ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿಯುತ್ತಿರುವ ಆಹಾರ ಪದಾರ್ಥಗಳ ಬೆಲೆಯೆಂಬ ಎರಡು ಅಲುಗಿನ ಕತ್ತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಕಳೆದ ಕೆಲ ತಿಂಗಳಿಂದ ಕುಸಿಯುತ್ತಿರುವ ಆಹಾರ ಪದಾರ್ಥದ ಬೆಲೆಗಳಿಂದ ಹಣದುಬ್ಬರವನ್ನು ನಿಯಂತ್ರಿಸುವುದು ಸರಕಾರದಿಂದ ಸಾಧ್ಯವಾಗಿದೆ. ಆದರೆ ಇದರಿಂದ ಬಜೆಟ್ ವೆಚ್ಚದಲ್ಲಿ ಸಮಸ್ಯೆಯಾಗುತ್ತದೆ. ಉತ್ತಮ ಬೆಳೆ ಹಾಗೂ ಉತ್ಪನ್ನ ಹೆಚ್ಚಾಗಿದ್ದು, ಇದರಿಂದ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿ, ಎರಡು ಅಲುಗಿನ ಕತ್ತಿಯಂತಾಗಿದೆ.

ಹಣದುಬ್ಬರ ದರವು ಕಡಿಮೆ ಆಗಿ, ಆಹಾರ ಪದಾರ್ಥಗಳ ಬೆಲೆ ಕಡಿಮೆ ಆಗಿರುವುದರಿಂದ ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವುದು ಸರಕಾರಕ್ಕೆ ಅನಿವಾರ್ಯ ಆಗುತ್ತದೆ. ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ಸರಕಾರ ಜಾರಿಗೆ ತಂದಿದ್ದು, ಇನ್ನು ನಾಲ್ಕು ವರ್ಷದಲ್ಲಿ ಕೃಷಿ ಆದಾಯ ದ್ವಿಗುಣಗೊಳ್ಳಬೇಕು ಎಂಬ ಗುರಿ ಹೊಂದಿದ್ದಾರೆ.

ಮೋದಿಕೇರ್ ನಿಂದ ಇಂದ್ರಧನುಷ್ ವರೆಗೆ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳು ಮೋದಿಕೇರ್ ನಿಂದ ಇಂದ್ರಧನುಷ್ ವರೆಗೆ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳು

ಬಜೆಟ್ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಹೇಳುವುದಾದರೆ ಹಣದುಬ್ಬರ ದರವು ನಿಯಂತ್ರಣದಲ್ಲಿ ಇರುವುದು ಗ್ರಾಹಕರಿಗೆ ಒಳ್ಳೆಯದೇ. ಭತ್ತ, ಹಾಲು ಮತ್ತು ಎಣ್ಣೆಕಾಳುಗಳ ದರ ಇಳಿಕೆ ಆಗಿದ್ದರೆ, ಬೇಳೆ ಕಾಳುಗಳು, ಗೋಧಿ ಮತ್ತು ಅಲೂಗಡ್ಡೆ ದರವು ಕ್ರಮವಾಗಿ 5.54%, 8.87% ಮತ್ತು 80.13% ಕ್ರಮವಾಗಿ ಏರಿಕೆ ಆಗಿದೆ. ಇದು ಕಳೆದ ವಾರ ಬಿಡುಗಡೆಯಾದ ದತ್ತಾಂಶದಲ್ಲಿ ಬಯಲಾಗಿದೆ.

Falling food prices: A double edged sword

ಸಗಟು ದರದಲ್ಲಿ ಈರುಳ್ಳಿ, ಮೊಟ್ಟೆ ಮತ್ತು ಮಾಂಸದ ಹಣದುಬ್ಬರದಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಆದಾಗ ಹಣದುಬ್ಬರ ಏರಬಹುದು ಎಂದುಕೊಂಡಿದ್ದರು. ಏಕೆಂದರೆ ಇದು ಒಂದಕ್ಕೆ ಒಂದು ನಂಟು ಹಾಕಿಕೊಂಡಿತ್ತು. ತೈಲ ಬೆಲೆ ಹೇಗೆ ಮೇಲ್ಮಟ್ಟಕ್ಕೆ ಅಥವಾ ಕೆಳಕ್ಕೆ ಸಾಗುತ್ತದೋ ಅದೇ ದಿಕ್ಕಿನಲ್ಲಿ ಹಣದುಬ್ಬರ ಸಾಗುತ್ತದೆ.

ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?

ಕಚ್ಚಾ ತೈಲ ಬೆಲೆ ಏರಿಕೆಯು ಆರ್ಥಿಕ ಹಾಗೂ ವಿತ್ತೀಯ ಕೊರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಹಣಕಾಸು ನೀತಿ, ಹೂಡಿಕೆ ಸ್ವಭಾವದ ಮೇಲೆ ಕೂಡ ಪರಿಣಾಮ ಆಗುತ್ತದೆ. ಹಣದುಬ್ಬರವನ್ನು ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ವಸ್ತು ಖರೀದಿಸುವುದರ ಮೇಲೆ ಆಗುವ ಪರಿಣಾಮ.

ಹಣದುಬ್ಬರ ನಿಯಂತ್ರಣದಲ್ಲಿದೆ ಅಂದರೆ ಬೆಲೆ ಏರಿಕೆಯು ಸರಕಾರದ ನಿಯಂತ್ರಣದಲ್ಲಿದೆ ಎಂದರ್ಥ. ಇದು ಗ್ರಾಹಕರಿಗೆ ಒಳ್ಳೆ ಸುದ್ದಿ. ಆದರೆ ಖರ್ಚಿನ ವಿಚಾರವಾಗಿ ಸರಕಾರಕ್ಕೆ ತೊಂದರೆ. ಈ ವರ್ಷ ಸೆಪ್ಟೆಂಬರ್ ನಲ್ಲಿ ಸಗಟು ದರ ಸೂಚ್ಯಂಕ 5.13% ತಲುಪಿತ್ತು. ಇದೇ ವರ್ಷದ ಆಗಸ್ಟ್ ನಲ್ಲಿ ಆ ಪ್ರಮಾಣ 4.53% ಇತ್ತು.

ಡಿಜಿಟಲೀಕರಣ: ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆಡಿಜಿಟಲೀಕರಣ: ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆ

ತ್ರೈಮಾಸಿಕದ ಕೊನೆ ಸೆಪ್ಟೆಂಬರ್ 2018ಕ್ಕೆ ಸಗಟು ದರ ಸೂಚ್ಯಂಕವು 4.98% ಇತ್ತು. ಗ್ರಾಹಕ ದರ ಸೂಚ್ಯಂಕವು ಇದೇ ಅವಧಿಯಲ್ಲಿ 3.88% ಏರಿಕೆ ಆಗಿದೆ. ಕಳೆದ ಮೂರು ತ್ರೈ ಮಾಸಿಕದಲ್ಲಿ 4%ಗೂ ಹೆಚ್ಚು ಏರಿಕೆ ಆಗಿದೆ.

ಇದಕ್ಕೂ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಗಟು ದರ ಸೂಚ್ಯಂಕ ಹಣದುಬ್ಬರವನ್ನು ಹಣಕಾಸು ನೀತಿ ನಿರೀಕ್ಷೆಗಳಿಗೆ ಬಳಸುತ್ತಿತ್ತು. ಆದರೆ ಈಗ ಗ್ರಾಹಕ ದರ ಸೂಚ್ಯಂಕವನ್ನು ಬಳಸುತ್ತಿದೆ. ಗ್ರಾಹಕರ ದೃಷ್ಟಿಯಿಂದ ಹೇಳುವುದಾದರೆ ಗ್ರಾಹಕ ದರ ಸೂಚ್ಯಂಕವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳಿತು. ಗ್ರಾಹಕ ದರದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಇದು ಒಳ್ಳೆ ಅಳತೆಗೋಲು.

English summary
Fall in food prices in the past few months may have helped the government to keep the inflation under check, but it also presents a budgetary problem to the policy makers in terms of spending. Good harvest and increased farm output, which have kept the food prices down, is in a way double edged sword.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X