• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಡಿಸ್ಕೌಂಟ್ ಪಡೆಯಲು ಫಾಸ್ಟ್‌ಟ್ಯಾಗ್ ಕಡ್ಡಾಯ

|

ನವದೆಹಲಿ, ಆಗಸ್ಟ್ 27: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಎಲ್ಲಾ ರಿಯಾಯಿತಿಯನ್ನು ಪಡೆಯಲು ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಈ ನಿಟ್ಟಿನಲ್ಲಿ ಈಗಾಗಲೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.

"ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಹಿಂದಿರುಗುವ(ರಿಟರ್ನ್) ಪ್ರಯಾಣದ ರಿಯಾಯಿತಿ ಅಥವಾ ಟೋಲ್ ಶುಲ್ಕ ಪ್ಲಾಜಾಗಳಲ್ಲಿ ಯಾವುದೇ ವಿನಾಯಿತಿಗಳನ್ನು ಪಡೆಯಲು ಫಾಸ್ಟ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸಿದೆ. 24 ಗಂಟೆಗಳ ಒಳಗೆ ಅಥವಾ ಇನ್ನಾವುದೇ ಸ್ಥಳೀಯರಿಗೆ ಹಿಂದಿರುಗುವ ಪ್ರಯಾಣವನ್ನು ಮಾಡಲು ರಿಯಾಯಿತಿ ಪಡೆಯಲು ಬಯಸುವ ಬಳಕೆದಾರರು ಫಾಸ್ಟ್‌ಟ್ಯಾಗ್ ಹೊಂದುವುದು ಅಗತ್ಯವಾಗಿರುತ್ತದೆ "ಎಂದು ಸಚಿವಾಲಯ ಹೇಳಿದೆ.

ಫಾಸ್ಟ್‌ಟ್ಯಾಗ್ ಹೆಸರಲ್ಲಿ ಯುವಕರಿಗೆ 64 ಸಾವಿರ ವಂಚನೆ ಫಾಸ್ಟ್‌ಟ್ಯಾಗ್ ಹೆಸರಲ್ಲಿ ಯುವಕರಿಗೆ 64 ಸಾವಿರ ವಂಚನೆ

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿಗಳ ಬಳಕೆಯನ್ನು ಉತ್ತೇಜಿಸುವ ಮತ್ತೊಂದು ಹೆಜ್ಜೆ ಇದು ಎಂದು ಅದು ಹೇಳಿದೆ. ಅಂತಹ ರಿಯಾಯಿತಿಗಳಿಗೆ ಪಾವತಿಸಬೇಕಾದ ಶುಲ್ಕವನ್ನು ಪೂರ್ವ-ಪಾವತಿಸಿದ ಉಪಕರಣಗಳು, ಸ್ಮಾರ್ಟ್ ಕಾರ್ಡ್ ಅಥವಾ ಫಾಸ್ಟ್‌ಟ್ಯಾಗ್‌ ಮೂಲಕ ಅಥವಾ ಬೋರ್ಡ್ ಯುನಿಟ್ (ಟ್ರಾನ್ಸ್‌ಪಾಂಡರ್) ಅಥವಾ ಅಂತಹ ಯಾವುದೇ ಸಾಧನದ ಮೂಲಕ ಮಾತ್ರ ಪಾವತಿಸಲಾಗುವುದು ಎಂದು ಅದು ಹೇಳಿದೆ.

ಈ ನಿಟ್ಟಿನಲ್ಲಿ 2008 ರ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಗಳ ನಿರ್ಣಯ) ನಿಯಮಗಳಿಗೆ ತಿದ್ದುಪಡಿ ಮಾಡುವುದರಿಂದ 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣದ ಮೇಲೆ ರಿಯಾಯಿತಿ ಸಿಗುತ್ತದೆ.

24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ರಿಯಾಯಿತಿ ಲಭ್ಯವಿದ್ದಲ್ಲಿ, ಪೂರ್ವ ರಶೀದಿ ಅಥವಾ ಮಾಹಿತಿಯ ಅಗತ್ಯವಿಲ್ಲ. ಏಕೆಂದರೆ ಈ ಪ್ರಯಾಣಗಳಿಗೆ ಬಳಕೆದಾರರು ಸ್ವಯಂಚಾಲಿತವಾಗಿ ರಿಯಾಯಿತಿಯನ್ನು ಪಡೆಯುತ್ತಾರೆ.

English summary
The government on Wednesday said it has made FASTag mandatory for availing all discounts on National Highways toll plazas. It has issued a gazette notification in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X