ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಭಾರತದ ಲಾಕ್ ಡೌನ್ ಕುರಿತಂತೆ WHO ಸೂಚನೆ

|
Google Oneindia Kannada News

ನವದೆಹಲಿ, ಏಪ್ರಿಲ್ 8: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇದರಲ್ಲಿ ಮುಖ್ಯವಾದದ್ದು, ಲಾಕ್ ಡೌನ್. 21 ದಿನಗಳ ಲಾಕ್ ಡೌನ್ ಸದ್ಯ ದೇಶದಲ್ಲಿ ಜಾರಿಯಲ್ಲಿದ್ದು, ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರೆಯುತ್ತಾ? ಇಲ್ಲವಾ? ಮುಂದುವರೆದರೆ ಇನ್ನೆಷ್ಟು ದಿನ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಈ ಮಧ್ಯೆ ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ಸುದ್ದಿ ಹೆಚ್ಚು ಸದ್ದು ಮಾಡಿದೆ.

Fact Check: ಪ್ರಧಾನಿ ಮೋದಿ ಅಭಿನಂದಿಸಲು 5 ನಿಮಿಷ ಎದ್ದುನಿಲ್ಲಬೇಕೆ? Fact Check: ಪ್ರಧಾನಿ ಮೋದಿ ಅಭಿನಂದಿಸಲು 5 ನಿಮಿಷ ಎದ್ದುನಿಲ್ಲಬೇಕೆ?

ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಲಾಕ್ ಡೌನ್ ಹೇಗೆ ನಿಭಾಯಿಸಬೇಕು, ಹಂತ ಹಂತವಾಗಿ ಹೇಗೆ ಜಾರಿಗೊಳಿಸಬೇಕು ಎಂಬ ನಿರ್ದೇಶನ ಸಿಕ್ಕಿದೆ. ಯಾವ ರೀತಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಂದೇಶದಲ್ಲಿ ನೋಡಿ ಎಂಬ ನಾಲ್ಕು ಹಂತದ ಲಾಕ್ ಡೌನ್ ಕುರಿತ ವಾಟ್ಸಾಪ್ ಸಂದೇಶ, ಟ್ವೀಟ್, ಫೇಸ್ಬುಕ್ ಪೋಸ್ಟ್ ಬಂದರೆ ತಕ್ಷಣವೇ ಎಚ್ಚರವಾಗಿ, ಏಕೆಂದರೆ, ಲಾಕ್ ಡೌನ್ ಕುರಿತಂತೆ ಯಾವುದೇ ಆದೇಶ ಬಂದರೂ ಪ್ರಧಾನಿ ಮೋದಿ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಘೋಷಣೆ ನಿರೀಕ್ಷಿಸಬಹುದು.

ಏಪ್ರಿಲ್ 15 ಹಾಗೂ ಏಪ್ರಿಲ್ 19 ಅವಧಿಯಲ್ಲಿ ಲಾಕ್ ಡೌನ್ ಇರುವುದಿಲ್ಲ. ಏಪ್ರಿಲ್ 20 ರಿಂದ ಮೇ 18ರ ಅವಧಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕೊರೊನಾವೈರಸ್ ಹರಡುವಿಕೆ ಪ್ರಗತಿ ಶೂನ್ಯ ಮುಟ್ಟುವ ತನಕ ಲಾಕ್ ಡೌನ್ ಅನಿವಾರ್ಯ ಎಂದು ಸಂದೇಶದಲ್ಲಿ ಹೇಳಲಾಗಿದೆ.

Fake: WHO has not issued any protocols and procedures on lockdown in India

ಇದೇ ಸಂದೇಶದಲ್ಲಿ ಮುಂದುವರೆದು ಮೇ19 ರಿಂದ ಮೇ 24ರ ಅವಧಿಯಲ್ಲಿ ಲಾಕ್ ಡೌನ್ ಗೆ ವಿರಾಮ. ಮೇ 25 ರಿಂದ ಜೂನ್ 10ರ ಅವಧಿಗೆ ಕೊನೆಯ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.

ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಏಷ್ಯಾದ ವಕ್ತಾರರು ಟ್ವೀಟ್ ಮಾಡಿ ಇದೆಲ್ಲತಪ್ಪು ಮಾಹಿತಿ, ಈ ರೀತಿ ಯಾವುದೇ ಸಂದೇಶ ಬಂದರೂ ನಂಬಬೇಡಿ, ವಿಶ್ವ ಆರೋಗ್ಯ ಸಂಸ್ಥೆ ಲಾಕ್ ಡೌನ್ ಕುರಿತಂತೆ ಯಾವುದೇ ನೀತಿ, ನಿಯಮ, ನಿಬಂಧನೆಗಳನ್ನು ಸೂಚಿಸಿಲ್ಲ ಎಂದು ಹೇಳಿದ್ದಾರೆ.

Fact Check: ವಾಟ್ಸಾಪ್ ಟಿಕ್ ಮಾರ್ಕ್ ಕುರಿತಂತೆ ಹೀಗೊಂದು ಸುಳ್ಸುದ್ದಿFact Check: ವಾಟ್ಸಾಪ್ ಟಿಕ್ ಮಾರ್ಕ್ ಕುರಿತಂತೆ ಹೀಗೊಂದು ಸುಳ್ಸುದ್ದಿ

ಸದ್ಯದ ಮಾಹಿತಿಯಂತೆ, ಭಾರತದಲ್ಲಿ ಲಾಕ್ ಡೌನ್ ಕುರಿತಂತೆ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ರೆಡ್ ಅಲರ್ಟ್ ಘೋಷಿಸಿರುವ ರಾಜ್ಯ, ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯುವುದು ನಿಶ್ಚಿತವಾಗಿದೆ. ಮಿಕ್ಕಂತೆ, ಕೆಲ ರಾಜ್ಯಗಳಲ್ಲಿ ಸ್ವಲ್ಪ ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆಯಿದೆ.

English summary
A circular attributed to the World Health Organisation has been doing the rounds in which the protocols or procedures for the lockdown is being prescribed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X