ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: UPSC ಪರೀಕ್ಷೆ 2020 ರದ್ದಾಗಿರುವ ವರದಿ ನಂಬಬೇಡಿ!

|
Google Oneindia Kannada News

ನವದೆಹಲಿ, ಏಪ್ರಿಲ್ 17: ಕೊರೊನಾವೈರಸ್ ಸೋಂಕು ಹರಡದಂತೆ ಎರಡನೇ ಅವಧಿಗೆ ವಿಸ್ತರಣೆ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಶಾಲೆ, ಕಾಲೇಜು, ಪರೀಕ್ಷೆಗಳು ಆಯೋಜಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಈ ನಡುವೆ ಯುಪಿಎಸ್ ಸಿ ಪರೀಕ್ಷೆಗಳು ರದ್ದಾಗಿದೆ ಎಂದು ಮರಾಠಿ ಸುದ್ದಿ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಲಾಗಿದೆ.

ಕೊರೊನಾವೈರಸ್ ಪಿಡುಗಿನ ಕಾರಣ 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಯುಪಿಎಸ್ ಸಿ ರದ್ದುಗೊಳಿಸಲಾಗಿದೆ ಎಂದು ಸುದಿ ಪ್ರಸಾರ ಮಾಡಲಾಗಿತ್ತು. ಸುದ್ದಿ ತಿಳಿದು ಅನೇಕ ಅಭ್ಯರ್ಥಿಗಳು ಕಂಗಾಲಾಗಿ ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಹುಡುಕಾಟ ನಡೆಸತೊಡಗಿದರು. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದ್ದು, ಪರೀಕ್ಷೆ ರದ್ದು ಮಾಡುವ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಸರ್ಕಾರ ದೃಢಪಡಿಸಿದೆ.

ಏಪ್ರಿಲ್ 15ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳು, ನಿರ್ಬಂಧ, ಯಾವ ಸೇವೆಗೆ ವಿನಾಯಿತಿ ಬಗ್ಗೆ ನಿರ್ಧರಿಸಿ, ಕೇಂದ್ರ ಗೃಹ ಸಚಿವಾಲಯವು ಮಾರ್ಗ ಸೂಚಿಯನ್ನು ನೀಡಿದೆ.

Fake news: UPSC Exam 2020 has not been cancelled

ನಾಗರಿಕ ಸೇವಾ ಪರೀಕ್ಷೆಗಳಿಗೆ ಅನುಮತಿ ನೀಡಬೇಕಾದರೆ, ಅಭ್ಯರ್ಥಿಗಳು, ಆಯೋಜಕರು ಒಂದೆಡೆಯಿಂದ ಇನ್ನೊಂದೆಡೆಗೆ ತೆರಳ ಬೇಕಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಸದ್ಯಕ್ಕೆ ಪರೀಕ್ಷೆ ಆಯೋಜನೆ ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿದೆ.

ಮೇ 3,2020ರಂದು ಎರಡನೇ ಅವಧಿಯ ಲಾಕ್ಡೌನ್ ಮುಕ್ತಾಯವಾಗಲಿದ್ದು, ನಂತರ ಪರೀಕ್ಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ನಾಗರಿಕ ಸೇವಾ ಸಿವಿಎಲ್ ಪರೀಕ್ಷೆ 2020 (ಪೂರ್ವಭಾವಿ), ಇಂಜಿನಿಯರಿಂಗ್ ಸರ್ವೀಸ್ (ಮುಖ್ಯ), ಜಿಯೋಲಾಜಿಸ್ಟ್ ಪರೀಕ್ಷೆ (ಮುಖ್ಯ) ಬಿಟ್ಟು ಮಿಕ್ಕ ಪರೀಕ್ಷೆಗಳ ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.ಪರೀಕ್ಷೆಗಳ ವೇಳಾಪಟ್ಟಿ ಪರಿಷ್ಕರಣೆ, ಬದಲಿ ದಿನಾಂಕದ ಬಗ್ಗೆ ಯು ಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗುತ್ತದೆ. ಸಿಎಪಿಎಫ್ 2020ರ ಪರೀಕ್ಷೆ, ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ (ಎನ್ ಡಿಎ 1) ಪರೀಕ್ಷೆ ಮುಂದೂಡಲಾಗಿದೆ. ಎಲ್ಲಾ ಪರೀಕ್ಷೆ, ಸಂದರ್ಶನದ ಮಾಹಿತಿಯನ್ನು ಯು ಪಿಎಸ್ ಸಿ ವೆಬ್ ತಾಣದಲ್ಲಿ ಮಾತ್ರ ನೋಡಿ ಪರಿಶೀಲಿಸಿಕೊಳ್ಳಿ ಎಂದು ಸರ್ಕಾರ ಹೇಳಿದೆ.

English summary
A Marathi television channel has claimed that the examinations held by the UPSC Exam 2020 has been called off in the wake of the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X