ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 24 ಗಂಟೆಗಳಲ್ಲಿನ ನಾನಾ ಸುದ್ದಿಗಳ ಚಿತ್ರ ಸಂಪುಟ

|
Google Oneindia Kannada News

ಕಳೆದ 24 ಗಂಟೆಗಳಲ್ಲಿ ವಿಶ್ವದೆಲ್ಲೆಡೆ ಅಂದೆಥದ್ದೋ ಘಟನೆಗಳು ಜರುಗಿವೆ. ಎಲ್ಲೆಲ್ಲೋ ಏನೋನೋ ಆಗಿದೆ.

ಉದಾಹರಣೆಗೆ, ಟರ್ಕಿಯ ಎಡಿರ್ನಿಯಲ್ಲಿ ಶುಕ್ರವಾರ ಹಿಡೆರೆಲೆಜ್ ಎಂಬ ಸಾಂಪ್ರದಾಯಿಕ ಹಬ್ಬ, ಶನಿವಾರ ಬೆಳಗ್ಗೆ ದಕ್ಷಿಣ ದೆಹಲಿಯ ತುಘಲಕಾಬಾದ್ ಪ್ರಾಂತ್ಯದಲ್ಲಿರುವ ರೈಲ್ವೇ ಕಾಲೋನಿಯಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಮಕ್ಕಳು ವಿಷಾನಿಲ ಉಸಿರಾಟದಿಂದಾಗಿ ಅಸ್ವಸ್ಥರಾಗಿದ್ದು ಮುಂತಾದ ಘಟನೆಗಳು ನಡೆದಿವೆ.

ಇನ್ನು, ಅಹ್ಮದಾಬಾದ್ ನಲ್ಲಿ ಜೈನ ಧರ್ಮ ಸಂಸ್ಥಾಪಕರಾದ ಮಹಾವೀರನ ಸ್ವರ್ಣ ವರ್ಣದ 10 ಅಡಿ ಎತ್ತರದ ಮೂರ್ತಿಯನ್ನು ಮೆರವಣಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ತಿರುಪತಿಗೆ ಭೇಟಿ ನೀಡಿದರು. ತಿರುಮಲದಲ್ಲಿ ಬಾಲಾಜಿಯ ದರ್ಶನ ಪಡೆದಿದ್ದೂ ಇದರಲ್ಲಿ ಸೇರಿದೆ.

ಇಂಥವೇ ಕೆಲವಾರು ಘಟನೆಗಳ ಚಿತ್ರ ಸಂಪುಟ, ಸಂಕ್ಷಿಪ್ತ ವಿವರಗಳ ಸಹಿತ ಇಲ್ಲಿ ನಿಮಗಾಗಿ....

ಅಗ್ನಿ ನರ್ತನ

ಅಗ್ನಿ ನರ್ತನ

ಟರ್ಕಿಯ ಎಡಿರ್ನಿಯಲ್ಲಿ ಶುಕ್ರವಾರ ಹಿಡೆರೆಲೆಜ್ ಎಂಬ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲಾಯಿತು. ಪ್ರತಿ ಊರಿನಲ್ಲಿ ಸಾವಿರಾರು ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಆಗ, ಬೆಂಕಿ ಹಾಕಿ ಅದರ ಸುತ್ತಲೂ ನೃತ್ಯ ಮಾಡುವ ಸಂಪ್ರದಾಯವಿದೆ. ಅಂಥದ್ದೇ ಒಂದು ಸಂಭ್ರಮದಲ್ಲಿ ಪಾಲ್ಗೊಂಡಿರುವ ಮಹಿಳೆ, ಹಿಡೆರೆಲೆಜ್ ನಲ್ಲಿ ಕ್ಯಾಮೆರಾ ಕಣ್ಣಿಗೆ ಹೀಗೆ ಕಂಡಳು.

