ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಲಕ್ಷ ಸರ್ಕಾರಿ ನೌಕರರಿಗೆ ಹಬ್ಬದ ಬೋನಸ್ ಕೊಟ್ಟ ಮೋದಿ ಸರ್ಕಾರ

|
Google Oneindia Kannada News

ನವದೆಹಲಿ, ಸೆ. 18: ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ದಸರಾ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದಿಂದ ಬೋನಸ್ ಘೋಷಣೆಯಾಗಿದೆ. ಬುಧವಾರದಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, 78 ದಿನಗಳ ವೇತನವನ್ನು ಉತ್ಪಾದನಾ ಬೋನಸ್ ರೂಪದಲ್ಲಿ ನೀಡುವುದಾಗಿ ಘೋಷಿಸಿದರು. ಇದರಿಂದ ಸುಮಾರು 11 ಲಕ್ಷ ಮಂದಿ ರೈಲ್ವೆ ಸಿಬ್ಬಂದಿಗೆ ಪ್ರಯೋಜನ ಸಿಗಲಿದೆ.

ಮೋದಿ ಹುಟ್ಟುಹಬ್ಬದ ದಿನ 6 ಕೋಟಿ ನೌಕರರಿಗೆ ಕೇಂದ್ರದಿಂದ ಶುಭ ಸುದ್ದಿಮೋದಿ ಹುಟ್ಟುಹಬ್ಬದ ದಿನ 6 ಕೋಟಿ ನೌಕರರಿಗೆ ಕೇಂದ್ರದಿಂದ ಶುಭ ಸುದ್ದಿ

"ಸತತ 6 ವರ್ಷಗಳಿಂದ ರೈಲ್ವೆ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಬೋನಸ್ ನೀಡುತ್ತಾ ಬಂದಿದೆ. ಈ ಬಾರಿ ಬೋನಸ್ ನೀಡುವುದರಿಂದ ಒಟ್ಟಾರೆ 2019-20ರ ಅವಧಿಯಲ್ಲಿ ಸರ್ಕಾರಿ ಬೊಕ್ಕಸಕ್ಕೆ 2024 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ. 1979-80ರ ನಂತರ ಮತ್ತೊಮ್ಮೆ Productivity linked ಬೋನಸ್ ಜಾರಿಗೆ ತರಲಾಗುತ್ತಿದೆ" ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.

Festival Bonus For CG Employees 78 Day Wage Bonus Announced

ಒಟ್ಟಾರೆ, 11.52 ನಾನ್ ಗೆಜೆಟೆಡ್ ರೈಲ್ವೆ ಸಿಬ್ಬಂದಿ(ಆರ್ ಪಿಎಫ್/ ಆರ್ ಪಿ ಎಸ್ ಎಫ್ ಹೊರತುಪಡಿಸಿ) ಗಳಿಗೆ ಈ ಬೋನಸ್ ಸಿಗಲಿದೆ. ಬೋನಸ್ ನೀಡುವುದರ ಮುಖ್ಯ ಉದ್ದೇಶ ಸಂಸ್ಥೆಯ ಉತ್ಪಾದನಾ ಕಾರ್ಯಕ್ಷಮತೆ ಹೆಚ್ಚಳ ಮಾಡುವುದಾಗಿದೆ. 2019ರ ಕೇಂದ್ರ ಬಜೆಟ್ ನಲ್ಲಿ ಭಾರತೀಯ ರೈಲ್ವೆಗೆ 65, 837 ಕೋಟಿ ರು ಮೀಸಲಿಡಲಾಗಿದೆ. ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ, ನೇಮಕಾತಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

English summary
Railways employees to get 78-days wages as productivity bonus: Union Minister Javadekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X