ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೀಗೊಂದು ವಿಭಾಗ ಅಸ್ತಿತ್ವದಲ್ಲಿಯೇ ಇಲ್ಲ!

|
Google Oneindia Kannada News

ನವದೆಹಲಿ, ಆಗಸ್ಟ್ 17: ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಾಪ್ತಾಹಿಕ ಉದ್ಯೋಗ ನಿಯತಕಾಲಿಕೆ 'ದಿ ಎಂಪ್ಲಾಯಿಮೆಂಟ್ ನ್ಯೂಸ್' ಆಗಸ್ಟ್ 15-21ರ ಸಂಚಿಕೆಯಲ್ಲಿ ನಕಲಿ ಉದ್ಯೋಗ ಜಾಹೀರಾತು ಪ್ರಕಟವಾಗಿರುವುದು ಗಮನಕ್ಕೆ ಬಂದಿದೆ.

ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿನ ವಿಶೇಷ ರಕ್ಷಣಾ ಸಿಬ್ಬಂದಿ ವಿಭಾಗದ ಕಚೇರಿಯಲ್ಲಿ 500ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ ಎಂಬ ಉದ್ಯೋಗ ಜಾಹೀರಾತು ಪ್ರಕಟವಾಗಿತ್ತು. ಸತ್ಯಾಸತ್ಯತೆ ಪರಿಶೀಲಿಸುವ ಸರ್ಕಾರದ ವಿಭಾಗದ ಪಿಐಬಿ ಫ್ಯಾಕ್ಟ್ ಚೆಕ್, ಇದು ನಕಲಿ ನೇಮಕಾತಿ ಹೇಳಿಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ. ಎಂಪ್ಲಾಯಿಮೆಂಟ್ ನ್ಯೂಸ್ ಈ ನೋಟಿಸ್ ಅನ್ನು ಹಿಂದಕ್ಕೆ ಪಡೆದುಕೊಂಡಿದೆ.

ಫ್ಯಾಕ್ಟ್ ಚೆಕ್: ವೀರಾಂಜನೇಯ ದೇವಾಲಯದಲ್ಲಿ ಯೇಸು ಫೋಟೊ; ನಿಜವಾಗಿಯೂ ನಡೆದಿದ್ದೇನು?ಫ್ಯಾಕ್ಟ್ ಚೆಕ್: ವೀರಾಂಜನೇಯ ದೇವಾಲಯದಲ್ಲಿ ಯೇಸು ಫೋಟೊ; ನಿಜವಾಗಿಯೂ ನಡೆದಿದ್ದೇನು?

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ರಕ್ಷಣಾ ಸಿಬ್ಬಂದಿ ವಿಭಾಗದ ಕಚೇರಿ ಎಂಬ ಯಾವ ಘಟಕವೂ ಇಲ್ಲ ಎಂಬುದಾಗಿ ಪಿಐಬಿ ಸ್ಪಷ್ಟಪಡಿಸಿದೆ. ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಎಂಪ್ಲಾಯ್‌ಮೆಂಟ್ ನ್ಯೂಸ್ ಅಥವಾ ರೋಜ್‌ಗಾರ್ ಸಮಾಚಾರ್ ಪತ್ರಿಕೆಯು ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಪ್ರಸರಣ ಹೊಂದಿದೆ. ಇದು ಪತ್ರಿಕೆ ಮತ್ತು ಆನ್‌ಲೈನ್ ಎರಡರಲ್ಲಿಯೂ ಈ ಜಾಹೀರಾತು ಪ್ರಕಟಿಸಿತ್ತು. ಇದರಿಂದಾಗಿ ಸಾವಿರಾರು ಮಂದಿ ಉದ್ಯೋಗಾಕಾಂಕ್ಷಿಗಳು ಇದನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ.

Fake News Buster: No Organisation Do Exists As Office Of The Special Defence Personnel Forum

ಪ್ರವಾಹ ಪೀಡಿತ ರಾಜ್ಯಗಳ ನಕಲಿ ಚಿತ್ರಗಳನ್ನು ಶೇರ್ ಮಾಡಿದ ಪ್ರಿಯಾಂಕಾಪ್ರವಾಹ ಪೀಡಿತ ರಾಜ್ಯಗಳ ನಕಲಿ ಚಿತ್ರಗಳನ್ನು ಶೇರ್ ಮಾಡಿದ ಪ್ರಿಯಾಂಕಾ

ದಿ ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿ ಆಗಸ್ಟ್ 15-21ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ಇರುವಂತೆ ವಿಶೇಷ ರಕ್ಷಣಾ ಸಿಬ್ಬಂದಿ ವೇದಿಕೆ ಕಚೇರಿ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸಂಸ್ಥೆ ತಿಳಿಸಿದೆ. ಪತ್ರಿಕೆಯ ಮುಂಬರುವ ಸಂಚಿಕೆಯಲ್ಲಿ ಈ ಪ್ರಮಾದದ ಕುರಿತು ವಿವರಣೆ ನೀಡಲಾಗುವುದು. ಈ ತೊಂದರೆಗಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಪತ್ರಿಕೆ ತಿಳಿಸಿದೆ.

English summary
Fact Check: PIB said there is no such organisation do exist as office of the special defence personnel forum under ministry of corporate affiars as published in The Employment News.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X