ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಅಂಗಡಿ, ಮಳಿಗೆಗೆ ಸಮಯ ನಿಗದಿಯಾಗಿದೆಯೆ?

|
Google Oneindia Kannada News

ನವದೆಹಲಿ, ಮೇ 17: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ನಾಲ್ಕನೇ ಹಂತದ ಲಾಕ್ಡೌನ್ ರಿಲೀಸ್ ಮಾರ್ಗಸೂಚಿ ಪ್ರಕಟವಾಗಬೇಕಿದೆ. ಆದರೆ, ಅಷ್ಟರಲ್ಲೇ ದುಷ್ಕರ್ಮಿಗಳು ಲಾಕ್ಡೌನ್ ನಿಂದ ಹೊರಬರುವ ರೋಡ್ ಮ್ಯಾಪ್ ಸಿದ್ಧವಿದೆ ಎಂದು ಅನಧಿಕೃತವಾಗಿ ಸುಳ್ಳು ಮಾರ್ಗ ಸೂಚಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ.

ಸದ್ಯ ಅಂಗಡಿ ಮುಂಗಟ್ಟು, ಮಳಿಗೆಗಳನ್ನುಯಾವಾಗ ತೆರೆಯಬೇಕು ಯಾವಾಗ ಮುಚ್ಚಬೇಕು ಎಂಬುದರ ಬಗ್ಗೆ ಆದೇಶ ನೀಡಲಾಗಿದೆ ಎಂಬ ತಪ್ಪು ಮಾಹಿತಿ ಹರಿದಾಡುತ್ತಿದೆ. ಇದೆಲ್ಲವನ್ನು ನಂಬಬೇಡಿ, ಸರ್ಕಾರ ಇನ್ನೂ ಯಾವುದೇ ಸಮಯ ನಿಗದಿ ಮಾಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

Fake News: 5 ಹಂತದ ಲಾಕ್ಡೌನ್ ರಿಲೀಸ್ ಮಾರ್ಗಸೂಚಿ?Fake News: 5 ಹಂತದ ಲಾಕ್ಡೌನ್ ರಿಲೀಸ್ ಮಾರ್ಗಸೂಚಿ?

ಲಾಕ್ ಡೌನ್ ಹೇಗೆ ನಿಭಾಯಿಸಬೇಕು, ಹಂತ ಹಂತವಾಗಿ ಹೇಗೆ ಜಾರಿಗೊಳಿಸಬೇಕು ಎಂಬ ನಿರ್ದೇಶನವನ್ನು ಕೇಂದ್ರ ಗೃಹ ಸಚಿವಾಲಯ ಮಾತ್ರ ನೀಡಲಿದ್ದು, ರಾಜ್ಯ ಸರ್ಕಾರಗಳು ಕೊಂಚ ಬದಲಾವಣೆ ಮಾಡಿಕೊಳ್ಳಬಹುದು.

 Fake: No timing set by government for shops to open and shut

ಏನು ಸುದ್ದಿ ಹಬ್ಬಿದೆ: ಮೊಬೈಲ್ ಶಾಪ್, ಹಾರ್ಡ್ ವೇರ್, ಸ್ಯಾನಿಟರಿ, ಇಸ್ತ್ರಿ ಅಂಗಡಿ, ಸೈಕಲ್ ಶಾಪ್, ಆಟೋಮೊಬೈಲ್, ಬೇಕರಿ, ಹಣ್ಣಿನ ಅಂಗಡಿ, ಗ್ಯಾರೇಜ್, ಫುಟ್ ವೇರ್, ಪುಸ್ತಕದಂಗಡಿ, ಆಭರಣ ಮಳಿಗೆ, ದರ್ಜಿ ಅಂಗಡಿ, ದಿನಸಿ ಅಂಗಡಿ ಎಲ್ಲವೂ ಬೆಳಗ್ಗೆ 7 ರಿಂದ 5;30 ರ ತನಕ ಮಾತ್ರ ಓಪನ್ ಮಾಡಬಹುದಾಗಿದೆ. ಈ ಪೈಕಿ ಬೇಕರಿ, ಹಣ್ಣು, ಜ್ಯೂಸ್ ಅಂಗಡಿ, ಮೆಡಿಕಲ್ ಶಾಪ್, ಆಟೋ ಗ್ಯಾರೇಜ್ ಮಾತ್ರ ಪ್ರತಿ ದಿನ ಓಪನ್ ಇರಬಹುದು. ಮಿಕ್ಕ ಅಂಗಡಿಗಳು ವಾರಕ್ಕೆ ಮೂರು ದಿನ ಮಾತ್ರ ತೆರೆಯಬೇಕು ಎಂದು ಸಂದೇಶ ಹಬ್ಬಿದೆ.
ಆದರೆ, ಈ ರೀತಿ ಯಾವುದೇ ಆದೇಶ ಸರ್ಕಾರ ಹೊರಡಿಸಿಲ್ಲ.

ನಾಲ್ಕು ಹಂತದ ಲಾಕ್ ಡೌನ್ ಕುರಿತ ವಾಟ್ಸಾಪ್ ಸಂದೇಶ, ಟ್ವೀಟ್, ಫೇಸ್ಬುಕ್ ಪೋಸ್ಟ್ ಬಂದರೆ ತಕ್ಷಣವೇ ಎಚ್ಚರವಾಗಿ, ಏಕೆಂದರೆ, ಲಾಕ್ ಡೌನ್ ಕುರಿತಂತೆ ಯಾವುದೇ ಆದೇಶ ಬಂದರೂ ಪ್ರಧಾನಿ ಮೋದಿ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಘೋಷಣೆ ನಿರೀಕ್ಷಿಸಬಹುದು. ಟ್ವಿಟ್ಟರ್ ನಲ್ಲಿ PIB Check ಖಾತೆಯಲ್ಲಿ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

ಲಾಕ್ಡೌನ್ ವಿಸ್ತರಣೆ ಕುರಿತಂತೆ ಯಾವುದೇ ವಾಟ್ಸಾಪ್ ಸಂದೇಶವನ್ನು ನಂಬಬೇಡಿ. ಮೇ 18ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ರೆಡ್ ಅಲರ್ಟ್ ಘೋಷಿಸಿರುವ ರಾಜ್ಯ, ಜಿಲ್ಲೆಗಳಲ್ಲಿ ಕಂಟೈನ್ಮೆಂಟ್ ವಾರ್ಡ್ ಗಳಲ್ಲಿ ಕಠಿಣ ಲಾಕ್ ಡೌನ್ ಮುಂದುವರೆಯುವುದು ನಿಶ್ಚಿತವಾಗಿದೆ.

English summary
A message is being circulated that speaks about the timings with regard to the various shop timings during the lockdown extension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X