ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: ಸ್ಕೂಟರ್‌ನಲ್ಲಿದ್ದ ಪಟಾಕಿ ಸಿಡಿದು ತಂದೆ ಮಗ ಸಾವು!

|
Google Oneindia Kannada News

ಪುದುಚೇರಿ, ನವೆಂಬರ್ 5: ಅದು ಇಡೀ ದೇಶ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಲುಯುತ್ತಿದ್ದ ಸಮಯ. ಪಟಾಕಿ ಸಿಡಿಸಿ ದೀಪದ ಹಬ್ಬವನ್ನು ಆಚರಿಸುವುದಕ್ಕಾಗಿ ಹೊರಟಿದ್ದ ತಂದೆ ಮಗ ಇಬ್ಬರೂ ಸಾವಿನ ಮನೆ ಸೇರಿದ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಗುರುವಾರ ದೀಪಾವಳಿ ಹಬ್ಬಕ್ಕಾಗಿ ಸ್ಕೂಟರ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಪಟಾಕಿ ಸ್ಫೋಟಗೊಂಡು ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವ ಘಟನೆ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ನಡೆದಿದೆ.
ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಪ್ರದೇಶದಿಂದ ಕೂನಿಮೇಡು ಗ್ರಾಮಕ್ಕೆ ತಂದೆ ಕಾಲೈನಸನ್ ಮತ್ತು 7 ವರ್ಷದ ಮಗ ಪ್ರದೀಪ್ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಪಟಾಕಿ ಸಿಡಿದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇಬ್ಬರು ಪಟಾಕಿಗಳ ಕಟ್ಟುಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಿಢೀರನೇ ಬೆಂಕಿ ಹೊತ್ತಿಕೊಂಡು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಪಾವಳಿಗೆ ದೆಹಲಿ ವಾಯುಮಾಲಿನ್ಯ ಹೆಚ್ಚಳ: SAFAR ಕಳವಳದೀಪಾವಳಿಗೆ ದೆಹಲಿ ವಾಯುಮಾಲಿನ್ಯ ಹೆಚ್ಚಳ: SAFAR ಕಳವಳ

ವೈರಲ್ ವಿಡಿಯೋದಲ್ಲಿ ಇರುವುದೇನು?:
ತಂದೆ ಕಲೈನಾಸನ್ ಸ್ಕೂಟರ್ ಓಡಿಸುತ್ತಿದ್ದಾಗ, ಅವರ ಮಗ ಪ್ರದೀಪ್ ವಾಹನದ ಮುಂಭಾಗದಲ್ಲಿ ಇರಿಸಲಾಗಿದ್ದ ಪಟಾಕಿಗಳ ಬಂಡಲ್ ಮೇಲೆ ಕುಳಿತುಕೊಂಡಿದ್ದನು. ಈ ವೇಳೆ ವೇಗವಾಗಿ ಸಂಚರಿಸುತ್ತಿದ್ದ ಬೈಕ್ ದಿಢೀರನೇ ಸ್ಫೋಟಗೊಂಡಿದೆ. ಘಟನೆಯಲ್ಲಿ ಬಾಲಕ ಮತ್ತು ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ದೃಶ್ಯದಲ್ಲಿ ಕಂಡು ಬಂದಿದೆ.

Father And Son Died After Firecrackers Loaded on Scooter Explode in Puducherry

ಮೂವರಿಗೆ ಗಾಯ:
ಗುರುವಾರ ನಡೆದ ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್)ನಲ್ಲಿ ದಾಖಲಿಸಲಾಗಿದೆ. ಪಟಾಕಿ ಸ್ಫೋಟದಿಂದಾಗಿ ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

English summary
Father And Son Died After Firecrackers Loaded on Scooter Explode in Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X