ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಂವಿಧಾನ ಮೂಲ ದಾಖಲೆಯಲ್ಲಿ ಶ್ರೀರಾಮಚಂದ್ರ

|
Google Oneindia Kannada News

ನವದೆಹಲಿ, ಆ.5: ಆಯೋಧ್ಯೆಯಲ್ಲಿ ಶ್ರೀರಾಮ ಚಂದ್ರ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ವಿಶೇಷವಾದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಈ ಶುಭ ಸಂದರ್ಭದಲ್ಲಿ ಈ ಚಿತ್ರ ಹಂಚಿಕೊಳ್ಳುವ ಮನಸ್ಸಾಯಿತು ಎಂದಿರುವ ರವಿಶಂಕರ್ ಪ್ರಸಾದ್ ಅವರು ಹಂಚಿಕೊಂಡಿದ್ದು ಶ್ರೀರಾಮ ಚಂದ್ರನ ವಿಶೇಷ ಚಿತ್ರ.

ಭಾರತೀಯ ಸಂವಿಧಾನದ ಮೂಲ ಪ್ರತಿ, ದಾಖಲೆಯ ಮೇಲ್ಭಾಗದಲ್ಲಿ ಶ್ರೀರಾಮಚಂದ್ರನ ಚಿತ್ರವಿದೆ. ಲಂಕೆಯಲ್ಲಿ ರಾವಣನನ್ನು ಕೊಂದ ಶ್ರೀರಾಮ, ಮಾತಾ ಸೀತಾ, ಸೋದರ ಲಕ್ಷ್ಮಣನ ಜೊತೆಗೆ ಅಯೋಧ್ಯೆಗೆ ಹಿಂತಿರುಗುತ್ತಿರುವ ಚಿತ್ರ ಇದಾಗಿದೆ ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

Felt like sharing it: An image of Lord Ram in the Indian Constitution

ಭಾರತದಲ್ಲಿ ಪಾಲನೆಯಾಗಬೇಕಿರುವ ಮೂಲಭೂತ ಹಕ್ಕುಗಳ ಅಧ್ಯಾಯ ಆರಂಭಕ್ಕೂ ಮುನ್ನ ಕಾಣುವ ಈ ಚಿತ್ರವನ್ನು ಈ ಕ್ಷಣ ಹಂಚಿಕೊಳ್ಳುವ ಮನಸ್ಸಾಯಿತು ಎಂದು ಹೇಳಿದರು. ರಾಮಲಲ್ಲಾಗೆ ರಾಮ ಜನ್ಮ ಭೂಮಿ ಆಸ್ತಿ ದೊರಕಿಸಿಕೊಡಲು ನಡೆಸಿದ ಕಾನೂನು ಹೋರಾಟದಲ್ಲಿ ರವಿಶಂಕರ್ ಪ್ರಸಾದ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಮರೆಯುವಂತಿಲ್ಲ.

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಸಾಧು ಸಂತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶುಭ ಲಗ್ನದಲ್ಲಿ ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.

English summary
As the nation awaits the grand event at Ayodhya which would set the stage for the construction of the grand Ram Mandir, Union Minister, Ravi Shankar Prasad tweeted an image of the original document of the Indian Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X