ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.1ರಿಂದ ಫಾಸ್‌ಟ್ಯಾಗ್ ದೇಶದೆಲ್ಲೆಡೆ ಕಡ್ಡಾಯ; ರೀಚಾರ್ಜ್ ಹೇಗೆ?

|
Google Oneindia Kannada News

ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ ಫಾಸ್‌ಟ್ಯಾಗ್ (FASTag) ಹೊಂದುವುದು ಕಡ್ಡಾಯವಾಗಲಿದೆ.

ಸದ್ಯ ಸೇ 80ರಷ್ಟು ನಗದುರಹಿತ ವ್ಯವಹಾರ ಸಾಧಿಸಲಾಗಿದ್ದು, ಜನವರಿ 1, 2021ರಿಂದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಈ ಮೂಲಕ ಸಂಪೂರ್ಣವಾಗಿ ಟೋಲ್‌ಗಳಲ್ಲಿ ನಗದು ಬಳಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಸದ್ಯದಲ್ಲೇ ಮಾಲ್‌ಗಳು, ವಿಮಾನ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಫಾಸ್ಟ್‌ಟ್ಯಾಗ್ ಬಳಕೆಸದ್ಯದಲ್ಲೇ ಮಾಲ್‌ಗಳು, ವಿಮಾನ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಫಾಸ್ಟ್‌ಟ್ಯಾಗ್ ಬಳಕೆ

ಸದ್ಯ ದಿನವೊಂದಕ್ಕೆ 93 ಕೋಟಿ ರು ಸಂಗ್ರಹವಾಗುತ್ತಿದ್ದು, ಪ್ರತಿ ದಿನ 100 ಕೋಟಿ ರು ಸುಂಕ ಸಂಗ್ರಹದ ಗುರಿ ಹೊಂದಲಾಗಿದೆ. ಸುಮಾರು 2 ಕೋಟಿಗೂ ಅಧಿಕ ಮಂದಿ ಫಾಸ್ಟ್‌ಟ್ಯಾಗ್ ಬಳಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?

ಫಾಸ್‌ಟ್ಯಾಗ್ ಬ್ರ್ಯಾಂಡ್ ಹೆಸರು ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತದ (ಐಎಚ್‌ಎಂಸಿಎಲ್) ಸ್ವಾಮ್ಯಕ್ಕೆ ಒಳಪಟ್ಟಿದೆ. 2014ರಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡರೂ ಸಂಪೂರ್ಣವಾಗಿ ಜನವರಿ 1, 2020ರಿಂದ ಜಾರಿಗೊಳ್ಳಲಿದೆ. ಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ(ಎನ್ ಇಟಿಸಿ) ವ್ಯವಸ್ಥೆಯಡಿಯಲ್ಲಿ ಎಲ್ಲಾ ಟೋಲ್ ಪ್ಲಾಜಾಗಳಲ್ಲೂ ಫಾಸ್ಟ್ ಟ್ಯಾಗ್ ಬಳಸಬಹುದಾಗಿದೆ.

ಫಾಸ್‌ಟ್ಯಾಗ್ ಕಾರ್ಯ ನಿರ್ವಹಣೆ ಹೇಗೆ?

ಫಾಸ್‌ಟ್ಯಾಗ್ ಕಾರ್ಯ ನಿರ್ವಹಣೆ ಹೇಗೆ?

ಫಾಸ್‌ಟ್ಯಾಗ್ ಒಂದು ರೀತಿ ವಾಹನಗಳ 'ಆಧಾರ್ ಕಾರ್ಡ್‌'ನಂತೆ ಕಾರ್ಯ ನಿರ್ವಹಿಸುತ್ತದೆ. ರೇಡಿಯೋ ತರಂಗಾಂತರ ಗುರುತು (ಆರ್‌ಎಫ್‌ಐಡಿ) ಅಥವಾ ಆರ್‌ಎಫ್‌ಐಡಿ ತಂತ್ರಜ್ಞಾನವು ವಾಹನ ಟೋಲ್ ಫ್ಲಾಜಾದ ಮೂಲಕ ಸಾಗುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಫಾಸ್‌ಟ್ಯಾಗ್‌ನಲ್ಲಿರುವ ಹಣ ಕಡಿತಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಉದ್ದುದ್ದಾ ಕ್ಯೂ ನಿಂತುಕೊಂಡು ಸಾಗುವ ದೃಶ್ಯ ಇನ್ಮುಂದೆ ಅದೃಶ್ಯವಾಗಲಿದೆ.

ಎಲ್ಲಿ ಪಡೆಯುವುದು? ಆಕ್ಟಿವೇಷನ್ ಹೇಗೆ

ಎಲ್ಲಿ ಪಡೆಯುವುದು? ಆಕ್ಟಿವೇಷನ್ ಹೇಗೆ

ಬ್ಯಾಂಕ್ , ಟೋಲ್ ಪ್ಲಾಜಾಗಳಲ್ಲಿ ಲಭ್ಯ ಎಚ್ ಡಿ ಎಫ್ ಸಿ, ಐಸಿಐಸಿಐ, ಸಿಂಡಿಕೇಟ್, ಐಡಿ ಎಫ್ ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕಿನಿಂದ ಫ್ಯಾಸ್ಟ್ ಟ್ಯಾಗ್ ಪಡೆದುಕೊಳ್ಳಬಹುದು. ನಂತರ ಫ್ಯಾಸ್ಟ್ ಟ್ಯಾಗ್ ಸ್ಟೀಕರ್ ನಿಮ್ಮ ವಾಹನದ ಮುಂಭಾಗದ ವಿಂಡ್ ಸ್ಕ್ರೀನ್ ಗೆ ಹಾಕಬೇಕು.

