ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake news: ಸರ್ಕಾರಿ ನೌಕರರ ಪಿಂಚಣಿ ಮೊತ್ತ ಕಡಿತವಿಲ್ಲ!

|
Google Oneindia Kannada News

ನವದೆಹಲಿ, ಏಪ್ರಿಲ್ 19: ಕೊರೊನಾವೈರಸ್ ಹರಡದಂತೆ ಲಾಕ್ಡೌನ್ ವಿಧಿಸಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದನ್ನು ಸರಿದೂಗಿಸಲು ಸರ್ಕಾರಿ ನೌಕರರ ಪಿಂಚಣಿ ಮೊತ್ತದಲ್ಲಿ ಇಂತಿಷ್ಟು ಮೊತ್ತ ಕಡಿತಗೊಳಿಸಲಾಗುತ್ತದೆ ಎಂಬ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿದೆ.

ಕೇಂದ್ರ ಸರ್ಕಾರಿ ನೌಕರರ ಪಿಂಚಣಿಯನ್ನು ಶೇ 30 ರಷ್ಟು ಕಡಿತಗೊಳಿಸಲಾಗುತ್ತದೆ ಎಂಬ ಸುದ್ದಿ ಲಾಕ್ ಡೌನ್ ಶುರುವಾದಾಗಿನಿಂದಲೂ ಈ ರೀತಿ ಸುಳ್ಳು ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ಈಗ ಶೇ 20ರಷ್ಟು ಮೊತ್ತ ಕಡಿತ ಎಂದು ಸುದ್ದಿ ಹಬ್ಬಿದೆ. 21 ದಿನಗಳ ಲಾಕ್ ಡೌನ್ ಏಪ್ರಿಲ್ 14ರಂದು ಮುಕ್ತಾಯವಾಗಿದ್ದು, ದೇಶದೆಲ್ಲೆಡೆ 19 ದಿನಗಳ ಎರಡನೇ ಅವಧಿಯ ಲಾಕ್ಡೌನ್ ಜಾರಿಯಲ್ಲಿದೆ.

Fake:ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಹಣ ನುಂಗಿದ ಕೊರೊನಾFake:ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಹಣ ನುಂಗಿದ ಕೊರೊನಾ

ನಗದು ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಪಿಂಚಣಿಗಳನ್ನು 20% ಕಡಿತಗೊಳಿಸಿದೆ ಎಂಬ ವರದಿಗಳೆಲ್ಲವೂ ಸುಳ್ಳು. ಪಿಂಚಣಿ ವಿತರಣೆಯಲ್ಲಿ ಯಾವುದೇ ಕಡಿತವಾಗುವುದಿಲ್ಲ. ಸರ್ಕಾರದ ನಗದು ನಿರ್ವಹಣಾ ಸೂಚನೆಯಿಂದ ಸಂಬಳ ಮತ್ತು ಪಿಂಚಣಿ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

False: Govt has not taken any decision on reducing pension of employees

ಹಿರಿಯ ನಾಗರಿಕರು, ವಿಕಲಚೇತನರು ಮತ್ತು ವಿಧವೆಯರು, ಕೇಂದ್ರ ಸರ್ಕಾರದ ಪಿಂಚಣಿ ಪಡೆಯುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ (ಎನ್‌ಎಸ್‌ಎಪಿ) ಅಡಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಮೂರು ತಿಂಗಳ ಮುಂಗಡ ಪಿಂಚಣಿ ಪಡೆಯಲಿದ್ದಾರೆ. ಆದರೆ ಸಂಬಳ, ಪಿಂಚಣಿಯಲ್ಲಿ ಯಾವುದೇ ಕಡಿತವಿಲ್ಲ ಎಂದು ವಿತ್ತ ಸಚಿವಾಲಯ ಹೇಳಿದೆ.

ಎನ್‌ಎಸ್‌ಎಪಿ ಪ್ರಕಾರ, 80 ವರ್ಷ ಮೇಲ್ಪಟ್ಟವರಿಗೆ ಸಿಗಲಿರುವ ಪಿಂಚಣಿ ಮೊತ್ತದಲ್ಲಿ ಕಡಿತ ಮಾಡಲಾಗಿದೆ. ಮಿಕ್ಕವರಿಗೂ ಇದು ಅನ್ವಯವಾಗಬಹುದು, ಜವಾನ(peon) ನಿಂದ ಮಾಜಿ ರಾಷ್ಟ್ರಪತಿಗಳ ತನಕ ಎಲ್ಲರ ಪಿಂಚಣಿ ಮೊತ್ತವೂ ಕಡಿತ ಎಂಬ ಸುದ್ದಿಯನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿದ್ದರಿಂದ ಗೊಂದಲ ಉಂಟಾಗಿತ್ತು. ಏಪ್ರಿಲ್ 6ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಂಸದರ ಸಂಬಳದಲ್ಲಿ ಶೇ 30ರಷ್ಟು ಕಡಿತಗೊಳಿಸುವ ಬಗ್ಗೆ ಮಾತ್ರ ನಿರ್ಣಯ ಕೈಗೊಳ್ಳಲಾಯಿತು ಎಂದು ಪಿಐಬಿ ಕೂಡಾ ಸ್ಪಷ್ಟಪಡಿಸಿದೆ.

English summary
Even as the pandemic continues to cause panic, there is a claim that is doing the rounds that the government may slash pension of government employees by 30 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X