ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FASTag ಇಂದಿನಿಂದ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ದಂಡ

|
Google Oneindia Kannada News

Recommended Video

Fastag Mandatory from today , if failed pay double toll | FASTAG | HIGHWAY | TOLL | ONEINDIA KANNADA

ನವದೆಹಲಿ, ಜನವರಿ 16: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಗುರುವಾರದಿಂದ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನ ಸವಾರರು ದುಪ್ಪಟ್ಟು ಸುಂಕ ತೆರಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಈಗಾಗಲೇ ಎರಡು ಬಾರಿ ಅಂತಿಮ ಗಡುವನ್ನು ವಿಸ್ತರಿಸಿದ್ದ ಕೇಂದ್ರ ಸರ್ಕಾರ, ಕಳೆದ ತಿಂಗಳು ನೀಡಿದ್ದ ಜ.15ರ ಗಡುವು ಅಂತ್ಯಗೊಂಡಿದೆ. ಹೀಗಾಗಿ ಗುರುವಾರದಿಂದ ನಿಯಮ ಜಾರಿಯಾಗಿದೆ.

ಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹ

ಅತ್ಯಧಿಕ ನಗದು ವ್ಯವಹಾರ ನಡೆಯುವ 65 ಆಯ್ದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ನಿಯಮದಲ್ಲಿ ಕೊಂಚ ವಿನಾಯಿತಿ ನೀಡಲಾಗಿದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಪಂಜಾಬ್, ಚಂಡೀಗಢ ಮತ್ತು ಆಂಧ್ರಪ್ರದೇಶದ ಪ್ಯಾನ್ ಇಂಡಿಯಾದ 65 ಟೋಲ್ ಪ್ಲಾಜಾಗಳಲ್ಲಿ ಶೇ 100ರಷ್ಟು ಕಡ್ಡಾಯ ಫಾಸ್ಟ್‌ಟ್ಯಾಗ್ ಜಾರಿಯಾಗಿಲ್ಲ.

FASTag Mandatory From Today Fails You will Be Penalised

ಮುಂದಿನ 30 ದಿನಗಳವರೆಗೆ ಈ 65 ಟೋಲ್ ಪ್ಲಾಜಾಗಳಲ್ಲಿ ಶೇ 75ರಷ್ಟು ಲೇನ್‌ಗಳು ಫಾಸ್ಟ್‌ಟ್ಯಾಗ್ ಲೇನ್ ಗಳಾಗಿರಲಿದ್ದು, ಉಳಿದ ಶೇ 25 ಲೇನ್‌ಗಳಲ್ಲಿ ನಗದು ರೂಪದಲ್ಲಿ ಟೋಲ್ ಸ್ವೀಕೃತಿಗೆ ಅನುಮತಿ ನೀಡಲಾಗಿದೆ.

ಫಾಸ್ಟ್ಯಾಗ್ ಬಳಿಕ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರಫಾಸ್ಟ್ಯಾಗ್ ಬಳಿಕ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳು ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿಗಳ ಸುಂಕದ ಕಟ್ಟೆಗಳಲ್ಲಿ ದುಪ್ಪಟ್ಟು ದಂಡ ತೆರಬೇಕಿರುವುದು ಅನಿವಾರ್ಯವಾಗಿದೆ. ಆದರೆ ನಿಮ್ಮ ಕಾರ್ ಮೇಲಿನ ಫಾಸ್ಟ್‌ಟ್ಯಾಗ್ ಕೆಲಸ ಮಾಡದೆ ಹೋದರೆ ಏನು ಮಾಡುವುದು? ಒಂದು ವೇಳೆ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಲು ಪ್ರತಿ ಲೇನ್‌ಗಳಲ್ಲಿ ಅಳವಡಿಸಿರುವ ಯಂತ್ರಗಳು ವಿಫಲವಾದರೆ ವಾಹನಗಳಿಂದ ಟೋಲ್ ಸಂಗ್ರಹಿಸದೆ ಉಚಿತವಾಗಿ ಮುಂದೆ ಸಾಗಲು ಬಿಡುವಂತೆ ಸರ್ಕಾರ ಸೂಚಿಸಿದೆ.

FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?

ವಾಹನ ಬಳಕೆದಾರರು ಸೂಕ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಮತ್ತು ಸಂಪರ್ಕಿಸಿರುವ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿದ್ದರೆ, ಟೋಲ್ ಫ್ಲಾಜಾದಲ್ಲಿ ಅಳವಡಿಸಿರುವ ವಿದ್ಯುನ್ಮಾನ ಸುಂಕ ಸಂಗ್ರಹ ಸಾಧನವು ಅದನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲವಾದರೂ ಬಳಕೆದಾರರು ಯಾವುದೇ ಹಣ ತೆರದೆ ಮುಕ್ತವಾಗಿ ಪ್ಲಾಜಾವನ್ನು ದಾಟಿ ಸಾಗಲು ಅನುವು ಮಾಡಿಕೊಡಲಾಗಿದೆ. ಅಂತಹ ಎಲ್ಲ ವರ್ಗಾವಣೆಗಳಿಗೂ ಶೂನ್ಯ ವರ್ಗಾವಣೆ ರಶೀದಿಯನ್ನು ನೀಡುವುದು ಕಡ್ಡಾಯವಾಗಿದೆ.

English summary
Using FASTag in National Highways across India is mandatory from Jan 16. If the user still do not have a FASTag in his vehicle will have to pay fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X