ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನೋಟಿನ 11 ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಹೊಡೆದ ಖದೀಮರು

ನೆರೆಯ ಬಾಂಗ್ಲಾದೇಶದಲ್ಲಿ ತಯಾರಾಗುತ್ತಿರುವ ಭಾರತೀಯ ಕರೆನ್ಸಿಯ ಖೋಟಾ ನೋಟುಗಳು ಭಾರತ-ಬಾಂಗ್ಲಾ ಗಡಿ ಭಾಗದಿಂದ ಭಾರತವನ್ನು ಪ್ರವೇಶಿಸುತ್ತಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 13: ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬಿಡುಗಡೆಗೊಂಡಿರುವ 2000 ರು. ಮುಖಬೆಲೆಯ ನೋಟುಗಳಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಖೋಟಾ ನೋಟು ತಯಾರಕರು ಕಾಪಿ ಹೊಡೆದಿದ್ದಾರೆಂದು ಮೂಲಗಳು ತಿಳಿಸಿವೆ.

ಫೆಬ್ರವರಿ 1ರಂದು ಭಾರತ, ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯ ಕರೆನ್ಸಿ 2000 ರು. ಮುಖಬೆಲೆಯ ನೋಟುಗಳು ದೇಶದ ಒಳನುಸುಳುತ್ತಿವೆ. ಹಾಗಾಗಿ, ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರು ಹಗಲು ರಾತ್ರಿ ಪಹರೆ ಕಾಯುತ್ತಾ ಬಾಂಗ್ಲಾದೇಶದಿಂದ ರವಾನೆಯಾಗುತ್ತಿರುವ ಖೋಟಾ ನೋಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.[ಖೋಟೋ ನೋಟು ಪತ್ತೆಗಾಗಿ ಬಿಎಸ್ಎಫ್ ಯೋಧರಿಗೆ ತರಬೇತಿ]

Fake Rs 2,000 note: 11 out of 17 security features replicated

ಹೀಗೆ, ಬಾಂಗ್ಲಾ ಗಡಿಯಲ್ಲಿರುವ ಮುರ್ಷಿದಾಬಾದ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಭಾರತೀಯ ಯೋಧರು ಫೆ. 8ರಂದು ಅಜೀವುರ್ ರಹಮಾನ್ ಎಂಬ 26 ವರ್ಷದ ಯುವಕನನ್ನು ಬಂಧಿಸಿದ್ದರು. ಈತ ಪಶ್ಚಿಮ ಬಂಗಾಳದ ಮಾಲ್ಡಾದವನೆಂದು ಹೇಳಲಾಗಿದೆ. ಬಂಧನದ ವೇಳೆ, ಈತನ ಬಳಿ 40 ಹೊಸ 2000 ರು. ಖೋಟಾ ನೋಟುಗಳಿದ್ದವು. ಈತ ಕೈಗೆ ಈ ನೋಟುಗಳು ಬಾಂಗ್ಲಾದೇಶದಿಂದ ಬಂದಿವೆ ಎನ್ನಲಾಗಿದೆ.

ವಶಪಡಿಸಿಕೊಂಡಿರುವ ನೋಟುಗಳನ್ನು ತಪಾಸಣೆಗೊಳಪಡಿಸಲಾಗಿತ್ತು. ತಜ್ಞರ ಈ ಪರೀಕ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ ನೋಟುಗಳಲ್ಲಿರುವ 17 ಭದ್ರತಾ ಅಂಶಗಳಲ್ಲಿ 11 ಅಂಶಗಳನ್ನು ನಕಲು ಮಾಡುವುದರಲ್ಲಿ ಖೋಟಾ ನೋಟು ತಯಾರಕರು ಯಶಸ್ವಿಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ರಿಸರ್ವ್ ಬ್ಯಾಂಕ್ ನ ಹೊಸ ಕರೆನ್ಸಿಯ ಪಾರದರ್ಶಕ ಸ್ಥಳ, ವಾಟರ್ ಮಾರ್ಕ್, ಅಶೋಕ ಸ್ತಂಭ, ರಾಷ್ಟ್ರ ಚಿಹ್ನೆ, ರು. 2000 ಎಂಬ ಅಕ್ಷರ, ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಖಾತ್ರಿ ಸಂದೇಶ ಹಾಗೂ ಅವರ ಸಹಿ, ದೇವನಾಗರಿ ಲಿಪಿಯಲ್ಲಿರುವ ನೋಟಿನ ಸಂಖ್ಯೆ, ಚಂದ್ರಯಾನದ ಚಿತ್ರ, ಸ್ವಚ್ಛ ಭಾರತ ಲೋಗೋ, ಭಾರತೀಯ ಭಾಷೆಗಳ ಪ್ಯಾನಲ್, ನೋಟು ಮುದ್ರಿತಗೊಂಡಿರುವ ವರ್ಷ - ಇವೆಲ್ಲವುಗಳನ್ನು ನಕಲು ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

2000 ರು. ನಕಲು ಮಾಡಿರುವ ಹಾಗೆ, ತೀರಾ ಇತ್ತೀಚೆಗೆ ಬಿಡುಗಡೆಗೊಂಡಿರುವ 500 ರು. ನೋಟುಗಳನ್ನೂ ಈಗಾಗಲೇ ನಕಲು ಮಾಡಿರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

English summary
The fake currency racketeers have managed to replicate 11 out of the 17 security features on the new Rs 2,000 notes, including Chandrayan picture, Governor's signature, note denomination in Devanagari script ect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X