ರೈತರ ಮುಷ್ಕರ: ಹಾಲು, ತರಕಾರಿ ಮಾರಾಟದಲ್ಲಿ ವ್ಯತ್ಯಯ

ಬೆಂಗಳೂರು, ಜೂನ್ 1: ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್ನಡಿ ಇಂದಿನಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಿವೆ.
ಹತ್ತು ದಿನಗಳ ಕಾಲ ನಡೆಯಲಿರುವ ಈ ರೈತರ ಹೋರಾಟದಲ್ಲಿ 130 ಸಂಘಟನೆಗಳು ಭಾಗವಹಿಸುತ್ತಿದ್ದರೆ ಕಳೆದ ವರ್ಷ ಇದೇ ಸಂಘಟನೆಗಳ ಅಡಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ 193 ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿರುವುದು ರೈತರ ಹೋರಾಟದ ಯಶಸ್ಸು ಕುರಿತಂತೆ ಹಲವಾರು ಅನುಮಾನಗಳನ್ನು ಹುಟ್ಟಿಸಿದೆ.
ಸಾಲಮನ್ನಾ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 10 ದಿನಗಳ ನಿರಂತರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ. ತರಕಾರಿ ಇನ್ನಿತರೆ ವಸ್ತುಗಳ ಮಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ರೈತರು ಈ ಬಾರಿ ದೃಢ ಮನಸ್ಸಿನಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಿಂದ ಮಧ್ಯಪ್ರದೇಶದವರೆಗೆ ಹತ್ತು ದಿನಗಳ ಕಾಲ ಭಾರಿ ಪ್ರಮಾಣದ ರೈತರ ಹೋರಾಟ ದೇಶದಲ್ಲೇ ಸಂಚಲವನ್ನು ಸೃಷ್ಟಿಸಿತ್ತು. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘದ ನಿಯೋಜಕ ಶಿವಕುಮಾರ್ ಕಕ್ಕಾಜೆ ಶರ್ಮಾ ಎರಡು ಬಗೆಯ ರೈತ ಸಂಘಟನೆಗಳಿವೆ.
ಮತ್ತೆ ಭುಗಿಲೇಳಲಿದೆ ದೇಶಾದ್ಯಂತ ರೈತರ ಮುಷ್ಕರ
ಒಂದು ಬಗೆಯ ಸಂಘಟನೆಗಳು ರೈತರ ಕಲ್ಯಾಣಕ್ಕಾಗಿ ಹೋರಾಡುತ್ತವೆ. ಇನ್ನು ಕೆಲವು ಸಂಘಟನೆಗಳು ರೈತರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಅಂತಹ ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿವೆ. 150 ಕ್ಕೂ ಹೆಚ್ಚು ಸಂಘಟನೆಗಳು ರೈತರ ಪರವಾಗಿ ರಾಜಕೀಯೇತರ ಸಂಘಟನೆಗಳಾಗಿ ಕೆಲಸ ಮಾಡುತ್ತಿದ್ದು, ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ, ಪಾಲ್ಗೊಳ್ಳದ ರೈತ ಸಂಘ
ಮಹಾರಾಷ್ಟ್ರದಲ್ಲಿ ಸ್ವಾಭಿಮಾನ ಶೆಟ್ಕರಿ ಸಂಘ ಸಾಲಮನ್ನಾ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಆದರೆ ಭಾರತೀಯ ಕಿಸಾನ್ ಸಂಘ ಪ್ರತಿಭಟನೆಯಿಂದ ದೂರ ಉಳಿದಿದೆ.

ರೈತರ ಪ್ರಮುಖ ಬೇಡಿಕೆಗಳೇನು?
ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 10 ದಿನಗಳ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ದೇಶಾದ್ಯಂತ ಈ ಪ್ರತಿಭಟನೆ ನಡೆಯುತ್ತಿದೆ. ಅವರ ಪ್ರಮುಖ ಬೇಡಿಕೆಗಳೆಂದರೆ ಸಂಪೂರ್ಣ ಸಾಲ ಮನ್ನಾ, ಉತ್ಪನ್ನಗಳಿಗೆ ಅಧಿಕ ಬೆಂಬಲ ಬೆಲೆ ನಿಗದಿ, ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳು ಸರ್ಕಾರದ ಮುಂದಿದೆ.

ಮಧ್ಯಪ್ರದೇಶದಲ್ಲಿ 200 ಸಿಸಿಕ್ಯಾಮರಾ ಹಾಗೂ 20 ಡ್ರೋಣ್ ಕ್ಯಾಮರಾ ಬಳಕೆ
ಐದು ಕಂಪನಿಗಳು ಹಾಗೂ ಪೊಲೀಸರು ಜತೆಗೂಡಿ ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಯುವ ಸುತ್ತಮುತ್ತಲಪ್ರದೇಶದಲ್ಲಿ 200 ಸಿಸಿಕ್ಯಾಮರಾಟಗಳು ಹಾಗೂ 20 ಟ್ರೋಣ್ ಕ್ಯಾಮರಾಗಳನ್ನು ಬಳಸಿ ಪ್ರತಿಭಟನೆ ಮೇಲೆ ಕಣ್ಗಾವಲಿಡಲಾಗಿದೆ.

ಉತ್ತರಪ್ರದೇಶದಲ್ಲಿ ಕಿಸಾನ್ ಅವಕಾಶ್ ಸಂಘ ಪ್ರತಿಭಟನೆ
ಉತ್ತರ ಪ್ರದೇಶದಲ್ಲಿ ಕಿಸಾನ್ ಅವಕಾಶ್ ಸಂಘ ಪ್ರತಿಭಟನೆಗೆ ಕರೆ ನೀಡಿದ್ದು, ಸ್ವಾಮಿನಾಥನ್ ಆಯೋಗ ವರದಿ ಹಾಗೂ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.
|
ಪಂಜಾಬ್ನಲ್ಲಿ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ
ಪಂಜಾಬ್ನಲ್ಲಿ ರೈತರು ಅವರು ಬೆಳೆದ ತರಕಾರಿಗಳನ್ನು ಬೀದಿಗೆ ಚೆಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಪಂಜಾಬ್ನ ಫರಿದ್ಕೋಟ್ನಲ್ಲಿ ತರಕಾರಿಗಳು, ಹಣ್ಣು, ಹಾಲುಗಳನ್ನು ರಸ್ತೆಗೆ ಚೆಲ್ಲಿ ರೈತರು ಸರ್ಕರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
|
ಜೂನ್ 10ರಂದು ಭಾರತ ಬಂದ್ ಮಾಡಲು ರೈತರ ನಿರ್ಧಾರ
ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ರೈತರು ಈಗಾಗಲೇ 10 ದಿನದ ಮುಷ್ಕರ ಹಮ್ಮಿಕೊಂಡಿದ್ದಾರೆ. ಅಂತೆಯೇ ಜೂನ್ 10ರಂದು ಮಧ್ಯಾಹ್ನ 2 ಗಂಟೆಯವರೆಗೆ ಭಾರತ್ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘ ಅಧ್ಯಕ್ಷ ಶಿವಕುಮಾರ್ ಶರ್ಮಾ ತಿಳಿಸಿದ್ದಾರೆ.