ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ನೋಟು ಸಂಖ್ಯೆ ಭಾರೀ ಹೆಚ್ಚಳ: ಆರ್‌ಬಿಐ ವರದಿ

|
Google Oneindia Kannada News

ನವದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ ಅಪನಗದೀರಣದ ಆದೇಶ ಮಾಡಿತ್ತು. ಇದನ್ನು ದೇಶದ ಆರ್ಥಿಕತೆಯಲ್ಲಿ ಮಹತ್ತರ ಘಟನೆ ಎಂದೇ ಹೇಳಿಕೊಂಡಿದ್ದ ಕೇಂದ್ರ ಸರ್ಕಾರ, ಕಪ್ಪುಹಣ, ನಕಲಿ ನೋಟು ಹಾವಳಿಗೆ ಕಡಿವಾಣ ಬೀಳುತ್ತದೆ. ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ ಎಂದು ಪ್ರಚಾರ ಮಾಡಿತ್ತು.

ಭಾರತದ ಆರ್ಥಿಕ ವಲಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದ ಈ ಮಹತ್ತರ ಘೋಷಣೆಗೆ ಈಗ 6ನೇ ವರ್ಷ. ಆದರೆ ದೇಶದಲ್ಲಿ ಮಾತ್ರ ಇನ್ನೂ ನಕಲಿ ನೋಟಿನ ಹಾವಳಿ ಕಡಿಮೆ ಆಗಿಲ್ಲ, 2021-22ನೇ ಸಾಲಿನಲ್ಲಿ ದೇಶದಲ್ಲಿ ನಕಲಿ ನೋಟುಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರದಿಯಲ್ಲಿ ತಿಳಿಸಿದೆ.

ಆಂಧ್ರ ಮೂಲದ ಕಿಲಾಡಿ ಕಿಡ್ನಾಪರ್ಸ್ ಅರೆಸ್ಟ್: 3 ಕೋಟಿ ನಕಲಿ ನೋಟು ವಶ ಆಂಧ್ರ ಮೂಲದ ಕಿಲಾಡಿ ಕಿಡ್ನಾಪರ್ಸ್ ಅರೆಸ್ಟ್: 3 ಕೋಟಿ ನಕಲಿ ನೋಟು ವಶ

ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, 2020-21ಕ್ಕೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ಎಲ್ಲಾ ಮೌಲ್ಯದ ನಕಲಿ ನೋಟುಗಳ ಬಳಕೆ ತೀವ್ರ ಹೆಚ್ಚಾಗಿದೆ. ವಿಶೇಷವಾಗಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಶೇ.101.9 ಮತ್ತು 2000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ. 54.16ರಷ್ಟು ಹೆಚ್ಚಾಗಿದೆ.

ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐ

ಮಾಚ್‌ 31, 2022ರಂತೆ ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಚಲಾವಣೆಯಲ್ಲಿ 500, 2000 ರೂ. ನೋಟುಗಳ ಪಾಲು ಒಟ್ಟು ಮೌಲ್ಯದ ಶೇ. 87.1ರಷ್ಟಿದೆ. ಮಾರ್ಚ್ 31ರಂದು ಇದರ ಪ್ರಮಾಣ ಶೇ. 85.7ರಷ್ಟಿತ್ತು. ಇದರಲ್ಲಿ 500 ರೂ. ಮುಖಬೆಲೆಯ ನೋಟುಗಳ ಪ್ರಮಾಣ ಶೇ. 34.9ರಷ್ಟಿದೆ. 2022, ಮಾರ್ಚ್‌ರ ವೇಳೆಗೆ 10 ರೂ. ಮುಖಬೆಲೆಯ ನೋಟಗಳು ಶೇ.21.3ರಷ್ಟಿದೆ ಎಂದು ವರದಿ ಮಾಡಿದೆ.

ಆರ್‌ಬಿಐ ನೀಡಿರುವ ವರದಿಯಲ್ಲಿ ಏನು?

ಆರ್‌ಬಿಐ ನೀಡಿರುವ ವರದಿಯಲ್ಲಿ ಏನು?

