ಮಧ್ಯಪ್ರದೇಶದಲ್ಲಿ ರೈತ ಆತ್ಮಹತ್ಯೆ: ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದ ಹೀನಾಯ ಸ್ಥಿತಿ!

Posted By:
Subscribe to Oneindia Kannada

ಶಿವಪುರಿ (ಮಧ್ಯಪ್ರದೇಶ), ಜೂನ್ 16: ಸಾಲ ತೀರಿಸಲಾಗದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ನಡೆದಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಲ್ಲ(55) ಎಂಬ ರೈತನ ಕುಟುಂಬದ ಬಳಿ ಆತನ ಅಂತ್ಯ ಸಂಸ್ಕಾರಕ್ಕೂ ಹಣವಿರಲಿಲ್ಲ. ನಂತರ ಊರಿನವರೆಲ್ಲ ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?

Farmer commits suicide in Madhya Pradesh

ರೈತರ ಸಾಲ ಮನ್ನಾ ಮತ್ತು ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕುರಿತಂತೆ ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ ಎದ್ದಿದ್ದ ಹೋರಾಟದ ಕಿಚ್ಚಿನಲ್ಲಿ ಆರು ರೈತರು ಮೃತರಾಗಿದ್ದರು.

ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರೈತರನ್ನು ಭೇಟಿ ಮಾಡಿ ಮಾತನಾಡಿದ ನಂತರ ಪರಿಸ್ಥಿತಿ ತಣ್ಣಗಾಗಿತ್ತು. ಈ ಘಟನೆ ನಡೆದ ಮೂರ್ನಾಲ್ಕು ದಿನದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An indebted farmer unable to pay off a loan of Rs.40,000, has committed suicide in Shivpuri, Madhya Pradesh.Kalla, 55, committed suicide by hanging himself from tree. His family did not even have money to cremate him. Villagers somehow managed to collect the money for the cremation
Please Wait while comments are loading...