ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ, ನಾಗಾಲ್ಯಾಂಡ್ ನಲ್ಲಿ ಮತ್ತೆ ಕಂಪಿಸಿದ ಭೂಮಿ

|
Google Oneindia Kannada News

ಛಾಂಪಾಯ್, ಜೂನ್.25: ಪ್ರಕೃತಿ ವಿಕೋಪಕ್ಕೆ ಈಶಾನ್ಯ ರಾಜ್ಯಗಳು ತತ್ತರಿಸಿ ಹೋಗುತ್ತಿದೆ. ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಮೀಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಮತ್ತೊಮ್ಮೆ ಧರೆಯು ಕಂಪಿಸಿದೆ.

ಮೀಜೋರಾಂನಲ್ಲಿ ಮಧ್ಯರಾತ್ರಿ 1 ಗಂಟೆ 14 ನಿಮಿಷದ ಸಮಯದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು ದಕ್ಷಿಣ ಛಾಂಪಾಯ್ ನಿಂದ 21 ಕಿಲೋ ಮೀಟರ್ ದೂರದಲ್ಲಿದೆ ಎಂದು ಗುರುತಿಸಲಾಗಿದೆ.

48 ಗಂಟೆಗಳಲ್ಲಿ ಮಿಜೋರಾಂನಲ್ಲಿ 3ನೇ ಭೂಕಂಪ: 4.1 ತೀವ್ರತೆ ದಾಖಲು48 ಗಂಟೆಗಳಲ್ಲಿ ಮಿಜೋರಾಂನಲ್ಲಿ 3ನೇ ಭೂಕಂಪ: 4.1 ತೀವ್ರತೆ ದಾಖಲು

ಮೀಜೋರಾಂನಲ್ಲಿ ನಾಲ್ಕನೇ ಬಾರಿ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಕಳೆದ 48 ಗಂಟೆಗಳಲ್ಲೇ ಮೂರು ಬಾರಿ ಮಿಜೋರಾಂನಲ್ಲೇ ಧರೆಯು ಕಂಪಿಸಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸಿತ್ತು.

Fifth time in Three Days: 4.5-magnitude earthquake hits Mizoram

ಬುಧವಾರವೂ ಮಿಜೋರಾಂನಲ್ಲಿ ಕಂಪಿಸಿದ ಭೂಮಿ:

ಕಳೆದ 48 ಗಂಟೆಗಳಲ್ಲಿ ಮೂರು ಬಾರಿ ಮಿಜೋರಾಂನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದ್ದು, ಇದಕ್ಕೂ ಮೊದಲೇ ಎರಡು ಬಾರಿ ಭೂಕಂಪ ಸಂಭವಿಸಿತ್ತು. ಒಂದು 5.5 ತೀವ್ರತೆಯ ಭೂಕಂಪವಾಗಿದ್ದರೆ ಮಂಗಳವಾರ ಸಂಭವಿಸಿದ ಭೂಕಂಪದ ತೀವ್ರತೆ 3.7ರಷ್ಟಿತ್ತು.

ನಾಗಾಲ್ಯಾಂಡ್ ನಲ್ಲೂ ಕಂಪಿಸಿದ ಭೂಮಿ:

ಮಿಜೋರಾಂ ಅಷ್ಟೇ ಅಲ್ಲದೇ ನಾಗಾಲ್ಯಾಂಡ್ ನಲ್ಲೂ ಕೂಡಾ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 3 ಗಂಟೆ 3 ನಿಮಿಷಕ್ಕೆ ಉತ್ತರದ ವಾಯುವ್ಯ ಭಾಗದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿದೆ.

English summary
Fifth time in Three Days: 4.5-magnitude earthquake hits Mizoram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X