• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಸರ್ಕಾರದಿಂದ ಲಾಕ್ಡೌನ್ ಫಂಡ್ 7. 5 ಸಾವಿರ ರು?

|

ಬೆಂಗಳೂರು, ಜೂನ್ 12: ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಮುಂದುವರೆದಿರುವುದರಿಂದ ಹಲವು ಕ್ಷೇತ್ರಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಆರ್ಥಿಕ ಪ್ಯಾಕೇಜ್ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೋಲುವಂತೆ ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

   Jonty Rhodes Shares Viral Video Of People Playing Cricket In Quarantine | Oneindia Kannada

   ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ 7,500 ರು ಸಿಗಲಿದೆ. ತಪ್ಪದೇ ಅರ್ಜಿ ತುಂಬಿ ಪಡೆದುಕೊಳ್ಳಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ನೆನಪಿರಬಹುದು. ಈಗ ಇದೇ ರೀತಿ ಮತ್ತೊಂದು ಸುಳ್ಳು ಸುದ್ದಿ ಹಬ್ಬಿದೆ. ಲಾಕ್ಡೌನ್ ಫಂಡ್ ಸ್ಥಾಪಿಸಲಾಗಿದೆ. ಎಲ್ಲರಿಗೂ ಇದರಿಂದ ಹಣ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.

   ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!

   ವಾಟ್ಸಾಪ್ ನಲ್ಲಿ ಹರಡುತ್ತಿರುವ ಸುದ್ದಿಯ ಪ್ರಕಾರ, 'FG (federal government)' ಲಾಕ್ಡೌನ್ ಪರಿಹಾರ ನಿಧಿಯ ರೂಪದಲ್ಲಿ ಎಲ್ಲರಿಗೂ 7,500 ರು ನೀಡುತ್ತಿದೆ. ಈ ಸೌಲಭ್ಯ ಪಡೆಯಲು ಈ ಸಂದೇಶದ ಜೊತೆಗಿರುವ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳಲಾಗುತ್ತದೆ. ಈ ಸಂದೇಶ ನಂಬಿ ಆ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಮಾಹಿತಿಯನ್ನು ಕೇಳಲಾಗುತ್ತದೆ. ಮಾಹಿತಿ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತದೆ. ಇಲ್ಲಿವೇ ಬೇರೊಂದು ವಂಚನೆ ವೆಬ್ ತಾಣಕ್ಕೆ ಕರೆದೊಯ್ಯುತ್ತದೆ.

   ಇದು ಒಂದು ಬಾರಿ ಸಿಗುವ ಸೌಲಭ್ಯ ತ್ವರಿತವಾಗಿ ಪಡೆದುಕೊಳ್ಳಿ ಎಂದು ಹೇಳಲಾಗುತ್ತದೆ. ನಿಮ್ಮ ಹೆಸರು, ಫೋನ್ ನಂಬರ್,ವಿಳಾಸ ಹಾಗೂ ಪಿನ್ ನಂಬರ್ ಕೇಳಲಾಗುತ್ತದೆ. ಲಿಂಕ್ ಬಳಸಿ ಹೊಸ ವೆಬ್ ತಾಣದಲ್ಲಿ ಫೇಸ್ಬುಕ್ ಕಾಮೆಂಟ್ ರೀತಿ ಬಾಕ್ಸ್ ಕಂಡು ಬರಲಿದ್ದು, ಅಲ್ಲಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ, ತಮಗೆ ಹಣ ಸಂದಾಯವಾಗಿದೆ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

   Fact Check: ಲಾಕ್ಡೌನ್ ಫಂಡ್, ಸರ್ಕಾರದಿಂದ 5 ಸಾವಿರ ರು?

   ಆದರೆ, ಇದೊಂದು ಸುಳ್ಳು ಸುದ್ದಿಯಾಗಿದೆ. ಕೇಂದ್ರ ಸರ್ಕಾರವು ಯಾವುದೇ ರೀತಿ ಹಣವನ್ನು ನೀಡುತ್ತಿಲ್ಲ, ಯಾವುದೇ ರೀತಿ ಹಣ ರವಾನೆ, ಹಣ ಪಾವತಿ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ಪಿಐಬಿ ಸ್ಪಷ್ಟನೆ ನೀಡಿದೆ.

   READ IN ENGLISH

   English summary
   A WhatsApp forward that promises of free Rs 7,500 in relief funds from the government as a limited time offer is fake.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more