ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಹಿಮಾಚಲಪ್ರದೇಶ ರೆಜಿಮೆಂಟ್ ಸ್ಥಾಪನೆಗೆ ಮುಂದಾದ ಸೇನೆ

|
Google Oneindia Kannada News

ನವದೆಹಲಿ, ಮೇ 27: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳುಸುದ್ದಿಗಳು ಹಬ್ಬುತ್ತಿವೆ. ಇತ್ತೀಚಿಗೆ ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಹಿಮಾಚಲ ಪ್ರದೇಶ ಕುರಿತಂತೆ ಸುಳ್ಳು ಸುದ್ದಿಯೊಂದು ಹಬ್ಬಿದೆ.

Recommended Video

ಕೇಂದ್ರ ಸರ್ಕಾರ ಬೋಗಸ್‌ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ | Oneindia Kannada

ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಹಿಮಾಚಲ ರೆಜಿಮೆಂಟ್ ಸ್ಥಾಪನೆಗೆ ಭಾರತೀಯ ಸೇನೆ ಮುಂದಾಗಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿದೆ.

Fake: ಗುಜರಾತ್‌ನಲ್ಲಿ ಲಾಕ್‌ಡೌನ್ ನಿಯಂತ್ರಿಸಲು ಭಾರತೀಯ ಸೇನೆ ಪ್ರವೇಶ?Fake: ಗುಜರಾತ್‌ನಲ್ಲಿ ಲಾಕ್‌ಡೌನ್ ನಿಯಂತ್ರಿಸಲು ಭಾರತೀಯ ಸೇನೆ ಪ್ರವೇಶ?

ಕಾಂಗ್ರಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಲಿರುವ ಪ್ರತ್ಯೇಕ ಹಿಮಾಚಲ ರೆಜಿಮೆಂಟ್ ಸ್ಥಾಪನೆ ಈಗ ಸೇನೆ ಕೈಗೊಳ್ಳುವ ಪ್ರಮುಖ ನಿರ್ಧಾರವಾಗಲಿದೆ ಎಂದು ಸುದ್ದಿಯನ್ನು ಹಬ್ಬಿಸಲಾಗಿದೆ. ಹಿಮಾಚಲಪ್ರದೇಶ ಬಾಯ್ಸ್ ಅಂಡ್ ಗರ್ಲ್ಸ್ ಎಂಬ ಗುಂಪಿನಲ್ಲಿ ಈ ಸುಳ್ಳು ಮಾಹಿತಿಯನ್ನು ಹಂಚಲಾಗಿದೆ.

Fake: Indian Army has no plans of creating a Himachal Regiment

ಈ ಸುದ್ದಿಯಲ್ಲಿ ಈ ಹೊಸ ರೆಜಿಮೆಂಟ್ ಗೆ ಜವಾನ್(ಯೋಧರು), ಜೆಸಿಒಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಠಾಣ್ ಕೋಟ್ ಮೂಲದವರಿಗೆ ಆದ್ಯತೆ ಎಂದು ತಿಳಿಸಲಾಗಿದೆ.

ಸತ್ಯಾಸತ್ಯತೆ: ಈ ರೀತಿ ಯಾವುದೇ ಹೊಸ ರೆಜಿಮೆಂಟ್ ಸ್ಥಾಪನೆಗೆ ಭಾರತೀಯ ಸೇನೆ ಮುಂದಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಯಾವುದೇ ರೀತಿ ಉದ್ವಿಗ್ನ ಪರಿಸ್ಥಿತಿಯಿಲ್ಲ, ನೇಮಕಾತಿ ಕುರಿತಂತೆ ಯಾವುದೇ ಸುದ್ದಿಯನ್ನು ನಂಬಬೇಡಿ ಎಂದು ಭಾರತೀಯ ಸೇನೆ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

Fake:ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಹಣ ನುಂಗಿದ ಕೊರೊನಾFake:ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಹಣ ನುಂಗಿದ ಕೊರೊನಾ

2019ರಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಹಿಮಾಚಲ ಪ್ರದೇಶಕ್ಕೆ ಪ್ರತ್ಯೇಕ ರೆಜಿಮೆಂಟ್ ಅವಶ್ಯವಿದೆ, ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ, ಯಾವುದೇ ರೆಜಿಮೆಂಟ್ ಸ್ಥಾಪನೆಯಾಗುತ್ತಿಲ್ಲ.

English summary
It is being claimed that the Army would be creating a Himachal regiment with its headquarters at Kangra. The Indian Army has said that this message is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X