕಂಟೇನ್‍ಮೆಂಟ್ ಝೋನ್‌ಗಳಿವೆ (ಮುಂಬೈ 381, ಪುಣೆ 20). ಉತ್ತರ ಪ್ರದೇಶದಲ್ಲಿ 105, ರಾಜಸ್ಥಾನದಲ್ಲಿ 38, ಮಧ್ಯಪ್ರದೇಶದಲ್ಲಿ 180 ಕಂಟೇನ್‍ಮೆಂಟ್ ಝೋನ್‌ಗಳಿವೆ.

   ತಮಿಳುನಾಡಿನಲ್ಲಿ 220, ಆಂಧ್ರಪ್ರದೇಶದಲ್ಲಿ 121 ಕಂಟೇನ್‍ಮೆಂಟ್ ಝೋನ್‌ಗಳಿವೆ. ಪೊಲೀಸರು ದಿನದ 24 ಗಂಟೆಯೂ ಇಲ್ಲಿ ಕಾವಲು ಇರುತ್ತಾರೆ. ಇಲ್ಲಿ ಜನರ ಓಡಾಟದ ಮೇಲೆ ನಿಗಾ ಇಡಲು ಸಿಸಿಟಿವಿ, ಡ್ರೋಣ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ.

   ಕಂಟೇನ್‍ಮೆಂಟ್ ಝೋನ್‌ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಹ ಜನರು ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳ ಸರಬರಾಜಿಗೆ ಕೋವಿಡ್- 19 ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗುತ್ತಿದೆ.

   English summary
   Fight against coronavirus in India. Now focus has shifted to 1,100 containment zones. Containment zone announced in the state where 100 or more COVID-19 cases have been reported.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X