ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಿದ್ಧ ಆಯುರ್ವೇದ ವೈದ್ಯ ಪಿ.ಕೆ. ವಾರಿಯರ್ ನಿಧನ

|
Google Oneindia Kannada News

ಮಲಪ್ಪುರಂ, ಜುಲೈ 10: ಸುಪ್ರಸಿದ್ಧ ಆಯುರ್ವೇದ ವೈದ್ಯ, ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ಟ್ರಸ್ಟಿ ಡಾ. ಪಿ.ಕೆ. ವಾರಿಯರ್ ಅವರು ಶನಿವಾರ ಮಧ್ಯಾಹ್ನ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 100 ವರ್ಷವಾಗಿತ್ತು.

ವಿಶ್ವದಾದ್ಯಂತ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಿದ ಕೀರ್ತಿ ವಾರಿಯರ್ ಅವರದ್ದು. ತಮ್ಮ ಜೀವಿತಾವಧಿಯಲ್ಲಿ ಜಗತ್ತಿನಾದ್ಯಂತ ಸಾವಿರಾರು ಜನರಿಗೆ ಆಯುರ್ವೇದ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದರು. ಪ್ರಪಂಚದ ಹಲವು ಕಡೆಗಳಿಂದ ಇವರ ಬಳಿ ಚಿಕಿತ್ಸೆಗೆ ಬರುತ್ತಿದ್ದರು.

ಕೃಷಿ ಕಾಯ್ದೆ: ರೈತರ ಜೊತೆ ಸಂಧಾನಕ್ಕೆ ಸಿದ್ಧ ಎಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ: ರೈತರ ಜೊತೆ ಸಂಧಾನಕ್ಕೆ ಸಿದ್ಧ ಎಂದ ಕೇಂದ್ರ ಸರ್ಕಾರ

1921ರ ಜೂನ್ 5ರಂದು ಪನ್ನಿಯಂಪಿಲ್ಲಿ ಕೃಷ್ಣಂಕುಟ್ಟಿ ವಾರಿಯರ್ ಅವರು ಜನಿಸಿದರು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪ್ರಾವೀಣ್ಯ ಗಳಿಸಿದ್ದ ವಾರಿಯರ್ ಅವರು ವಿಶ್ವದಾದ್ಯಂತ ಆಯುರ್ವೇದ ಪದ್ಧತಿ ಪ್ರಚುರಪಡಿಸುವಲ್ಲಿ ಶ್ರಮವಹಿಸಿದ್ದರು.

Famous Ayurveda Doctor Dr PK Warrier Passes Away

20ನೇ ವಯಸ್ಸಿಗೆ ಕೊಟ್ಟಕ್ಕಲ್ ಆರ್ಯವೈದ್ಯ ಶಾಲೆಗೆ ಸೇರಿದರು. ಸ್ವಾತಂತ್ರ್ಯ ಚಳವಳಿಯಲ್ಲೂ ವಾರಿಯರ್ ಭಾಗವಹಿಸಿದ್ದರು. ನಂತರ ತಮ್ಮ 24ನೇ ವಯಸ್ಸಿನಲ್ಲಿ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ಟ್ರಸ್ಟಿ ಆಗಿ ಸೇರಿದರು.

ಭಾರತ ಸರ್ಕಾರ 1999ರಲ್ಲಿ ಪದ್ಮಶ್ರೀ ಹಾಗೂ 2010ರಲ್ಲಿ ಪದ್ಮಭೂಷಣ ನೀಡುವ ಮೂಲಕ ವಾರಿಯರ್ ಅವರನ್ನು ಗೌರವಿಸಿದೆ.

ವಾರಿಯರ್ ಅವರ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲ ಅರಿಫ್ ಮೊಹಮದ್ ಖಾನ್, ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

"ವಾರಿಯರ್ ಅವರು ಕೇರಳದ ಆಯುರ್ವೇದದ ಪಿತಾಮಹರಾಗಿದ್ದರು" ಎಂದು ಸಿಎಂ ಪಿಣರಾಯಿ ವಿಜಯನ್ ಸ್ಮರಿಸಿದ್ದಾರೆ.

Recommended Video

ಸಿಪಿ ಯೋಗೀಶ್ವರ್ 420 ಕೆಲಸ ಮಾಡ್ತಿದ್ದಾರೆ ಅಂತ ಟಾಂಗ್ ಕೊಟ್ಟ ಡಿಕೆ ಸುರೇಶ್ | Oneindia Kannada

English summary
Doyen of Ayurveda and managing trustee of Kottakkal Arya Vaidya Sala (KAS) Dr PK Warrier died on Saturday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X