ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆ ಆಲೂಗಡ್ಡೆ ಸುರಿದು ಪ್ರತಿಭಟನೆ

Posted By:
Subscribe to Oneindia Kannada

ಲಖನೌ, ಜನವರಿ 06: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಖನೌನ ಅಧಿಕೃತ ನಿವಾಸದ ಮುಂದೆ ಇಂದು ಆಲೂಗಡ್ಡೆ ರಾಶಿ ಬಿದ್ದಿದೆ.

ಆಲೂಗಡ್ಡೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಬಹು ದಿನದಿಂದ ಒತ್ತಾಯಿಸುತ್ತಿರುವ ಉತ್ತರ ಪ್ರದೇಶದ ಆಲೂಗಡ್ಡೆ ಬೆಳೆಗಾರರು ತಾವು ಬೆಳೆದ ಆಲೂಗಡ್ಡೆಯನ್ನು ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ರಾಶಿ ಸುರಿದು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್ ಅವರ ಮನೆ ಮುಂದೆ ಮಾತ್ರವಲ್ಲದೆ, ರಾಜಭವನದ ಮುಂದೆ ಹಾಗೂ ಉತ್ತರ ಪ್ರದೇಶ ಕೃಷಿ ಸಚಿವರ ಮನೆಗಳ ಮುಂದೆಯೂ ರೈತರು ಆಲೂಗಡ್ಡೆ ಸುರಿದು ಪ್ರತಿಭಟನೆ ಮಾಡಿದ್ದಾರೆ.

Farmers Poured potatoes in front of CM Yogi Adityanath

ಉತ್ತರ ಪ್ರದೇಶದ ಪ್ರಮುಖ ಬೆಳೆಗಳಲ್ಲಿ ಒಂದಾದ ಆಲೂಗಡ್ಡೆಗೆ ಬೆಡಿಕೆ ಕುಸಿದಿದ್ದು, ಶೀಘ್ರವಾಗಿ ಆಲೂಗಡ್ಡೆ 10 ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers of Uttar Pradesh poured potatoes in front of CM Yogi Adityanath to protest against govt. Farmers demanding to hike the potato price.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