2020-21ನೇ ಸಾಲಿಗೆ ಹೋಲಿಸಿದರೆ 10, 20, 200, 500 ಮತ್ತು 2000 ರೂ. ಮುಖಬೆಲೆಯ ನೋಟುಗಳಲ್ಲಿ ಪತ್ತೆಯಾದ ನಕಲಿ ನೋಟುಗಳಲ್ಲಿ ಕ್ರಮವಾಗಿ ಶೇ.16.4, ಶೇ.16.5, ಶೇ.11.7, ಶೇ. 101.9 ಮತ್ತು ಶೇ. 54.6 ರಷ್ಟು ಏರಿಕೆಯಾಗಿದೆ. 50 ರೂ. 100 ರೂ. ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಕಡಿಮೆಯಾಗಿದೆ ಎಂದು ಆರ್‌ಬಿಐ ವರದಿ ಮಾಡಿದ್ದು. 50 ರೂ. ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಶೇ.28.7ರಷ್ಟು ಮತ್ತು 100 ರೂ. ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಶೇ. 16.7 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 10, 20, 200, 500 ರೂ. (ಹೊಸ ವಿನ್ಯಾಸ) ಮತ್ತು ನಕಲಿ ನೋಟುಗಳಲ್ಲಿ ಪತ್ತೆಯಾದ ನಕಲಿ ನೋಟುಗಳಲ್ಲಿ ಶೇ 16.4, 16.5, 11.7, 101.9 ಮತ್ತು 54.6 ಹೆಚ್ಚಳವಾಗಿದೆ. ಕ್ರಮವಾಗಿ 2000 ರೂ. 50 ಮತ್ತು 100 ರೂಪಾಯಿ ಮುಖಬೆಲೆಯಲ್ಲಿ ಪತ್ತೆಯಾದ ನಕಲಿ ನೋಟುಗಳು ಕ್ರಮವಾಗಿ 28.7 ಮತ್ತು 16.7 ರಷ್ಟು ಕಡಿಮೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಇಳಿಕೆಯಾಗುತ್ತಿದೆ 2000 ರೂ. ನೋಟುಗಳು

ಇಳಿಕೆಯಾಗುತ್ತಿದೆ 2000 ರೂ. ನೋಟುಗಳು

2000 ರೂ. ಮುಖಬೆಲೆಯ ನೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಒಟ್ಟು ನೋಟುಗಳ ಚಲಾವಣೆಯಲ್ಲಿ ಶೇ.1.6ರಷ್ಟು ಕಡಿಮೆಯಾಗಿದೆ.

ಮಾರ್ಚ್‌ 2020ರ ಅಂತ್ಯದ ವೇಳೆಗೆ 2000 ರೂ. ಮುಖಬೆಲೆಯ 274 ಕೋಟಿಗಳು ಚಲಾವಣೆಯಲ್ಲಿತ್ತು, ಇದು ಚಲಾವಣೆಯಲ್ಲಿ ಒಟ್ಟು ನೋಟುಗಳ ಶೇ.2.4 ನಷ್ಟಾಗಿತ್ತು. ಮಾರ್ಚ್‌ 2021ರ ವೇಳೆಗೆ ಇದು 245 ಕೋಟಿಗಳಿಗೆ ಇಳಿಯಿತು. 2021ರ ವೇಳೆಗೆ ಮತ್ತಷ್ಟು ಕಡಿಮೆಯಾದ ನೋಟುಗಳ ಸಂಖ್ಯೆ 214 ಕೋಟಿಗೆ ಕುಸಿದಿದೆ.

ವರದಿಯ ಪ್ರಕಾರ 2022 ಮಾರ್ಚ್‌ ಅಂತ್ಯಕ್ಕೆ 500ರೂ. ಮುಖಬೆಲೆಯ 4,554.68 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಕಳೆದ ವರ್ಷ 500 ರೂ. ನೋಟುಗಳ ಸಂಖ್ಯೆ 3,867.90 ಕೋಟಿಗಳಿಷ್ಟಿತ್ತು.

ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ

ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ

ನಕಲಿ ನೋಟುಗಳ ಹೆಚ್ಚಳದ ಕುರಿತು ವರದಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಅಪನಗದೀಕರಣದ ಏಕೈಕ ದುರದೃಷ್ಟಕರ ಯಶಸ್ಸು ಎಂದರೆ ಭಾರತದ ಆರ್ಥಿಕತೆಯನ್ನು ಮುಳುಗಿಸಿರುವುದು" ಎಂದಿದ್ದಾರೆ.

ಕಾಂಗ್ರೆಸ್ ಮೊದಲಿನಿಂದಲೂ ನೋಟು ಅಪನಗದೀಕರಣದ ಕ್ರಮವನ್ನು ಟೀಕಿಸುತ್ತಲೇ ಬಂದಿದ್ದು, ಈಗ ಆರ್‌ಬಿಐ ವರದಿಯಿಂದ ಕಾಂಗ್ರೆಸ್ ವಾದಕ್ಕೆ ಬಲ ಬಂದಂತಾಗಿದೆ.

ವಿರೋಧ ಪಕ್ಷಗಳ ಟೀಕೆ

ಟಿಎಂಸಿ ಮುಖಂಡ ಡೆರಿಕ್‌ ಒಬ್ರಿಯಾನ್‌ ಪ್ರತಿಕ್ರಿಯಿಸಿ "ನಮಸ್ಕಾರ ಪ್ರಧಾನಿ ಮೋದಿ, ಅಪನಗದೀಕರಣ, ನೆನಪಿದೆಯಲ್ಲವೇ? ಇಂಥ ಘೋಷಣೆ ವಿರುದ್ಧ ಮಮತಾ ತಕ್ಷಣವೇ ಏನು ಎಚ್ಚರಿಸಿದ್ದರು ಎಂದು ನೆನಪಿದೆಯಲ್ಲವೇ? ಆಗ ನೀವು ದೇಶದಲ್ಲಿನ ಎಲ್ಲಾ ನಕಲಿ ನೋಟುಗಳು ನಿರ್ಮೂಲನೆಯಾಗುತ್ತದೆ ಎಂದು ಹೇಗೆ ಭರವಸೆ ನೀಡಿದ್ದಿರಿ. ಆದರೆ ಇದೀಗ ಆರ್‌ಬಿಐನ ವರದಿಯೇ ದೇಶದಲ್ಲಿ ನಕಲಿ ನೋಟುಗಳಲ್ಲಿ ಭಾರೀ ಏರಿಕೆಯಾಗಿದೆ ಎನ್ನುತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ.

2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಘೋಷಿಸಿದಾಗ, ಕಪ್ಪುಹಣ ಮತ್ತು ನಕಲಿ ನೋಟುಗಳ ನಿರ್ಮೂಲನೆಯೇ ಮುಖ್ಯ ಉದ್ದೇಶ ಎಂದು ಹೇಳಿತ್ತು. ಆದರೆ ಅಪನಗದೀರಣದ 5 ವರ್ಷ ಮುಗಿದು 6ನೇ ವರ್ಷವಾದಾಗಲೂ ಸಮಸ್ಯೆ ಕಡಿಮೆಯಾಗಿಲ್ಲ. ನಕಲಿ ನೋಟುಗಳ ಪ್ರಮಾಣ ಹೆಚ್ಚಿರುವುದು, ಭ್ರಷ್ಟಾಚಾರ ಕಡಿಮೆಯಾಗದಿರುವುದು ಮತ್ತು ಪ್ರಧಾನಿ ಹೇಳಿದ್ದ ಕಪ್ಪುಹಣ ಪತ್ತೆಯಾಗದಿರುವುದು ಚಿಂತೆಗೆ ಕಾರಣವಾಗಿದೆ.

English summary
According to the recent report released by the Reserve Bank of India (RBI), counterfeit notes of all denominations increased in the financial year 2021-22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X