ವಿಷಾನಿಲದ ಎಫೆಕ್ಟ್

ವಿಷಾನಿಲದ ಎಫೆಕ್ಟ್

ಶನಿವಾರ ಬೆಳಗ್ಗೆ ದಕ್ಷಿಣ ದೆಹಲಿಯ ತುಘಲಕಾಬಾದ್ ಪ್ರಾಂತ್ಯದಲ್ಲಿರುವ ರೈಲ್ವೇ ಕಾಲೋನಿಯಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಮಕ್ಕಳು ವಿಷಾನಿಲ ಉಸಿರಾಟದಿಂದಾಗಿ ಅಸ್ವಸ್ಥರಾಗಿದ್ದರು. ಹೀಗೆ ಅಸ್ವಸ್ಥರಾದ ಒಬ್ಬ ಬಾಲಕಿಯನ್ನು ಆರೈಕೆ ಮಾಡುತ್ತಿರುವ ವೈದ್ಯೆ.

ಭಕ್ತಿ ಭಾವದ ಮೆರವಣಿಗೆ

ಭಕ್ತಿ ಭಾವದ ಮೆರವಣಿಗೆ

ಜೈನ ಧರ್ಮದ 2573ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ, ಅಹ್ಮದಾಬಾದ್ ನಲ್ಲಿ ಮಹಾಮೆರವಣಿಗೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ, ಜೈನ ಧರ್ಮ ಸಂಸ್ಥಾಪಕರಾದ ಮಹಾವೀರನ ಸ್ವರ್ಣ ವರ್ಣದ 10 ಅಡಿ ಎತ್ತರದ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

ಇಂದ್ರಪುರಿಯ ಮಹಲು ಧರೆಗೆ

ಇಂದ್ರಪುರಿಯ ಮಹಲು ಧರೆಗೆ

ದೆಹಲಿಯ ಇಂದ್ರಪುರಿ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟವೊಂದು ಶನಿವಾರ ಕುಸಿದಿದೆ.

ನಟಿಯ ಸೆಲ್ಫಿ

ನಟಿಯ ಸೆಲ್ಫಿ

ಶುಕ್ರವಾರ (ಮೇ 5) ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ನಂತರ ಪಂಜಾಬ್ ತಂಡದ ಸಹ ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಪಂಜಾಬ್ ತಂಡದ ಆಟಗಾರ ಸಂದೀಪ್ ಶರ್ಮಾ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು.

ತಿಮ್ಮಪ್ಪನ ದರುಶನದಿಂದ ಧನ್ಯ

ತಿಮ್ಮಪ್ಪನ ದರುಶನದಿಂದ ಧನ್ಯ

ಶುಕ್ರವಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ತಿರುಪತಿಗೆ ಭೇಟಿ ನೀಡಿದರು. ತಿರುಮಲದಲ್ಲಿ ಬಾಲಾಜಿಯ ದರ್ಶನ ಪಡೆದು ದೇಗುಲದಿಂದ ಹೊರಗಡೆ ಬಂದಾಗ ಕಂಡಿದ್ದು ಹೀಗೆ.

ಜನಸಾಗರದಲ್ಲಿ ನಿರ್ಭಯಾ ಪೋಷಕರು

ಜನಸಾಗರದಲ್ಲಿ ನಿರ್ಭಯಾ ಪೋಷಕರು

ಶುಕ್ರವಾರ, ಸುಪ್ರೀಂ ಕೋರ್ಟ್ ನಲ್ಲಿ ನಿರ್ಭಯಾ ಪ್ರಕರಣದ ತೀರ್ಪು ಪ್ರಕಟಗೊಂಡಿತು. ಆನಂತರ, ಕೋರ್ಟ್ ನಿಂದ ಹೊರಟ ನಿರ್ಭಯಾ ತಾಯಿ ಆಶಾ ದೇವಿ ಕೋರ್ಟ್ ನಿಂದ ಹೊರಬಂದಾಗ ಕಂಡ ದೃಶ್ಯವಿದು.

English summary
World at a glance.... 'Hidirellez' festival in Turkey, Jain community take part in a procession with a 10-feet gold plated idol of lord 'Mahavir' etc. Here are such 6 top stories with beautiful photos and brief caption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X