My FASTag ಆಪ್ ಬಳಸಿ ವಾಹನ ಸಂಖ್ಯೆ ನೀಡಿ activate ಮಾಡಬಹುದು. ನಿಮ್ಮ ಸಮೀಪದ ಪ್ರಮಾಣೀಕೃತ ಬ್ಯಾಂಕಿಗೆ ತೆರಳಿ ಫಾಸ್ಟ್ ಟ್ಯಾಗ್ ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು.

ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?

ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?

Indian Highways Management Company Ltd.Productivity ಒಡೆತನದ ಈ ಆಪ್ ಬಳಸಿ ತ್ವರಿತವಾಗಿ ಯುಪಿಐ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.

ರೀಚಾರ್ಜ್ ಮಾಡಲು ಕ್ರೆಡಿಟ್/ ಡೆಬಿಟ್/ ಎನ್ ಇಎಫ್ ಟಿ/ ಆರ್ ಟಿಜಿಎಸ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬಹುದು. 100 ರು ನಿಂದ 1 ಲಕ್ಷ ರು ತನಕ ಮಾತ್ರ ರೀಚಾರ್ಜ್ ಮಾಡಬಹುದು. FASTag ಪ್ರೀಪೇಯ್ಡ್ ವ್ಯಾಲೆಟ್ ನಲ್ಲಿ 20,000 ರು ತನಕ ಮಾತ್ರ ಹೊಂದಬಹುದು. ಪ್ರತಿ ತಿಂಗಳ ಮಿತಿ ಇದಾಗಿದೆ. ಪೂರ್ತಿ ಕೆವೈಸಿ ಫಾಸ್ಟ್ ಟ್ಯಾಗ್ ಖಾತೆ ದಾರರಿಗೆ ಮಾತ್ರ 1 ಲಕ್ಷ ರು ತನಕ ಪ್ರೀ ಪೇಯ್ಡ್ ವ್ಯಾಲೆಟ್ ಹೊಂದಲು ಅವಕಾಶವಿದೆ. ಹಾಗೂ ರೀಚಾರ್ಜ್ ಕೂಡಾ ಮಾಡಿಸಿಕೊಳ್ಳಬಹುದು. ಪ್ರತಿ ಫಾಸ್ಟ್ ಟ್ಯಾಗ್ ಪ್ರತಿ ವಾಹನಕ್ಕೆ ವಿಶಿಷ್ಟವಾಗಿದ್ದು, ಎರಡು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಹೊಂದಲು ಅವಕಾಶವಿಲ್ಲ.

ಟ್ರಾವೆಲ್ಸ್ ವಾಹನಗಳ ಸಂಕಷ್ಟ

ಟ್ರಾವೆಲ್ಸ್ ವಾಹನಗಳ ಸಂಕಷ್ಟ

ಫಾಸ್‌ಟ್ಯಾಗ್ ವ್ಯವಸ್ಥೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವವರು ಟ್ರಾವೆಲ್ಸ್ ವಾಹನಗಳ ಮಾಲೀಕರು. ಅವರು ತಮ್ಮ ವಾಹನಗಳಿಗೆ ಫಾಸ್‌ಟ್ಯಾಗ್ ಬಳಸಲು ಪ್ರತ್ಯೇಕ ಖಾತೆಗಳನ್ನು ತೆರೆದು ಅದರಲ್ಲಿ ಹೆಚ್ಚಿನ ಹಣ ಜಮೆ ಮಾಡಬೇಕಾಗುತ್ತದೆ. ನಿರಂತರ ವ್ಯವಹಾರಗಳನ್ನು ನಡೆಸುವುದರಿಂದ ಅವರು ತಮ್ಮ ದೈನಂದಿನ ವ್ಯವಹಾರಗಳ ಖಾತೆಯಲ್ಲದೆ ವಾಹನಗಳಿಗೆಂದೇ ಪ್ರತ್ಯೇಕ ಖಾತೆ ತೆರೆಯಬೇಕಾದ ಕಷ್ಟಕ್ಕೆ ಸಿಲುಕಲಿದ್ದಾರೆ.

ವಾಹನ ಮಾಲೀಕರು ತಮ್ಮ ಬ್ಯಾಂಕ್ ಖಾತೆ ಅಥವಾ ಫಾಸ್‌ಟ್ಯಾಗ್ ವ್ಯಾಲೆಟ್‌ನಲ್ಲಿ ಸೂಕ್ತ ಪ್ರಮಾಣದ ಬ್ಯಾಲೆನ್ಸ್ ಕಾಪಾಡಿಕೊಳ್ಳದೆ ಇದ್ದರೆ ಆ ಫಾಸ್‌ಟ್ಯಾಗ್‌ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಫಾಸ್‌ಟ್ಯಾಗ್ ಹೊಂದಿದ್ದರೂ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿರದೆ ಇದ್ದರೆ ಅದು ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನ್‌ಇಟಿಸಿ) ಸೇವೆಗಳಿಗೆ ಒಳಪಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಗದು ರೂಪದಲ್ಲಿ ಸುಂಕ ಪಾವತಿಸುವ ಅವಕಾಶವಿದೆ. ಆದರೆ, ಇನ್ಮುಂದೆ ಏನು ಮಾಡುವುದು ಎಂದು ಟ್ರಾವೆಲ್ಸ್ ಏಜೆನ್ಸಿಗಳು ತಲೆ ಕೆಡಿಸಿಕೊಂಡಿವೆ.

English summary
FASTags mandatory from Jan 2021. Here is How to use FastTag app and recharge it. Apart from toll plazas, FASTags are available in banks which the authorities have signed up with.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X