ರಸಗೊಬ್ಬರ ಸಬ್ಸಿಡಿ ನೇರವಾಗಿ ರೈತರ ಖಾತೆಗೆ

Subscribe to Oneindia Kannada

ನವದೆಹಲಿ, ಆಗಸ್ಟ್, 25: ರೈತರಿಗೆ ನೆರವಾಗಲು ರಸಗೊಬ್ಬರ ದರದಲ್ಲಿ ಭಾರೀ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ನೀಡಲು ಮುಂದಾಗಿದೆ.

ಎಲ್‌ಪಿಜಿ ಸಬ್ಸಿಡಿ ನೇರ ನಗದು ವರ್ಗಾವಣೆ ಯೋಜನೆಯಂತೆಯೇ ಇಲ್ಲಿಯೂ ಸಬ್ಸಿಡಿ ಹಣದ ನೇರ ವರ್ಗಾವಣೆಗೆ ಮುಂದಾಗಿದೆ. ಸಬ್ಸಿಡಿ ನೇರ ಪಾವತಿ ಯೋಜನೆ ಆರಂಭದಲ್ಲಿ 16 ಜಿಲ್ಲೆಗಳಲ್ಲಿ ಬರುವ ನವೆಂಬರ್ 1 ರಿಂದ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದ್ದು, ನಂತರ ದೇಶಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.[ರಸಗೊಬ್ಬರ ದರ ಗಣನೀಯ ಇಳಿಕೆ: ಕೇಂದ್ರಕ್ಕೆ ಧನ್ಯವಾದ]

 Fertilizers subsidy direct transfer scheme to farmers

ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ ಈ ವರ್ಷ 70 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಜುಲೈ ಆರಂಭದಲ್ಲಿ ರಸಗೊಬ್ಬರ ದರ ಇಳಿಕೆ ಮಾಡಿ ರೈತರಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಅಂಥದ್ದೆ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ.[ಉಡುಪಿಯಲ್ಲಿ ಖರ್ಜೂರ ಬೆಳೆದು ತೋರಿಸಿದ ಸಾಧಕ!]

ಗೊಬ್ಬರ ದರ ಇಳಿಕೆ ಪಟ್ಟಿ ಹೀಗಿತ್ತು
ಗೊಬ್ಬರ ದರ ಕಡಿತ ಪಟ್ಟಿ
* ಡಿಎಪಿ- 50 ಕೆಜಿಯ ಚೀಲದ ಡಿಎಪಿ ಮೇಲೆ 125 ರು. ಕಡಿತ
* ಎಮ್ ಒಪಿ- 50 ಕೆಜಿಯ ಚೀಲದ ಡಿಎಪಿ ಮೇಲೆ 250 ರು. ಕಡಿತ
* ಎನ್ ಪಿಕೆ- 50 ಕೆಜಿಯ ಚೀಲದ ಡಿಎಪಿ ಮೇಲೆ ಸರಾಸರಿ 50 ರು. ಕಡಿತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The much awaited direct benefit transfer (DBT) scheme in fertilizers will be rolled out on a pilot basis in 16 districts of the country on November 1. Union fertilizer minister Ananth Kumar informed.
Please Wait while comments are loading...