ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಅಕ್ಟೋಬರ್ ತಿಂಗಳ ತನಕ ಹೋಟೆಲ್ ಬಂದ್ ಮಾಡಲು ಆದೇಶ?

|
Google Oneindia Kannada News

ನವದೆಹಲಿ, ಏಪ್ರಿಲ್ 9: ಕೊರೊನಾವೈರಸ್ ಕುರಿತಂತೆ ದಿನಕ್ಕೊಂದು ಕ್ಷಣಕ್ಕೊಂದು ವೈರಲ್ ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಸುಳ್ಸುದ್ದಿ, ನಕಲಿ ವೆಬ್ ತಾಣಗಳ ವಿರುದ್ಧವೂ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸುಳ್ಸುದ್ದಿಗಳ ಬಗ್ಗೆ ಪಿಐಬಿ, ಕರ್ನಾಟಕ ಪೊಲೀಸ್, ವಿಶ್ವ ಆರೋಗ್ಯ ಸಂಸ್ಥೆ ಆಗಾಗ ಸ್ಪಷ್ಟನೆ ನೀಡಿ, ಸಾರ್ವಜನಿಕರನ್ನು ಎಚ್ಚರಿಸಲಾಗುತ್ತಿದೆ. ಆದರೆ, ಫೇಕ್ ನ್ಯೂಸ್ ಹರಡುವುದು ನಿಂತಿಲ್ಲ. ಲಾಕ್ ಡೌನ್ ಮುಂದುವರೆಯುವ ಬಗ್ಗೆ ಸುಳ್ಸುದ್ದಿ ಹಬ್ಬಿದ ಬೆನ್ನಲ್ಲೇ ಹೋಟೆಲ್ ಉದ್ಯಮಿಗಳಿಗೆ ಆಘಾತ ನೀಡುವ ನಕಲಿ ಸುದ್ದಿಯೊಂದನ್ನು ಎಲ್ಲೆಡೆ ಹಬ್ಬಿಸಲಾಗಿದೆ.

Fact Check: ಭಾರತದ ಲಾಕ್ ಡೌನ್ ಕುರಿತಂತೆ WHO ಸೂಚನೆ Fact Check: ಭಾರತದ ಲಾಕ್ ಡೌನ್ ಕುರಿತಂತೆ WHO ಸೂಚನೆ

ಆಕ್ಟೋಬರ್ 15ರ ತನಕ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್ ಬಂದ್ ಮಾಡಲು ಪ್ರವಾಸೋದ್ಯಮ ಇಲಾಖೆ ಆದೇಶಿಸಿದೆ, ಈ ನಿಯಮ ಮೀರಿದರೆ ಹೆಚ್ಚಾ ಎಂಬ ಸಂದೇಶ ವಾಟ್ಸಾಪ್ ಸೇರಿದಂತೆ ಚಾಟಿಂಗ್ ಆಪ್, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ! ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!

Fake: Tourism Ministry has not ordered closure of all hotels till October 15 2020

ಉನ್ನತ ಮಟ್ಟದ ಸಚಿವರ ಸಮೂಹ ಈ ಬಗ್ಗೆ ಚರ್ಚೆ ನಡೆಸಿ, ಲಾಕ್ ಡೌನ್ ಹಂತ ಹಂತವಾಗಿ ಸಡಿಲಗೊಳಿಸುವ ಬಗ್ಗೆ ನಿರ್ಧರಿಸಿದ್ದಾರೆ. ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ. ಈ ಸೂಚನೆಗಳ ಪೈಕಿ ಮೇ 15ರ ತನಕ ಶಾಲೆ, ಕಾಲೇಜು ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಬಂದ್ ಮಾಡುವುದು, ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುವುದು, ಅಗತ್ಯ ಬಿದ್ದರೆ ಸೀಲ್ ಡೌನ್ ಮಾಡುವುದು ಮುಂತಾದ ಕ್ರಮಗಳಿವೆ. ಆದರೆ, ಪ್ರವಾಸೋದ್ಯಮ ಇಲಾಖೆಯಾಗಲಿ, ಕೇಂದ್ರ ಸರ್ಕಾರವಾಗಲಿ ಹೋಟೆಲ್ ಉದ್ಯಮಕ್ಕೆ ಯಾವುದೇ ಪ್ರತ್ಯೇಕ ಆದೇಶವನ್ನು ನೀಡಿಲ್ಲ.

English summary
There is a message in circulation claiming that hotels and restaurants will remain closed until October 15 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X