ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಈ ಉದ್ಯೋಗಿಗಳಿಗೆ ಸರ್ಕಾರದಿಂದ 1.2 ಲಕ್ಷ ಸಿಗುತ್ತಂತೆ!

|
Google Oneindia Kannada News

ನವದೆಹಲಿ, ಮೇ 14: ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಮುಂದುವರೆದಿರುವುದರಿಂದ ಹಲವು ಕ್ಷೇತ್ರಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಆರ್ಥಿಕ ಪ್ಯಾಕೇಜ್ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೋಲುವಂತೆ ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

1990 ರಿಂದ 2020ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಉದ್ಯೋಗಿಗಳಿಗೆ 1.20 ಲಕ್ಷ ರುಗಳನ್ನು ಸರ್ಕಾರ ನೀಡಲಿದೆ ಎಂಬ ಸುದ್ದಿ ಹಬ್ಬಿದೆ.

Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?

ಕೇಂದ್ರ ಕಾರ್ಮಿಕ ಹಾಗೂ ಸಿಬ್ಬಂದಿ ನೇಮಕಾತಿ ಇಲಾಖೆಯಿಂದ ಇಂಥದ್ದೊಂದು ಯೋಜನೆ ಆರಂಭವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಎಂದು ಯುಆರ್ ಎಲ್ ನೀಡಲಾಗಿದೆ.

Fake: Those who worked from 1990-2020 are not entitled for Rs 1.20 lakh

ಸತ್ಯಾಸತ್ಯತೆ: ಕೇಂದ್ರ ಕಾರ್ಮಿಕ ಇಲಾಖೆಯಾಗಲಿ, ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಾಗಲಿ ಈ ರೀತಿ ಯಾವುದೇ ಯೋಜನೆ ಪ್ರಕಟಿಸಿಲ್ಲ. ಯಾವುದೇ ಕಾರ್ಮಿಕರಿಗೆ ನೇರವಾಗಿ ಹಣ ನೀಡುತ್ತಿಲ್ಲ. ಇಂಥ ಸಂದೇಶ ಬಂದರೆ ಯಾರೂ ಕೂಡಾ ಲಿಂಕ್ ಕ್ಲಿಕ್ ಮಾಡಬೇಕಾಗಿಲ್ಲ. ಲಿಂಕ್ ಕ್ಲಿಕ್ ಮಾಡಿದ್ರೆ ನಕಲಿ ವೆಬ್ ತಾಣಕ್ಕೆ ನಿಮ್ಮನ್ನು ಕರೆದೊಯ್ಯಲಿದೆ. ಇದರಿಂದ ನಿಮ್ಮ ಹಣ ಕಳೆದುಕೊಳ್ಳಬೇಕಾಗುವ ಪರಿಸ್ಥಿತಿಯೂ ಬರಬಹುದು. ನಿಮ್ಮ ವಿವರಗಳು ಸೋರಿಕೆಯಾಗಬಹುದು. ಹೀಗಾಗಿ, ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಪಿಐಬಿ ಎಚ್ಚರ ನೀಡಿದೆ.

English summary
A message is in circulation stating those who have worked from 1990-2020 are entitled get Rs 1.20 lakh from the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X