ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಹೀನ್ ಬಾಗ್ 'ದೀದಿ' ಬಗ್ಗೆ ಸುಳ್ಳು ಟ್ವೀಟ್ ಮಾಡಿದ್ದಕ್ಕೆ ಕಂಗನಾಗೆ ಲೀಗಲ್ ನೋಟಿಸ್

|
Google Oneindia Kannada News

ನವದೆಹಲಿ, ಡಿಸೆಂಬರ್ 2: ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೃದ್ಧ ರೈತ ಮಹಿಳೆಯನ್ನು ಶಹೀನ್ ಬಾಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 'ಬಿಲ್ಕಿಸ್ ದೀದಿ' ಎಂದು ತಪ್ಪಾಗಿ ಗುರುತಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಪಂಜಾಬ್‌ನ ಜಿರಾಕ್‌ಪುರದ ವಕೀಲರೊಬ್ಬರು ಲೀಗಲ್ ನೋಟಿಸ್ ನೀಡಿದ್ದಾರೆ.

ಕಂಗನಾ ಅವರು ಟ್ವಿಟ್ಟರ್‌ನಲ್ಲಿ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕೆ ಏಳು ದಿನಗಳ ಒಳಗೆ ಕ್ಷಮಾಪಣೆ ಕೋರಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.

ಅಮಿತ್ ಮಾಳವೀಯ ಪೋಸ್ಟ್‌ಗೆ 'ಸುಳ್ಳು ಸುದ್ದಿ' ಮುದ್ರೆ ಒತ್ತಿದ ಟ್ವಿಟ್ಟರ್ಅಮಿತ್ ಮಾಳವೀಯ ಪೋಸ್ಟ್‌ಗೆ 'ಸುಳ್ಳು ಸುದ್ದಿ' ಮುದ್ರೆ ಒತ್ತಿದ ಟ್ವಿಟ್ಟರ್

ಬಂತಿಂಡಾದ ಬಹದೂರ್‌ಗಡ ಜಾಂಡಿಯನ್ ಗ್ರಾಮದ ನಿವಾಸಿ 73 ವರ್ಷದ ಮೊಹಿಂದರ್ ಕೌರ್ ಅವರ ಫೋಟೊವನ್ನು ಹಾಕಿದ್ದ ಕಂಗನಾ, ಶಹೀನ್ ಬಾಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅದೇ 'ದೀದಿ' ರೈತರ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. 100 ರೂ ಹಣಕ್ಕೆ ಅವರು ಪ್ರತಿಭಟನೆಗಳಿಗೆ ಸಿಗಲಿದ್ದಾರೆ ಎಂದು ಆರೋಪಿಸಿದ್ದರು.

Fake Tweet On Shaheen Bagh Didi: Legal Notice Sent To Kangana Ranaut

ಸುಳ್ಳು ಸುದ್ದಿಯನ್ನು ಹರಡಿದ್ದಕ್ಕೆ ಕಂಗನಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಅವರು ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದರು. ಮೊಹಿಂದರ್ ಕೌರ್ ಅವರೂ ಕಂಗನಾ ತಮ್ಮ ವಿರುದ್ಧ ಹೀಗೆ ಟ್ವೀಟ್ ಮಾಡಿದಕ್ಕೆ ಕಿಡಿಕಾರಿದ್ದರು. ಆಕೆ ನನ್ನ ಮನೆಯನ್ನೇ ನೋಡಿಲ್ಲ. ನಾನೇನು ಮಾಡುತ್ತೇನೆ ಎನ್ನುವುದು ಕೂಡ ಅವರಿಗೆ ಗೊತ್ತಿಲ್ಲ. ಹಾಗಿದ್ದೂ ನಾನು ನೂರು ರೂಪಾಯಿಗೆ ಸಿಗುತ್ತೇನೆ ಎಂದು ಆರೋಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

English summary
A Punjab advocate sent a legal notice to actor Kangana Ranaut demanding an apology over her fake tweet on Shaheen bagh Didi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X