ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ವಿಡಿಯೋ ಲೀಕ್ ಬೆದರಿಕೆ ಫೇಕ್ ಇಮೇಲ್ ಬಗ್ಗೆ ಎಚ್ಚರ!

|
Google Oneindia Kannada News

ನವದೆಹಲಿ, ಮೇ 4: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಹೋರಾಡುತ್ತಿರುವ ಸರ್ಕಾರಕ್ಕೆ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಳವಾಗಿರುವುದು ತಲೆನೋವಾಗಿದೆ. ಅದರಲ್ಲೂ ದೇಣಿಗೆ ನೀಡುವ ಬಗ್ಗೆ, ಕ್ರಿಪ್ಟೋಕರೆನ್ಸಿ ಬಗ್ಗೆ ಬರುವ ಇಮೇಲ್ ಗಳನ್ನು ನಂಬಬೇಡಿ ಎಂದು ಸರ್ಕಾರ ಹೇಳಿದೆ.

ಕ್ರಿಪ್ಟೋಕರೆನ್ಸಿ ಮೂಲಕ ಹಣ ಪಾವತಿಸಿ ಇಲ್ಲದಿದ್ದರೆ ನಿಮ್ಮ ಮಾಹಿತಿಯುಳ್ಳ ಖಾಸಗಿ ವಿಡಿಯೋ ಬಹಿರಂಗಪಡಿಸಲಾಗುವುದು ಎಂಬ ಇಮೇಲ್ ಹೆಚ್ಚು ಓಡಾಡುತ್ತಿದೆ. ಈ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ನಿಮ್ಮ ಇಮೇಲ್ ಪಾಸ್ವರ್ಡ್ ಆಗಾಗ ಬದಲಾಯಿಸುತ್ತಿರಿ, ನಿಮ್ಮ ಬ್ರೌಸರ್ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಿ. ಇಂಥ ಇಮೇಲ್ ಗಳನ್ನು ನಂಬಬೇಡಿ ಎಂದು ಕಂಪ್ಯೂಟರ್ ಎಮೆರ್ಜೆನ್ಸಿ ರೆಸ್ಪಾನ್ಸ್ ಟೀಂ (CERT-In) ಹೇಳಿದೆ.

ಈಗಾಗಲೇ ಅನೇಕ ಮಂದಿ ಭಯಭೀತರಾಗಿ ಇಂಥ ಇಮೇಲ್ ಕ್ಲಿಕ್ ಮಾಡಿದ್ದಾರೆ. ಹಲವರ ಕಂಪ್ಯೂಟರ್ ಹ್ಯಾಕ್ ಆಗಿದೆ. ಪಾಸ್ವರ್ಡ್ ಸಿಕ್ಕ ಬಳಿಕ ಸೈಬರ್ ಕಳ್ಳರು, ವೆಬ್ ಕ್ಯಾಮ್ ಮೂಲಕ ವಿಡಿಯೋ ಮಾಡಿ ಹೆದರಿಸತೊಡಗಿದ್ದಾರೆ.. ಹೀಗಾಗಿ, ಇಂಥ ಇಮೇಲ್ ಬಂದರೆ ಸ್ಪಾಮ್ ಎಂದು ಚೆಕ್ ಮಾಡಿ, ಡಿಲೀಟ್ ಮಾಡಿ ಎಂದು ಸಿಆರ್ ಟಿಎನ್ -ಇನ್ ತಿಳಿಸಿದೆ.

Fake ransom email that is prowling the Indian cyberspace

ಈ ಹಿಂದೆ ಇಮೇಲ್, ಸಾಮಾಜಿಕ ಜಾಲ ತಾಣಗಳ ಹೆಚ್ಚು ಬಳಸುವವರ ಮಾಹಿತಿ ಸೋರಿಕೆಯಾಗಿದ್ದರೆ ಅದರ ಲಾಭ ಪಡೆದು, ನಿಮಗೆ ಕಳಿಸುವ ಇಮೇಲ್ ನಲ್ಲಿ ನಿಮ್ಮ ಪಾಸ್ವರ್ಡ್ ಹೀಗಿದೆ ಎಂದು ಹಳೆ ಪಾಸ್ವರ್ಡ್ ಹಾಕಿ ನಿಮ್ಮನ್ನು ನಂಬಿಸಿ, ಹೆದರಿಸಲಾಗುತ್ತದೆ. ಇಂಥ ಯಾವುದೇ ಜಾಲಕ್ಕೆ ಬಲಿಯಾಗಬೇಡಿ, ಯಾವುದೇ ರೀತಿ ಹಣ ರವಾನೆ ಮಾಡಬೇಡಿ. ಅಗತ್ಯ ಬಿದ್ದರೆ ಪಾಸ್ವರ್ಡ್ ಬದಲಾವಣೆ, ಸೈಬರ್ ಪೊಲೀಸ್ ಮೊರೆ ಹೋಗಿ ಎಂದು ಸಿಅರ್ ಟಿಎನ್- ಇನ್ ಎಚ್ಚರಿಸಿದೆ.

English summary
Country's central cybersecurity agency has alerted internet users against an ongoing "fake" email campaign that claims to have recorded personal video of a user which could be published if a ransom amount in cryptocurrency is not paid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X