ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಯುವತಿಯ ಬಹಿರಂಗ ಹಾಡುಗಾರಿಕೆ ವಿರುದ್ಧ ಫತ್ವಾ

ಉದಯೋನ್ಮುಖ ಗಾಯಕಿಯೊಬ್ಬಳ ಹಾಡುಗಾರಿಕೆಯನ್ನು ತಡೆಯಲು 42 ಇಸ್ಲಾಂ ಧರ್ಮಗರುಗಳಿಂದ ಫತ್ವಾ ಹೊರಡಿಸಲಾಗಿದೆ.

|
Google Oneindia Kannada News

ಶೋನಿಪುರ (ಅಸ್ಸಾಂ), ಮಾರ್ಚ್ 15: ಇಲ್ಲಿನ ಮುಸ್ಲಿ ಬಾಲಕಿಯೊಬ್ಬಳು ಹಾಡುಗಾರಿಕೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವುದನ್ನು ತಡೆಯುವ ಉದ್ದೇಶದಿಂದ ಆಕೆಯು ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಗಳಲ್ಲಿ ಹಾಡಬಾರದೆಂದು ಫತ್ವಾ ಹೊರಡಿಸಲಾಗಿದೆ. ಷಿರಿಯಾ ಕಾನೂನಿನ ಆಧಾರದ ಮೇಲೆ 46 ಇಸ್ಲಾಂ ಧರ್ಮಗುರುಗಳಿಂದ ಈ ಫತ್ವಾ ಹೊರಡಿಸಲಾಗಿದೆ.

ಕರ್ನಾಟಕದಲ್ಲಿ ಸುಹಾನಾ ಎಂಬ ಮುಸ್ಲಿಂ ಯುವತಿಯೊಬ್ಬಳು ಟಿವಿ ರಿಯಾಲಿಟಿ ಷೋ ಒಂದರಲ್ಲಿ ಹಿಂದೂ ಭಕ್ತಿಗೀತೆ ಹಾಡಿದ್ದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿರುದ್ಧ ಟೀಕೆಗಳು ಬಂದು, ಅದು ವಿವಾದವಾಗಿ ಮಾರ್ಪಟ್ಟ ಘಟನೆ ಮಾಸುವ ಮುನ್ನವೇ ಅಸ್ಸಾಂನಲ್ಲಿ ಫತ್ವಾ ಹೊರಡಿಸಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

Fatwa Against Muslim Girl for Performing in Public

ಅಸ್ಸಾಂನ ನಹೀದ್ ಅಫ್ರಿನ್ ಎಂಬ ಗಾಯಕಿ 2015ರಲ್ಲಿ ಟಿವಿ ವಾಹಿನಿಯೊಂದರ ಹಾಡುಗಾರಿಕೆಗೆ ಸಂಬಂಧಿಸಿದ ರಿಯಾಲಿಟಿ ಷೋನಲ್ಲಿ ರನ್ನರ್ ಅಪ್ ಆಗಿದ್ದರು. ಈ ಸಾಧನೆಯೊಂದಿಗೆ ಮತ್ತಷ್ಟು ಉತ್ತೇಜಿತರಾಗಿರುವ ಅವರು, ಹಲವಾರು ಸಮಾರಂಭಗಳಲ್ಲಿ ಹಾಡುತ್ತಾ ಬಂದಿದ್ದಾರೆ.

ಇತ್ತೀಚೆಗೆ, ಸಮಾರಂಭವೊಂದರಲ್ಲಿ ಅವರು ಹಾಡಿದ ಹಾಡು ಇಸ್ಲಾಂ ಮೂಲಭೂತವಾದವನ್ನು ಪ್ರತಿಪಾದಿಸುವ ಐಎಸ್ಐಎಸ್ ಉಗ್ರ ಸಂಘಟನೆಯನ್ನು ಹೀಯಾಳಿಸುವ ಅರ್ಥವನ್ನು ಹೊಂದಿತ್ತೆಂದು ಹೇಳಲಾಗಿದೆ. ಹಾಗಾಗಿಯೇ, ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಫತ್ವಾದ ಹಿಂದಿನ ನೈಜ ಕಾರಣಗಳ ಶೋಧದಲ್ಲಿ ನಿರತರಾಗಿದ್ದಾರೆ.

English summary
A Fatwa has issued against a Muslim girl in Assam to restrict her from singing in public places. Citing Sharia laws, 46 Muslim clerics have issued this fatwa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X