ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ

|
Google Oneindia Kannada News

ಪುದುಚೇರಿ, ಜುಲೈ 23: ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಪುದುಚೇರಿ ಸರ್ಕಾರ ಘೋಷಿಸಿದೆ.

ಈ ಬಗ್ಗೆ ಗುರುವಾರ ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದರು.

ಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರುಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

ಪುದುಚೇರಿಯಲ್ಲಿ ಇಂದು 121 ಜನರಿಗೆ ಕೊರೊನಾ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,421ಕ್ಕೆ ಏರಿಕೆಯಾಗಿದೆ. 1,400 ಜನರು ಗುಣಮುಖರಾಗಿದ್ದು, 987 ಕೇಸ್‌ಗಳು ಸಕ್ರಿಯವಾಗಿದೆ. ಇದುವರೆಗೂ 34 ಮಂದಿ ಕೊವಿಡ್‌ನಿಂದ ಮೃತಪಟ್ಟಿದ್ದಾರೆ.

Families of people who die of Covid19 to get 1 lakh says Puducherry CM

ಎರಡು ದಿನಗಳ ಹಿಂದೆಯಷ್ಟೇ ಪುದುಚೇರಿ ಸಿಎಂ ಬಜೆಟ್ ಮಂಡಿಸಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆಯೂ ಬಜೆಟ್ ಮಂಡಿಸಿದ್ದರು.

ಗುರುವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 12,38,635ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,26,167. ಗುಣಮುಖರಾದವರು 7,82,606. ಒಟ್ಟು ಮೃತಪಟ್ಟವರ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

English summary
Families of the people who succumb to COVID19 will be provided Rs 1 Lakh from Chief Minister's Relief Fund on behalf of the government in Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X