ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್‌ಲಾಕ್‌ ಮಾಡುವ ಮುನ್ನ ಯೋಚಿಸಿ; ಎಚ್ಚರಿಕೆ ಕೊಟ್ಟ ವರದಿ

|
Google Oneindia Kannada News

ನವದೆಹಲಿ, ಜೂನ್ 24: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಕೆಯಾಗುತ್ತಿದ್ದಂತೆಯೇ ಹಲವು ರಾಜ್ಯಗಳಲ್ಲಿ ಹೇರಿದ್ದ ಕೊರೊನಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಲಸಿಕೆ ಪ್ರಮಾಣವನ್ನು ತಿಳಿಯದೇ ಲಾಕ್‌ಡೌನ್ ಸಡಿಲಿಕೆ ಮಾಡಿರುವುದು ಅಪಾಯಕ್ಕೆ ಎಡೆ ಮಾಡಿಕೊಡಲಿದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.

ಹಲವು ರಾಜ್ಯಗಳಲ್ಲಿ ಲಸಿಕೆ ಪ್ರಮಾಣವನ್ನು ಗಮನಿಸುವ ಬದಲು ಪಾಸಿಟಿವಿಟಿ ದರ ಕಡಿಮೆ ದಾಖಲಾದ ಆಧಾರದ ಮೇಲೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಈ ಕಾರ್ಯತಂತ್ರ ಅಪಾಯಕಾರಿಯಾಗಿದೆ. ಇದು ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣವನ್ನು ಇನ್ನಷ್ಟು ವಿಳಂಬಗೊಳಿಸುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ಮುಖ್ಯಸ್ಥರಾದ ಪ್ರಿಯಾಂಕಾ ಕಿಶೋರ್ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

 ಹಲವು ರಾಜ್ಯಗಳಲ್ಲಿ ನಿರ್ಬಂಧ ಸಡಿಲಿಕೆ

ಹಲವು ರಾಜ್ಯಗಳಲ್ಲಿ ನಿರ್ಬಂಧ ಸಡಿಲಿಕೆ

"ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಹಲವು ರಾಜ್ಯಗಳು ಮತ್ತೆ ನಿರ್ಬಂಧಗಳನ್ನು ತೆರವುಗೊಳಿಸಿದವು. ಇದರಿಂದಾಗಿ ಜೂನ್ ಮಧ್ಯಭಾಗದಲ್ಲಿ ಸೋಂಕಿನ ಚಲನಶೀಲತೆ ಪ್ರಮಾಣ ಕಡಿಮೆಯಾಗಿದೆ. ಆದರೆ ಸದ್ಯದಲ್ಲಿಯೇ ಮೊದಲ ಪರಿಸ್ಥಿತಿ ಮತ್ತೆ ಹಿಂದಿರುಗಬಹುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಒಂದೇ ದಿನ 54069 ಮಂದಿಗೆ ಕೊರೊನಾವೈರಸ್ಭಾರತದಲ್ಲಿ ಒಂದೇ ದಿನ 54069 ಮಂದಿಗೆ ಕೊರೊನಾವೈರಸ್

"ರಾಜ್ಯಗಳು ಮೈಮರೆಯುವುದು ವಿವೇಕಯುತವಲ್ಲ"

ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ 3.9%ರಷ್ಟು ಜನರಿಗೆ ಮಾತ್ರ ಸಂರ್ಪೂಣ ಲಸಿಕೆ ಹಾಕಲಾಗಿದೆ. ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಆರ್ಥಿಕವಾಗಿ ಮುಂದಿರುವ ರಾಜ್ಯಗಳು ಕೂಡ ಇನ್ನೂ ಸುರಕ್ಷಿತ ಲಸಿಕಾ ಮಟ್ಟವನ್ನು ತಲುಪಿಲ್ಲ ಎಂಬುದನ್ನು ಗಮನಿಸಬೇಕು. ಆದರೂ ಇಲ್ಲೆಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಸದ್ಯಕ್ಕೆ ಲಸಿಕೆ ಪರಿಸ್ಥಿತಿ ಗಮನಿಸಿ ಜಾಗರೂಕತೆಯಿಂದ ಇರಬೇಕಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕೊರೊನಾ ಪ್ರಕರಣಗಳ ಕುಸಿತದ ಹಿನ್ನೆಲೆಯಲ್ಲಿ ರಾಜ್ಯಗಳ ಮೈಮರೆಯುವ ತಂತ್ರವು ವಿವೇಕಯುತವಲ್ಲ ಮತ್ತು ಅನೇಕ ರಾಜ್ಯಗಳಲ್ಲಿ ಲಸಿಕೆ ವ್ಯಾಪ್ತಿ ಕಡಿಮೆ ಇರುವುದರಿಂದ ಸೋಂಕುಗಳ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

 ಭಾರತದಲ್ಲಿ 54,069 ಮಂದಿಗೆ ಕೊರೊನಾ ಸೋಂಕು

ಭಾರತದಲ್ಲಿ 54,069 ಮಂದಿಗೆ ಕೊರೊನಾ ಸೋಂಕು

ಕಳೆದ 24 ಗಂಟೆಗಳಲ್ಲಿ 54,069 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 68,885 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸೋಂಕಿಗೆ 1,321 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 3,00,82,778 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,90,63,740 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಒಟ್ಟು 3,91,981 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 6,27,057 ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಡೆಲ್ಟಾ ರೂಪಾಂತರಿ 85 ದೇಶಗಳಲ್ಲಿ ಪತ್ತೆ, ಪ್ರಬಲ ವಂಶಾವಳಿಯಾಗುವ ಸಾಧ್ಯತೆ: WHOಡೆಲ್ಟಾ ರೂಪಾಂತರಿ 85 ದೇಶಗಳಲ್ಲಿ ಪತ್ತೆ, ಪ್ರಬಲ ವಂಶಾವಳಿಯಾಗುವ ಸಾಧ್ಯತೆ: WHO

 30,16,26,028 ಜನರಗೆ ಕೊವಿಡ್-19 ಲಸಿಕೆ

30,16,26,028 ಜನರಗೆ ಕೊವಿಡ್-19 ಲಸಿಕೆ

ಭಾರತದಲ್ಲಿ ಇದುವರೆಗೂ 30,16,26,028 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕು ಪರೀಕ್ಷೆ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿದೆ. 20 ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸುತ್ತಿದ್ದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,59,469 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೂ 39,78,32,667 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

English summary
Fast unlocking and lesser vaccination rates risk renewed Covid spike, says report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X